Film News

ಸಂಕ್ರಾಂತಿ ಹಬ್ಬದಂದು ಕಬ್ಜ ಚಿತ್ರದ ಬಿಗ್ ಅಪ್ ಡೇಟ್!

ಬೆಂಗಳೂರು: ಭಾರತ ಸಿನಿರಂಗದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸುತ್ತಿರುವ ಕಬ್ಜ ಚಿತ್ರತಂಡದಿಂದ ಜ.೧೪ ಸಂಕ್ರಾಂತಿ ಹಬ್ಬದಂದು ಬಿಗ್ ಅಪ್ ಡೇಟ್ ಬಹಿರಂಗಗೊಳ್ಳಲಿದೆಯಂತೆ. ಆದರೆ ಆ ಅಪ್ ಡೇಟ್ ಏನು ಎಂಬುದು ನಿಗೂಡವಾಗಿದೆ.

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಆರ್.ಚಂದ್ರ ನಿರ್ದೇಶಕತ್ವದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸುತ್ತಿರುವ ಕಬ್ಜ ಚಿತ್ರ ಈಗಾಗಲೇ ಭಾರಿ ಮಟ್ಟದಲ್ಲಿ ಸುದ್ದಿಯಲ್ಲಿದೆ. ಕೆಜಿಎಫ್ ಚಿತ್ರದ ನಂತರ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸುವ ಚಿತ್ರ ಇದಾಗಲಿದೆ ಎಂಬ ಮಾತುಗಳು ಸಹ ಚಂದನವನದಲ್ಲಿ ಹರಿದಾಡುತ್ತಿದೆ. ಜೊತೆಗೆ ಈ ಚಿತ್ರ ಕನ್ನಡ ಸೇರಿದಂತೆ ದೇಶದ 7 ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

ಕನ್ನಡ ಚಿತ್ರರಂಗದ ಅತಿ ದೊಡ್ಡ ಬಜೆಟ್ ಚಿತ್ರ ಇದಾಗಿದ್ದು, ಪೋಸ್ಟರ್ ಗಳ ಮೂಲಕವೇ ಸಿನಿಪ್ರಿಯರನ್ನು ದಂಗಾಗುವಂತೆ ಮಾಡಿದೆ. ಇದೀಗ ಜನವರಿ ೧೪ ಬೆಳಿಗ್ಗೆ ೧೦ ಗಂಟೆಗೆ ಒಂದು ಸರ್ಪ್ರೈಸ್ ನೀಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಆದರೆ ಆ ಸರ್ಪ್ರೈಸ್ ಏನಂತ ಬಹಿರಂಗಗೊಳಿಸಿಲ್ಲ. ಇನ್ನೂ ಈ ಚಿತ್ರ 1947 ರಲ್ಲಿ ನಡೆದ ಕಥೆಯೊಂದನ್ನು ಆಧರಿಸಿ ನಿರ್ಮಾಣವಾಗುತ್ತಿದೆ ಎಂದು ತಿಳಿದುಬಂದಿದ್ದು, ಪೂರ್ಣ ಪ್ರಮಾಣದ ರೌಡಿಸಂ ನಿಂದ ಕೂಡಿದ ಚಿತ್ರವಾಗಿದ್ದು, ಈ ಹಿಂದಿನ ಎಲ್ಲಾ ರೌಡಿಸಂ ಚಿತ್ರಗಳನ್ನು ಮೀರಿದ ಕಥೆ ಇದಾಗಲಿದೆ ಎನ್ನಲಾಗುತ್ತಿದೆ.

ಈಗಾಗಲೇ ಕಬ್ಜ ಚಿತ್ರದ ಪೋಸ್ಟರ್, ಮೋಷನ್ ಪೋಸ್ಟರ್ ಗಳು ಬಿಡುಗಡೆಯಾಗಿದ್ದು, ಚಿತ್ರ ಮೇಕಿಂಗ್ ವಿಷಯದಲ್ಲೂ ಸಹ ಟ್ರೆಂಡಿಂಗ್ ಕ್ರಿಯೇಟ್ ಮಾಡಿದ್ದು, ನಿರ್ದೇಶಕ ಆರ್.ಚಂದ್ರು ಸಿನಿ ವೃತ್ತಿಯಲ್ಲಿ ಬಿಗ್ ಬ್ರೇಕಿಂಗ್ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇನ್ನೂ ಈ ಚಿತ್ರದಲ್ಲಿ ನಾಯಕಿ ಸೇರಿದಂತೆ ನಟಿಸುವಂತಹ ಕಲಾವಿದರ್‍ಯಾರು ಎಂಬುದು ಬಹಿರಂಗವಾಗಿಲ್ಲ.

Trending

To Top