Film News

ಆಚಾರ್ಯ ಚಿತ್ರದ ಭಾರಿ ಮಟ್ಟದಲ್ಲಿ ನಿರ್ಮಾಣವಾದ ಸೆಟ್: ಅಭಿನಂದಿಸಿದ ಮೆಗಾಸ್ಟಾರ್

ಹೈದರಾಬಾದ್: ಇಡೀ ಭಾರತ ಸಿನಿರಂಗದಲ್ಲಿ ಹಿಂದೆದೂ ನಿರ್ಮಿಸದಂತಹ ಸೆಟ್ ಅನ್ನು ಮೆಗಾಸ್ಟಾರ್ ಅಭಿನಯದ ಆಚಾರ್ಯ ಚಿತ್ರದಲ್ಲಿ ನಿರ್ಮಿಸಿದ್ದು, ಮೆಗಾಸ್ಟಾರ್ ಚಿರಂಜೀವಿ ಸೆಟ್ ನಿರ್ಮಿಸಿದ ಕಲಾವಿದರನ್ನು ಅಭಿನಂದಿಸಿದ್ದಾರೆ.

ಈ ಹಿಂದೆ ಬಾಹುಬಲಿ ಸಿನೆಮಾದಲ್ಲಿ ನಿರ್ಮಿಸಿದ್ದ ಭಾರಿ ಮಟ್ಟದ ಸೆಟ್ ಗಳನ್ನು ನೋಡಿ ದಂಗಾಗಿದ್ದ ಪ್ರೇಕ್ಷಕರು ಇದೀಗ ಅದ್ಕಕಿಂತಲೂ ದೊಡ್ಡದಾದ ಭಾರಿ ಬಜೆಟ್ ನ ಸೆಟ್ ಆಚಾರ್ಯ ಸಿನೆಮಾಕ್ಕಾಗಿ ನಿರ್ಮಾಣವಾಗುತ್ತಿದ್ದೆ. ಇಂತಹ ಸೆಟ್ ಇಲ್ಲಿಯವರೆಗೂ ಭಾರತ ಸಿನಿರಂಗದಲ್ಲಿ ನಿರ್ಮಿಸಿದ ದೊಡ್ಡ ಸಿನೆಮಾ ಸೆಟ್ ಗಳಲ್ಲಿ ಪೈಕೆ ದಾಖಲೆ ಹೆಸರು ಪಡೆದುಕೊಂಡಿದೆ.

ಆಚಾರ್ಯ ಸಿನೆಮಾದಲ್ಲಿ ದೇವಸ್ಥಾನದ ಸೆಟ್ ಅನ್ನು ಹೈದರಾಬಾದ್ ನ ಹೊರವಲಯದಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಿದ್ದಾರೆ.  ದೇವಸ್ಥಾನದ ಮುಂಭಾದ ದೇವಸ್ಥಾನದ ಗಾಳಿ ಗೋಪುರವನ್ನು ಸಹ ನಿರ್ಮಾಣ ಮಾಡಿದ್ದು, ಈ ಕುರಿತು ವಿಡಿಯೋ ಒಂದನ್ನು ಆಚಾರ್ಯ ಚಿತ್ರದ ನಾಯಕ ಮೆಗಾಸ್ಟಾರ್ ಚಿರಂಜೀವಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಚಿರು ಹಂಚಿಕೊಂಡಿರುವ ವಿಡಿಯೋದಲ್ಲಿ ಸೆಟ್ ನಿರ್ಮಾಣ ಮಾಡಿದ ಕಲಾವಿದರನ್ನು ಅಭಿನಂದಿಸಿದ್ದಾರೆ. ಗಾಳಿ ಗೋಪುರ ನಿಜವಾದ ಗೋಪುರದಂತಿದ್ದು, ಅದ್ಬುತವಾಗಿ ನಿರ್ಮಿಸಲಾಗಿದೆ. ಗೋಪುರದಲ್ಲಿ ದೇವತೆಗಳು, ಪ್ರಾಣಿಗಳು ಸೇರಿದಂತೆ ಪ್ರತಿಯೊಂದು ಸಣ್ಣ ಕಲಾಕೃತಿಗಳ ಮೇಲೂ ವಿಶೇಷ ಕಾಳಜಿ ವಹಿಸಿ ಸೆಟ್ ನಿರ್ಮಿಸಲಾಗಿದೆ ಎನ್ನಲಾಗಿದೆ.

ಇನ್ನೂ ಸೆಟ್ ನಿರ್ಮಿಸಿದ ಕಲಾ ನಿರ್ದೇಶಕ ಸುರೇಶ್ ಸೆಲ್ವರಾಜನ್, ನಿರ್ದೇಶಕ ಕೊರಟಾಲ ಶೀವ ಹಾಗೂ ನಿರ್ಮಾಪಕ ರಾಮ್ ಚರಣ್ ಹಾಗೂ ನಿರಂಜನ್ ರೆಡ್ಡಿರವರ ಈ ಶ್ರಮವನ್ನು ಚಿರಂಜೀವಿ ಮನಸಾರೆ ಅಭಿನಂದಿಸಿ ಹೊಗಳಿದ್ದಾರೆ.

Trending

To Top