ಅಣ್ಣಾವ್ರು ಅಭಿನಯಿಸಿದ ಅತ್ಯದ್ಭುತ ಸಿನಿಮಾ ಕಸ್ತೂರಿ ನಿವಾಸ ಈ ಸಿನಿಮಾ ಇಂದಿಗೂ ಮರೆಯದ ಕ್ಲಾಸಿಕ್ ಸಿನಿಮಾ ಎಂದರೆ ತಪ್ಪಾಗುವುದಿಲ್ಲ ಎಲ್ಲಾ ಕಾಲಕ್ಕೂ ಸಲ್ಲುವ ಸಿನಿಮಾ ಅದು. ಕನ್ನಡ ಸಿನಿ ಪ್ರಿಯರ ನೆಚ್ಚಿನ ಸಿನಿಮಾ ಕಸ್ತೂರಿ ನಿವಾಸ ಈ ಸಿನಿಮಾದಲ್ಲಿ ಜಯಂತಿ ಅವರ ಮಗಳ ಪಾತ್ರದಲ್ಲಿ ನಿರ್ವಹಿಸಿದ್ದ ಪುಟ್ಟ ಬಾಲಕಿ ಸಿನಿಮಾದಲ್ಲಿ ರಾಜ ಕುಮಾರ್ ಅವರ ಜೊತೆ ಬಹಳ ಪ್ರೀತಿಯಿಂದ ಇರುತ್ತಿದ್ದಳು.
ಈ ಬಾಲಕಿಯ ನಿಜವಾದ ಹೆಸರು ಬಿಬಿ ರಾಣಿ ಇವರು ಕರ್ನಾಟಕದವರಲ್ಲ ಇವರು ಮೂಲತಃ ಉತ್ತರ ಭಾರತದ ಆಗ್ರಾದವರು. ಕರ್ನಾಟಕ ಮತ್ತು ತಮಿಳು ನಾಡಲ್ಲಿ ಆಗಿನ ಕಾಲದಲ್ಲಿ ಬಹು ಬೇಡಿಕೆಯ ಬಾಲ ನಟಿಯಾಗಿದ್ದರು. ಅನೇಕ ಸಿನಿಮಾಗಳಲ್ಲಿ ಬಾಲ ನಟಿಯಾಗಿ ನಟಿಸಿದ್ದರು ಆದರೆ ಕನ್ನಡದಲ್ಲಿ ಕಸ್ತೂರಿ ನಿವಾಸ ಹೊರತು ಪಡಿಸಿ ಇನ್ಯಾವುದೇ ಸಿನಿಮಾಗಳಲ್ಲಿ ಇವರು ನಟಿಸಿಲ್ಲ.
ಈಗ ಈ ಬಾಲ ನಟಿ ಬಹಳ ದೊಡ್ಡ ಉನ್ನತ ಹುದ್ದೆಯಲ್ಲಿದ್ದಾರೆ ಎಂದರೆ ನೀವು ನಂಬಲೇ ಬೇಕು. ಅಣ್ಣಾವ್ರ ಜೊತೆ ನಟಿಸಿ ಎಲ್ಲರ ಮನ ಗೆದ್ದಿದ್ದ ಮಗು ಉತ್ತರ ಖಂಡ್ ರಾಜ್ಯದ ರಾಜ್ಯಪಾಲೆ ಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಸಿನಿಮಾ ರಂಗ ಬಿಟ್ಟು ಸತತ ಪರಿಶ್ರಮ ಹಾಗೂ ಪ್ರಾಮಾಣಿಕತೆಯಿಂದ ಹುದ್ದೆಯನ್ನ ಅಲಂಕರಿಸಿ ಇತ್ತೀಚೆಗೆ ಅದಕ್ಕೆ ರಾಜೀನಾಮೆ ನೀಡಿದ್ದರು. ಬಿಬಿ ರಾಣಿ ಅವರೇ ಆಗಿನ ಕಸ್ತೂರಿ ನಿವಾಸ ಸಿನಿಮಾದ ಪುಟ್ಟ ಬಾಲಕಿ.