BBK8

ಬಿಗ್ ಬಾಸ್ ಮನೆಯಲ್ಲಿ ಯಾರಿದು ಶೋಭಾ ? ಹೊಸ ಸ್ಪರ್ಧಿ ಬಂದಿದ್ದಾರ ?

ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 17 ಸದಸ್ಯರು ಮನೆಯೊಳಗೆ ಸ್ಪರ್ಧಿಗಳಾಗಿ ಹೋಗಿದ್ದಾರೆ. ಈಗಾಗಲೇ ಬಿಗ್ ಬಾಸ್ ಕಾರ್ಯಕ್ರಮ 3 ವಾರ ಕಳೆದು, ನಾಲ್ಕನೇ ವಾರ ಕೂಡ ಮುಗಿಯುವ ಸಮಯ ಹತ್ತಿರ ಬಂದಿದೆ. ಮೊದಲ ಮೂರು ವಾರಗಳಲ್ಲಿ ಮೂರು ಸ್ಪರ್ಧಿಗಳು ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿದ್ದಾರೆ. ಅಂದಹಾಗೆ ಈಗ ಬಿಗ್ ಬಾಸ್ ಮನೆಯಲ್ಲಿ ಒಬ್ಬ ಹೊಸ ಸ್ಪರ್ಧಿ ಬಂದಿದ್ದಾರೆ ಅವರ ಹೆಸರು ಶೋಭಾ ಅಂತ. ಈ ಶೋಭಾ ಯಾರು ಗೊತ್ತಾ ? ತಿಳಿಯಲು ಮುಂದೆ ಓದಿ..

ಬಿಗ್ ಬಾಸ್ ಮನೆಯಿಂದ ಈಗಾಗಲೇ ಮೂರು ಸ್ಪರ್ಧಿಗಳು ಮನೆಯಿಂದ ಹೊರಬಂದಿದ್ದಾರೆ. ಮೊದಲ ವಾರ ಧನುಶ್ರೀ, ಎರಡನೇ ವಾರ ನಿರ್ಮಲಾ ಚೆನ್ನಪ್ಪ ಮತ್ತು ಮೂರನೇ ವಾರ ಗುಂಡಮ್ಮ ಗೀತಾ ಭಾರತಿ ಭಟ್ ಮನೆಯಿಂದ ಹೊರಬಂದಿದ್ದಾರೆ. ಈಗ ಮನೆಯಲ್ಲಿ ಇರುವುದು 14 ಸ್ಪರ್ಧಿಗಳು ಮಾತ್ರ. ಈ ನಡುವೆ ಶೋಭಾ ಎಂಬ ಹೊಸ ಸ್ಪರ್ಧಿ ಯಾವಾಗ ಮನೆಗೆ ಬಂದ್ರು ?

ಮನೆಯ ಸದಸ್ಯರು ಗಾರ್ಡನ್ ಏರಿಯಾದಲ್ಲಿ ಮಾತನಾಡುವಾಗ ರಾಜೀವ್ ಅವರು ನಿಧಿ ಅವರೊಡನೆ ಚದುರಂಗ ಟಾಸ್ಕ್ ಬಗ್ಗೆ ಮಾತನಾಡುವಾಗ, “ಯಾಕೆ ನಿಧಿ ನೀವು ನನಗೆ ಹಾಗೆ ಹೊಡೆದ್ರಿ, ಶೋಭಾ ಕೂಡ ಹೊಡೆದಿರಲಿಲ್ಲ..” ಎನ್ನುತ್ತಾರೆ. ಇಲ್ಲಿ ರಾಜೀವ್ ಅವರು ಶುಭಾ ಹೆಸರನ್ನು ಶೋಭಾ ಎಂದು ಕನ್ಫ್ಯೂಸ್ ಮಾಡಿಕೊಂಡು ಈ ರೀತಿ ಹೇಳಿದ್ದಾರೆ. ಇದನ್ನು ಕೇಳಿಸಿಕೊಂಡ ಶುಭಾ ಪೂಂಜಾ, ರಾಜೀವ್ ಗೆ ರೇಗಿ, ರಾಜೀವ್ ಅವರಿಗೆ ರಾಜೇಶ್ ಎಂದು ಹೊಸದಾಗಿ ನಾಮಕರಣ ಮಾಡಿದ್ದಾರೆ.

Trending

To Top