Uncategorized

ಆದಿಪುರುಷ್ ಚಿತ್ರದಿಂದ ಊಹಿಸದ ಅಪ್ಡೇಟ್ ರಿವೀಲ್!

ಮುಂಬೈ: ಬಿಗ್ ಬಜೆಟ್ ಚಿತ್ರವಾದ ನಟ ಬಾಹುಬಲಿ ಪ್ರಭಾಸ್ ಅಭಿನಯದ ಆದಿಪುರುಷ್ ಚಿತ್ರತಂಡದಿಂದ ಹೊಸ ಅಪ್ಡೇಟ್ ಒಂದು ಅನೌನ್ಸ್ ಮಾಡುವುದಾಗಿ ಚಿತ್ರತಂಡ ತಿಳಿಸಿದ್ದು, ಅದರಂತೆ ಈ ಚಿತ್ರಕ್ಕೆ ಸಂಬಂಧಿಸಿದಂತೆ ಮುಖ್ಯವಾದ ಅಪ್ಡೇಟ್ ಒಂದನ್ನು ನಿರ್ದೇಶಕ ಓಂ ರಾವತ್ ಟ್ವಿಟರ್ ನಲ್ಲಿ ರಿವೀಲ್ ಮಾಡಿದ್ದಾರೆ.

ತೆಲುಗು ಸಿನಿರಂಗದಲ್ಲಿ ಟಾಪ್ ಹಿರೋಗಳಲ್ಲಿ ಒಬ್ಬರಾದ ರೆಬೆಲ್ ಸ್ಟಾರ್ ಪ್ರಭಾಸ್ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಬಂದ ಬಾಹುಬಲಿ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಹಿರೋ ಆದರು. ನಂತರ ಮೂರು ಪಾನ್ ಇಂಡಿಯಾ ಚಿತ್ರಗಳಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಈ ಮೂರು ಚಿತ್ರಗಳೂ ಸಹ ಬಿಗ್ ಬಜೆಟ್ ಚಿತ್ರಗಳಾಗಿವೆ. ಇದರ ಭಾಗವಾಗಿ ಬಾಲಿವುಡ್ ನಲ್ಲಿ ಆದಿಪುರುಷ್ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಆದಿಪುರುಷ್ ಚಿತ್ರತಂಡ ತಿಳಿಸಿದಂತೆ Feb 19 ಮಂಗಳವಾರ ಬೆಳಿಗ್ಗೆ 7.11 ಗಂಟೆಗೆ ಅಪ್ಡೇಟ್ ಒಂದನ್ನು ಬಹಿರಂಗಗೊಳಿಸಿದ್ದು, ನಿರ್ದೇಶಕರೊಂದಿಗೆ ವಿ.ಎಫ್.ಎಕ್ಸ್ ಟೀಮ್ ನ ಪೊಟೋ ಶೇರ್ ಮಾಡಿ, ಆದಿಪುರುಷ್ ಪ್ರಪಂಚ ಸೃಷ್ಟಿಮಾಡಲು ಮೋಷನ್ ವರ್ಕ್ ಪ್ರಾರಂಭ ಆಗಿದೆ ಎಂದು ಬರೆದುಕೊಂಡಿದ್ದಾರೆ. ಇನ್ನೂ ಈ ಮಾಹಿತಿ ತಿಳಿದು ಪ್ರಭಾಸ್ ಅಭಿಮಾನಿಗಳು ಪುಲ್ ಖುಷ್ ಆಗಿದ್ದಾರೆ.

ಇನ್ನೂ ಆದಿಪುರುಷ್ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಪ್ರಭಾಸ್, ರಾವಣನ ಪಾತ್ರದಲ್ಲಿ ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್, ಸೀತೆಯ ಪಾತ್ರದಲ್ಲಿ ಬಾಲಿವುಡ್ ನ ಟಾಲ್ ಬ್ಯೂಟಿ ಕೃತಿ ಸನನ್ ನಟಿಸಲಿದ್ದಾರೆ ಎನ್ನಲಾಗಿದೆ. ಇನ್ನೂ ಲಕ್ಷಣನ ಪಾತ್ರದಲ್ಲಿ ಸನ್ನಿ ಸಿಂಗ್ ಎಂಬ ಯುವ ನಟ ಅಭಿನಯಿಸಲಿದ್ದಾನೆ ಎನ್ನಲಾಗಿದೆ.

ಈಗಾಗಲೇ ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಅಶ್ವಿನಿದತ್ ನಿರ್ಮಾಣದ ಚಿತ್ರವೊಂದರಲ್ಲಿ ಹಾಗೂ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ರವರ ಸಲಾರ್ ಚಿತ್ರದಲ್ಲೂ ಸಹ ಪ್ರಭಾಸ್ ನಟಿಸಲಿದ್ದು, ಇತ್ತೀಚಿಗಷ್ಟೆ ಹೈದರಾಬಾದ್ ನಲ್ಲಿ ಈ ಚಿತ್ರದ ಮೂಹೂರ್ತ ಸಹ ನೆರವೇರಿದೆ.

Trending

To Top