Film News

ರಿವೀಲ್ ಆಯ್ತು ಬೆಲ್ ಬಾಟಂ-2 ಪೋಸ್ಟರ್!

ಬೆಂಗಳೂರು: ಕಳೆದ 2009 ರಂದು ಸಿನಿಪ್ರೇಕ್ಷಕರನ್ನು ರಂಜಿಸಿದ್ದ ಬೆಲ್ ಬಾಟಂ ಚಿತ್ರ ಮುಂದುವರೆದ ಭಾಗವಾದ ಬೆಲ್ ಬಾಟಂ-2 ಟೈಟಲ್ ಪೋಸ್ಟರ್ ಬಿಡುಗಡೆಯಾಗಿದೆ. ಬೆಲ್ ಬಾಟಂ ಚಿತ್ರ ಭರ್ಜರಿಯಾಗಿ ಪ್ರದರ್ಶನವಾಗಿದ್ದು, ಈ ಬಾರಿ ಸಹ ಮೋಡಿ ಮಾಡಲಿದೆ ಎನ್ನಲಾಗುತ್ತಿದೆ.

ಬೆಲ್ ಬಾಟಂ ಚಿತ್ರದಲ್ಲಿ ರಿಷಭ್ ಶೆಟ್ಟಿ ಹಾಗೂ ಹರಿಪ್ರಿಯಾ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಡಿಟೆಕ್ಟೀವ್ ದಿವಾಕರ್ ಪಾತ್ರದಲ್ಲಿ ರಿಷಭ್ ಶೆಟ್ಟ ನಟಿಸಿದ್ದು, ಈ ಚಿತ್ರದ ಮುಂದುವರೆದ ಭಾಗದಲ್ಲಿ ಮತ್ತೊಂದು ಥ್ರಿಲ್ಲಿಂಗ್ ಕಥನದೊಂದಿಗೆ ಪ್ರೇಕ್ಷಕರ ಮುಂದೆ ಮತ್ತೆ ಬರಲಿದ್ದಾರೆ. ಇನ್ನೂ ಈ ಚಿತ್ರದ ನಾಯಕನಾಗಿ ರಿಷಭ್ ಶೆಟ್ಟಿ ನಟಿಸುವುದು ಪಕ್ಕಾ ಆಗಿದ್ದು, ನಾಯಕಿ ಸೇರಿದಂತೆ ಇತರೆ ಕಲಾವಿದರು ಮೊದಲ ಭಾಗದಲ್ಲಿ ಅಭಿನಯಿಸಿದವರೇ ಇರುತ್ತಾರಾ? ಅಥವಾ ಹೊಸ ಕಲಾವಿದರು ಅಭಿನಯಿಸಲಿದ್ದಾರಾ ಎಂಬುದರ ಕುರಿತು ಮಾಹಿತಿ ಖಚಿತವಾಗಿ ದೊರೆತಿಲ್ಲ.

ಈ ಚಿತ್ರದಲ್ಲಿ ಮತ್ತೊಂದು ಹೈಲೈಟ್ ವಿಚಾರವೊಂದಿದೆ ಅದು ಏನೆಂದರೇ, ಬೆಲ್‌ಬಾಟಂ-೨ ಚಿತ್ರದಲ್ಲಿ ಯಜಮಾನ ಚಿತ್ರದಲ್ಲಿ ಬಸಣ್ಣಿ ಬಾ ಎಂಬ ಗೀತೆಗೆ ಹೆಜ್ಜೆ ಹಾಕಿದ ತಾನ್ಯ ಹೋಪ್ ನಟಿಸಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

ಈ ಚಿತ್ರವನ್ನು ಬೆಲ್‌ಬಾಟಂ ಚಿತ್ರದ ನಿರ್ದೇಶಕ ಜಯತೀರ್ಥ ಅವರೇ ಬೆಲ್‌ಬಾಟಂ-2 ಚಿತ್ರ ಸಹ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಇವರ ನಿರ್ದೇಶನದ ಮತ್ತೊಂದು ಚಿತ್ರ ಬನಾರಸ್ ಕೂಡ ಬಿಡುಗಡೆಗೆ ರೆಡಿಯಾಗಿದೆ. ಇನ್ನೂ ರಿಷಭ್ ಶೆಟ್ಟಿ ಹರಿಕಥೆ ಅಲ್ಲ ಗಿರಿಕಥೆ, ಕೌ ಭಾಯ್ ಕೃಷ್ಣ, ಹೀರೋ, ಗರುಡ ವೃಷಭ ವಾಹನ ಮೊದಲಾದ ಚಿತ್ರಗಳಲ್ಲೂ ಸಹ ಅಭಿನಯಿಸಲಿದ್ದಾರೆ.

Trending

To Top