Film News

ಮಾ.7 ರಂದು ಕಿಚ್ಚನ ಅಭಿಮಾನಿಗಳಿಗೆ ಸಿಗಲಿದೆ ಗುಡ್‌ನ್ಯೂಸ್!

ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಶೀಘ್ರವೇ ಗುಡ್‌ನ್ಯೂಸ್ ಸಿಗಲಿದೆ. ಮಾ.7 ರಂದು ಕಿಚ್ಚನ ಅಭಿಮಾನಿಗಳಿಗೆ ಬಿಗ್ ನ್ಯೂಸ್ ಲಭ್ಯವಾಗಲಿದೆ ಎನ್ನಲಾಗಿದೆ.

ಸದ್ಯ ಕಿಚ್ಚ ಸುದೀಪ್ ಬಿಗ್‌ಬಾಸ್ ಸೀಸನ್ 8 ರಲ್ಲಿ ಬ್ಯುಸಿಯಾಗಿದ್ದು, ಇದರ ಜೊತೆಗೆ ಸಿನೆಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಈಗಾಗಲೇ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರಗಳಾದ ವಿಕ್ರಾಂತ್ ರೋಣ ಹಾಗೂ ಕೋಟಿಗೊಬ್ಬ-೩ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಗಾಗಿ ಕಾದುನೋಡುತ್ತಿದ್ದಾರೆ. ಈ ನಡುವೆ ಮಾರ್ಚ್ 7 ರಂದು ಕೋಟಿಗೊಬ್ಬ-3 ಚಿತ್ರದಿಂದ ಒಂದು ಬಿಗ್ ಅಪ್ಡೇಟ್ ದೊರೆಯಲಿದೆ ಎನ್ನಲಾಗಿದೆ.

ಕೋಟಿಗೊಬ್ಬ ಮೇಕಿಂಗ್ ವಿಡಿಯೋ ರಿಲೀಸ್ ಮಾಡುವಂತೆ ಅಭಿಮಾನಿಗಳಿಂದ ಬೇಡಿಕೆ ಬಂದಿತ್ತು ಎನ್ನಲಾಗಿದ್ದು, ಅದರಂತೆ ಅಭಿಮಾನಿಗಳ ಕೋರಿಗೆ ಈಡೆರಿಸಲು ಕೋಟಿಗೊಬ್ಬ-3 ಚಿತ್ರದ ಮೇಕಿಂಗ್ ವಿಡಿಯೋ ಇದೇ ಮಾರ್ಚ್ 7 ರಂದು ಬೆಳಿಗ್ಗೆ 11 ಗಂಟೆಗೆ ಆನಂದ್ ಆಡಿಯೋ ಯೂಟೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ.

ಇನ್ನೂ ಈ ಸಿನೆಮಾ ಶಿವ ಕಾರ್ತಿಕ್ ನಿರ್ದೇಶನದಲ್ಲಿ ತಯಾರಾಗಿದ್ದು, ಸೂರಪ್ಪ ಬಾಬು ನಿರ್ಮಾಣ ಮಾಡಿದ್ದಾರೆ. ಮಡೋನ್ನಾ ಸೆಬಾಸ್ಟಿನ್ ಸುದೀಪ್‌ಗೆ ನಾಯಕಿಯಾಗಿ ಬಣ್ಣ ಹಚ್ಚಿದ್ದು, ರವಿಶಂಕರ್, ಶ್ರದ್ದಾದಾಸ್ ಸೇರಿದಂತೆ ಖ್ಯಾತ ಕಲಾವಿದರ ನಟಿಸಿದ್ದಾರೆ.

 

Trending

To Top