ವಿಚ್ಚೇದನಕ್ಕೆ ಮುಂದಾದರೇ ಬಿಚ್ಚಗಾಡು ಖ್ಯಾತಿಯ ವಿಜಯ್ ಆಂಟೋನಿ, ಕಾರಣವಾದರೂ ಏನು?

ತೆಲುಗು ಹಾಗೂ ತಮಿಳು ಸಿನಿರಸಿಕರಿಗೆ ಬಿಚ್ಚಗಾಡು ಸಿನೆಮಾ ಇಂದಿಗೂ ಸಹ ತುಂಬಾನೆ ಇಷ್ಟವಾದ ಸಿನೆಮಾ ಎಂದು ಹೇಳಬಹುದು. ಈ ಸಿನೆಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡ ವಿಜಯ್ ಆಂಟೋನಿಗೆ ಒಳ್ಳೆಯ ಫೇಮ್ ತಂದುಕೊಟ್ಟಿತ್ತು. ಈ ಸಿನೆಮಾಗಿಂತಲೂ ಮುಂಚೆ ವಿಜಯ್ ಅನೇಕ ಸಿನೆಮಾಗಳಲ್ಲಿ ಕಾಣಿಸಿಕೊಂಡರೂ ಸಹ ಆತ ಎಲ್ಲರ ಮನದಲ್ಲಿ ಸ್ಥಾನ ಸಂಪಾದಿಸಿಕೊಂಡಿದ್ದು, ಬಿಚ್ಚಗಾಡು ಸಿನೆಮಾದ ಮೂಲಕ ಎಂದರೇ ತಪ್ಪಾಗಲಾರದು. ಇದೀಗ ವಿಜಯ್ ಆಂಟೋನಿ ಬಗ್ಗೆ ಒಂದು ದೊಡ್ಡ ಬ್ರೇಕಿಂಗ್ ಸುದ್ದಿ ಹರಿದಾಡುತ್ತಿದೆ.

ನಟ ವಿಜಯ್ ಆಂಟೋನಿ ಬಿಚ್ಚಗಾಡು ಸಿನೆಮಾದ ಮೂಲಕ ಫೇಮ್ ದಕ್ಕಿಸಿಕೊಂಡ ನಟನಾಗಿದ್ದಾನೆ. ಸೈಲೆಂಟ್ ಆಗಿ ಬಿಚ್ಚಗಾಡು ಸಿನೆಮಾದ ಮೂಲಕ ಸೆನ್ಷೇಷನಲ್ ಹಿಟ್ ತಮ್ಮ ತೆಕ್ಕೆಗೆ ಹಾಕಿಕೊಂಡರು. ಈ ಸಿನೆಮಾದ ಬಳಿಕ ಒಳ್ಳೆಯ ಕ್ರೇಜ್ ಅನ್ನು ಸಹ ವಿಜಯ್ ಸಂಪಾದಿಸಿಕೊಂಡರು. ಬಿಚ್ಚಗಾಡು ಸಿನೆಮಾದ ಬಳಿಕವೇ ಆತನ ಸಿನೆಮಾಗಳಿಗೂ ಸಹ ಕ್ರೇಜ್ ಬಂತು. ಆದರೆ ಕೆಲವೊಂದು ಕಳಪೆ ಸಿನೆಮಾಗಳ ಕಾರಣದಿಂದಾಗಿ ಆತನ ಪ್ರಭಾವ ಸಹ ಕಡಿಮೆಯಾಗಿದೆ. ಆದರೂ ಸಹ ವಿಜಯ್ ಮಾತ್ರ ಹಿಂದೆ ಸರಿಯದೇ ವಿಭಿನ್ನವಾದ ಸಿನೆಮಾಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇದೀಗ ವಿಜಯ್ ಆಂಟೋನಿ ಗೆ ಸಂಬಂಧಿಸಿದ ವೈಯುಕ್ತಿಕ ವಿಚಾರವೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ನಟ ವಿಜಯ್ ಆಂಟೋನಿ ಹಾಗೂ ಫಾತಿಮಾ ಜೋಡಿಗೆ ಮದುವೆಯಾಗಿ ಅನೇಕ ವರ್ಷಗಳು ಕಳೆದಿದೆ. ಆದರೆ ಕೆಲವು ದಿನಗಳಿಂದ ಇಬ್ಬರ ನಡುವೆ ಮನಸ್ಥಾಪಗಳು ಏರ್ಪಟ್ಟಿದ್ದು, ಇಬ್ಬರೂ ಬೇರೆಯಾಗಿದ್ದಾರೆ ಎನ್ನಲಾಗುತ್ತಿತ್ತು. ಇದೀಗ ವಿಜಯ್ ಮಾಡಿದ ಟ್ವೀಟ್ ಇದಕ್ಕೆ ಮತಷ್ಟು ಪುಷ್ಟಿ ನೀಡಿದಂತಿದೆ. ಟ್ವಿಟರ್‍ ನಲ್ಲಿ ವಿಜಯ್ ಮಾಡಿರುವ ಪೋಸ್ಟ್ ನಂತೆ ನಿಮ್ಮ ಕುಟುಂಬದಲ್ಲಿನ ಸಮಸ್ಯೆಯನ್ನು ನೀವೆ ಪರಿಷ್ಕಾರ ಮಾಡಿಕೊಳ್ಳಬೇಕು. ನೀವಿಬ್ಬರು ಬಗೆಹರಿಸಿಕೊಳ್ಳಲು ಸಾಧ್ಯವಾಗದೇ ಇದ್ದರೇ ಮನೆ ಬಿಟ್ಟು ಬೇರೆಯಾಗಿ ಜೀವನ ಸಾಗಿಸಬೇಕು. ಆದರೆ ನಿಮ್ಮ ಮಧ್ಯೆ ಮೂರನೇ ವ್ಯಕ್ತಿಗೆ ಅವಕಾಶ ನೀಡಬೇಡಿ ಏಕೆಂದರೇ ಆತ ನಿಮ್ಮ ಸಮಸ್ಯೆಯನ್ನು ಬಗೆಹರಿಸುವುದಿಲ್ಲ. ಬದಲಿಗೆ ನಿಮ್ಮ ವಿನಾಶವನ್ನು ನೋಡುತ್ತಾ ಆನಂದಿಸುತ್ತಾರೆ ಎಂದು ಪೋಸ್ಟ್ ಮಾಡಿದ್ದರು. ಈ ಕಾರಣದಿಂದ ವಿಜಯ್ ಕುಟುಂಬದಲ್ಲಿ ಏನು ಸರಿಯಲ್ಲಿ ಎಂದು ಹೇಳಲಾಗುತ್ತಿದೆ.

ಕಳೆದ 2006 ರಲ್ಲಿ ವಿಜಯ್ ಆಂಟೋನಿ ಹಾಗೂ ಫಾತಿಮಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇದೀಗ ಸುಮಾರು ದಿನಗಳಿಂದ ಫಾತಿಮಾ ಜೊತೆಗೆ ಉಂಟಾದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಈ ಕಾರಣದಿಂದಲೇ ವಿಜಯ್ ಆ ಪೋಸ್ಟ್ ಮಾಡಿದ್ದಾರೆಯೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಜೊತೆಗೆ ಅವರಿಬ್ಬರೂ ವಿಚ್ಚೇದನಕ್ಕೆ ಮುಂದಾಗಲಿದ್ದಾರೆಯೇ ಎಂಬ ಅನುಮಾನ ಸಹ ಹುಟ್ಟಿಕೊಂಡಿದೆ. ಇನ್ನೂ ವಿಜಯ್ ಪೋಸ್ಟ್ ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Previous articleNBK107 ಸಿನೆಮಾದ ಸಾಂಗ್ ವಿಡಿಯೋ ವೈರಲ್, ಬಿಡುಗಡೆಗೂ ಮುಂಚೆಯೇ ಸಖತ್ ಸೌಂಡ್ ಮಾಡುತ್ತಿದೆ…!
Next articleಮೂಗಿಗೆ ಮಾಡಿಸಿಕೊಂಡ ಸರ್ಜರಿಯ ಬಗ್ಗೆ ಕ್ಲಾರಿಟಿ ಕೊಟ್ಟ ಶ್ರುತಿ ಹಾಸನ್…!