ಶವವಾಗಿ ಪತ್ತೆಯಾದ ಬೆಂಗಾಲಿ ಮೂಲದ ರೂಪದರ್ಶಿ ಬಿದಿಶಾ ಡೇ.!

ಬೆಂಗಾಲಿ ಮೂಲದ ನಟಿ ಹಾಗೂ ರೂಪದರ್ಶಿಯಾಗಿದ್ದ ಬಿದಿಶಾ ಡೇ ಮಂಜುದಾರ್‍ ಎಂಬ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿದ್ದ ಪ್ಲಾಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕೊಲ್ಕತ್ತಾದ ದಮ್ ಡಮ್ ಎಂಬಲ್ಲಿರುವ ಅವರ ಅಪಾರ್ಟ್‌ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಪಲ್ಲವಿ ಡೇ ಎಂಬ ಮಾಡೆಲ್ ಸಹ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸರಣಿ ಆತ್ಮಹತ್ಯೆಗಳಿಂದ ಎಲ್ಲರಲ್ಲೂ ದಿಗ್ಬ್ರಮೆ ಮೂಡಿದೆ.

ನಟಿ ಬಿದಿಶಾ ಡೇ ಮಜುಂದರ್‍ ರವರು ಕೋಲ್ಕತ್ತಾ ಅಪಾರ್ಟ್ ಮೆಂಟ್ ನಲ್ಲಿ ಕಳೆದ ಹಲವು ತಿಂಗಳುಗಳಿಂದ ವಾಸವಾಗಿದ್ದಾರೆ. ಇನ್ನೂ ಬಿದಿಶಾ ರಿಲೇಶನ್ ಶಿಪ್ ನಲ್ಲಿದ್ದರು ಎನ್ನಲಾಗಿದ್ದು, ಕೆಲವು ದಿನಗಳಿಂದ ಗೆಳೆಯನ ಜೊತೆ ಜಗಳ ಆಗುತ್ತಿದ್ದ ಹಿನ್ನೆಯಲ್ಲಿ ಖಿನ್ನತೆಗೆ ಒಳಗಾಗಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. 21 ವರ್ಷದ ಯುವ ನಟಿ ಹಾಗೂ ಮಾಡೆಲ್ ಮೇ.25 ರಂದು ಫ್ಲಾಟ್ ನಲ್ಲಿ ನೇಣಿಗೆ ಶರಣಾಗಿದ್ದಾರೆ. ಗೆಳೆಯನಿಂದ ದೂರವಾದ ಹಿನ್ನೆಲೆಯಲ್ಲಿ ಖಿನ್ನತೆಗೆ ಒಳಗಾದ ಈಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನೂ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ ಒಂದು ಸಹ ಸಿಕ್ಕಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದು, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಎರಡು ಮೂರು ದಿನಗಳಿಂದ ಬಿದಿಶಾ ಡೇ ಫ್ಲಾಟ್ ನಿಂದ ಹೊರಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಬಿದಿಶಾ ಡೇ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಫ್ಲಾಟ್ ಗೆ ಬಂದು ಬಾಗಿಲು ಒಡೆದು ನೋಡಿದ್ದಾರೆ. ಬಿದಿಶಾ ಡೇ ನೇಣು ಬಿಗಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗೆ ಶವವನ್ನು ಆಸ್ಪತ್ರೆಗೆ ಕಳುಹಿಸಿದ್ದು, ಸಾವಿಗೆ ಕಾರಣ ಏನು ಎಂಬುದರ ಬಗ್ಗೆ ಪತ್ತೆ ಹಚ್ಚಲಾಗುತ್ತಿದೆ ಎಂದು ತಿಳಿದುಬಂದಿದೆ. ಇನ್ನೂ ಬಿದಿಶಾ ಆತ್ಮಹತ್ಯೆ ಪತ್ರವನ್ನು ಬರೆದಿದ್ದು ನೇಣಿಗೆ ಶರಣಾಗಿದ್ದಾರೆ. ಆದರೆ ಬಿದಿಶಾ ಕುಟುಂಬಸ್ಥರು ಮಾತ್ರ ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಆತ್ಮಹತ್ಯೆ ಅಲ್ಲ ಕೊಲೆ ಎನ್ನುವ ಆರೋಪವನ್ನು ಸಹ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ.

ಇನ್ನೂ ಬಿದಿಶಾ ಮೊದಲು ಕಿರುತೆರೆಯಲ್ಲಿ ಕಾಣಿಸಿಕೊಂಡ ಬಳಿಕ ಸಿನಿಮಾ ರಂಗದಲ್ಲಿ ಗುರ್ತಿಸಿಕೊಳ್ಳುವ ತವಕದಲ್ಲಿದ್ದರು. ಆದರೆ ಸಿನೆಮಾ ರಂಗದಲ್ಲಿ ದೊಡ್ಡ ಹೆಸರು ಗಳಿಸಲು ಬಯಕೆಯನ್ನಿಟ್ಟುಕೊಂಡ ಈಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇನ್ನೂ ನಟಿಯ ನಿಧನಕ್ಕೆ ಕಿರುತೆರೆಯ ಕಲಾವಿದರು ಹಾಗೂ ಕುಟುಂಬಸ್ಥರು ತೀವ್ರ ಸಂತಾಪ ಸೂಚಿಸಿದ್ದಾರೆ.  ಇನ್ನೂ ಕಳೆದ ಮೇ.14 ರಂದು ಕೊಲ್ಕತ್ತಾದ ಬಾಡಿಗೆ ಮನೆಯಲ್ಲಿ ಮಾಡಲ್ ಪಲ್ಲವಿ ಡೇ ಸಹ ನೇಣಿಗೆ ಶರಣಾಗಿದ್ದರು. ಇದೀಗ ಬಿದಿಶಾ ಡೇ ಆತ್ಮಹತ್ಯೆ ಮಾಡಿಕೊಂಡಿದ್ದು ಹಲವರನ್ನು ದಿಗ್ಬ್ರಮೆಗೆ ಒಳಗಾಗುವಂತೆ ಮಾಡಿದೆ.

Previous articleಮಧ್ಯರಾತ್ರಿ ಕಾಲಿವುಡ್ ಸ್ಟಾರ್ ಸಿಂಬು ಮನೆಯ ಬಳಿ ಕಿರುತೆರೆ ನಟಿಯ ಹೈಡ್ರಾಮ…!
Next articleಸ್ಪೋರ್ಟ್ಸ್ ಬ್ರಾನಲ್ಲಿ ಗ್ಲಾಮರಸ್ ಲುಕ್ ಕೊಟ್ಟ ಜಾನ್ವಿ ಕಪೂರ್……