BBK8

ಶಮಂತ್ ಬದಲಾಗಿ ವೈಜಯಂತಿ ಮನೆಯಿಂದ ಹೊರಬಂದಿದ್ದೇಕೆ ನೋಡಿ..

ಬಿಗ್ ಬಾಸ್ 8 ರಲ್ಲಿ ಈ ಹಿಂದೆ ಎಂದೂ ಯಾವ ಸೀಸನ್ನಲ್ಲೂ ನಡೆಯದ ಘಟನೆ ನಡೆದಿದೆ. ಬಿಗ್ ಬಾಸ್ ಅವಕಾಶವನ್ನ ಬೇಡ ಎಂದವರು ಯಾವ ಸೀಸನ್ನಲ್ಲೂ ಇರಲಿಲ್ಲ ಆದರೆ ವೈಲ್ಡ್ ಕಾರ್ಡ್ ಮೂಲಕ ಮನೆಗೆ ಬಂದ ವೈಜಯಂತಿ ಅಡಿಗ ತೆಗೆದುಕೊಂಡ ನಿರ್ಧಾರ ಅಕ್ಷರಸಹ ಮನೆಯವರನ್ನ ಆಶ್ಚರ್ಯಗೊಳಿಸಿದೆ.

ವೈಜಯಂತಿ ಅಡಿಗ ಬಿಗ್ ಬಿಕ್ಅಸ್ ಮನೆಗೆ 2ನೇ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ತೆರಳಿದ್ದರು.ಮೊದಲನೇ ದಿನ ತುಂಬಾ ಆಕ್ಟಿವ್ ಆಗಿದ ಇವರು ಇತರ ಮನೆಯವರಿಗೆ ಟಕ್ಕರ್ ಕೊಡುತಿದ್ದರು.ಇವರು ಮನೆಯಲ್ಲಿ ಚಕ್ರವರ್ತಿ ಮತ್ತು ಪ್ರಶಾಂತ್ ಸಂಬರ್ಗಿ ಅವರಿಗೆ ತುಂಬಾ ಆಪ್ತರಾಗಿದ್ದರು, ಆದರೆ ಇವರು 3ನೇ ದಿನಕ್ಕೆ ಮನೆಗೆ ಮರಳುವ ನಿರ್ಧಾರ ಮಾಡಿದರು.

ವೈಜಯಂತಿ ಮನೆಗೆ ಬಂದ ಎರಡನೇ ದಿನದಿಂದಲೇ ಬಿಗ್ ಬಾಸ್ ಮನೆಯಿಂದ ಹೊರಹೋಗುವ ನಿರ್ಧಾರ ಮಾಡಿದ್ದರು.ನಾನು ಅಂದುಕೊಂಡಿದ್ದೆ ಒಂದು ಇಲ್ಲಿ ಆಗ್ತಿರೋದೆ ಮತ್ತೊಂದು ನಾನು ಈ ರೇಸ್ ನಲ್ಲಿ ಎಲ್ಲ ಮೊದಲು ಹೊರಗೆ ಒಗಬೇಕು ಎನ್ನುತ್ತಿದ್ದರು.ಅಷ್ಟೇ ಅಲ್ಲದೆ ನಾನು ಅಪ್ಪ, ಅಮ್ಮ, ಫಿಯಾನ್ಸಿಯನ್ನ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳುತ್ತಿದ್ದರು.

ವೈಜಯಂತಿ ಅವರು ಮನರಂಜನೆ ಬದಲಿಗೆ ಮನೆಯಿಂದ ಹೊರಹೋಗುವ ಮಾತುಗಳನ್ನು ಆಡುತ್ತಿದ್ದರು.ಇನ್ನು ಮಾನಸಿಕವಾಗಿ ಕುಗಿದ್ದ ವೈಜಯಂತಿ ಅವರನ್ನು ಕಾಂಫೆಷನ್ ರೂಮ್ ಗೆ ಕರೆಸಿ ಮಾತನಾಡಿ ಸಮಾಧಾನ ಪಡಿಸಿದ್ದರು, ಆದರೂ ಸಹ ಬಿಗ್ ಬಾಸ್ ಮನೆಯಲ್ಲಿ ಮುಂದುವರೆಯಲು ವೈಜಯಂತಿ ಅವರು ಆಸಕ್ತಿ ತೋರದ ಕಾರಣ ಅವರನ್ನ ಮನೆಯಿಂದ ಹೊರಹೋಗಲು ಅವಕಾಶ ಕೊಟ್ಟು , ಕಡಿಮೆ ವೋಟ್ ಪಡೆದ ಶಮಂತ್ರನ್ನ ಉಳಿಸಲಾಯಿತು.

Trending

To Top