News

ಬಜಾರಲ್ಲಿ ಸಕತ್ ಸದ್ದು ಮಾಡುತ್ತಿದೆ Bazaar ಚಿತ್ರ! ಚಿತ್ರ ನೋಡಿ ಕನ್ನಡಿಗರು ಫುಲ್ ಖುಷ್! Exclusive Bazaar Review

bazaar1

ಫೆಬ್ರವರಿ 1 ರಂದು ರಾಜ್ಯಾಧ್ಯಂತ ಬಿಡುಗಡೆ ಆದ ಕನ್ನಡದ ಚಿತ್ರ #bazaar. #bazaar ಚಿತ್ರ ಈ ವರ್ಷ ಬಹು ನಿರೀಕ್ಷೆಯ ಕನ್ನಡ ಚಿತ್ರಗಳಲ್ಲಿ ಒಂದು. ಈ ಚಿತ್ರ ಸಂಕ್ರಣತಿಗೆ ಬಿಡುಗಡೆ ಆಗಬೇಕಿತ್ತು, ಆದರೆ ಕರಣತರಗಳಿಂದ ಫೆಬ್ರವರಿ 1 ರಂದು ಭರ್ಜರಿ ಆಗಿ ಬಿಡುಗಡೆ ಆಯಿತು #bazaar . #bazaar ಚಿತ್ರವನ್ನು ಸಿಂಪಲ್ ಸುನಿ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಶಿಷ್ಯ ನಾದ dhanveer ಅವರು ನಟಿಸಿದ್ದಾರೆ. #bazaar ಚಿತ್ರದಲ್ಲಿ dhanveer , ಅದಿತಿ ಪ್ರಭುದೇವ, ಶರತ್ ಲೋಹಿತಾಶ್ವ, ದೀಪಕ್ ಶೆಟ್ಟಿ, ಹಾಗು ಸಾಧು ಕೋಕಿಲ ಅವರು ನಟಿಸದ್ದಾರೆ. ಸದ್ಯ #bazaar ಚಿತ್ರ ರಾಜ್ಯದೆಲ್ಲೆಡೆ ಬಿಡುಗಡೆ ಆಗಿ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ.
ಕನ್ನಡದ ನಿರ್ದೇಶಕ ಸಿಂಪಲ್ ಸುನಿ ಅವರು ಚಮಕ್ ಚಿತ್ರದ ನಂತರ #bazaar ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. #bazaar ಒಂದು ಪಕ್ಕಾ ಮಾಸ್ ಹಾಗು ಮನೋರಂಜನೆ ಇರುವ ಸಿನಿಮಾ. #bazaar ಚಿತ್ರದಲ್ಲಿ ಪಾರಿವಾಳ ಹಾರಿಸುವ ಸ್ಪರ್ಧೆ ಬಹಳ ಮುಖ್ಯ ಹಂತದಲ್ಲಿ ಬರುತ್ತದೆ. #bazaar ಚಿತ್ರದಲ್ಲಿ Dhanveer ಅವರ ಮೊಟ್ಟ ಮೊದಲ ಚಿತ್ರವಾದರೂ ಬಹಳ ಅದ್ಭುತವಾಗಿ ನಟನೆ ಮಾಡಿದ್ದಾರೆ. Dhanveer ಅವರ ಹಾರ್ಡ್ ವರ್ಕ್ ಮತ್ತು ಪರಿಶ್ರಮ #bazaar ಚಿತ್ರದ ಪ್ರತೀ ಒಂದು ಫ್ರೇಮ್ ನಲ್ಲಿ ಕೂಡ ಎದ್ದು ಕಾಣುತ್ತದೆ. ಇವರ ಪರ್ಫಾರ್ಮೆನ್ಸ್ ನೋಡಿದ್ರೆ #bazaar Dhanveer ಅವರ ಮೊದಲ ಚಿತ್ರ ಎಂದು ಹೇಳಲು ಕಷ್ಟವಾಗುತ್ತದೆ. ಇವರ ಅಭಿನಯಕ್ಕೆ ಕರ್ನಾಟಕದ ಜನರು ಫಿದಾ ಆಗಿದ್ದಾರೆ.
#bazaar ಚಿತ್ರದಲ್ಲಿ Dhanveer ಅವರ ಜೊತೆ ಅದಿತಿ ಪ್ರಭುದೇವ ಅವರು ಹೀರೋಯಿನ್ ಆಗಿ ನಟಿಸಿದ್ದಾರೆ. #bazaar ಚಿತ್ರದಲ್ಲಿ ನಿರ್ದೇಶಕರಾದ ಸಿಂಪಲ್ ಸುನಿ ಅವರು ಒಂದು ಸುಂದರ ಲವ್ ಸ್ಟೋರಿ ಯನ್ನು ಕೂಡ ಹೆಣೆದಿದ್ದಾರೆ. ಅದಿತಿ ಪ್ರಭುದೇವ ಬಹಳ ಚನ್ನಾಗಿ ನಟಿಸಿದ್ದಾರೆ. #bazaar ಚಿತ್ರದಲ್ಲಿ ಬಹಳ ಮುಖ್ಯ ಪಾತ್ರ ವೆಂದರೆ ಅದು ಶರತ್ ಲೋಹಿತಶಾಶ್ವ ಅವರದ್ದು. ಶರತ್ ಲೋಹಿತಾಶ್ವ ಅವರು #bazaar ಚಿತ್ರದಲ್ಲಿ ಬಹಳ ಪ್ರಮುಕ್ಜ್ಯತೇ ಇರುವ ಪಾತ್ರದಲ್ಲಿ ನಟಿಸಿದ್ದಾರೆ. ಇದಲ್ಲದೆ ನಮ್ಮ ಕನ್ನಡದ ಹಾಸ್ಯ ಸಾಮ್ರಾಟ್ ಸಾಧು ಕೋಕಿಲ ಅವರು ಚಿತ್ರದುದ್ದಕ್ಕೂ ನಿಮ್ಮನ್ನು ರಂಜಿಸುತ್ತಾರೆ.
#bazaar ಚಿತ್ರ ನಮ್ಮ ಸಿಂಪಲ್ ಸುನಿ ಅವರ 7 ನಿರ್ದೇಶನದ ಚಿತ್ರ. ಸತತ ವಾಗಿ ಕನ್ನಡದಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಕರು ಸಿಂಪಲ್ ಸುನಿ ಅವರು ಕೊಟ್ಟಿದ್ದಾರೆ. #bazaar ಚಿತ್ರವನ್ನು ತಿಮ್ಮೆ ಗೌಡ ಅವರು ನಿರ್ಮಾಣ ಮಾಡಿದ್ದಾರೆ, ಹಾಗು ಕೆಜಿಫ್, ಅಂಜನೀಪುತ್ರ, ಉಗ್ರಂ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸರೂರ್ ಅವರು #bazaar ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. #bazaar ಚಿತ್ರದಲ್ಲಿ ಒಂದರಿಕ್ಕಿಂತ ಒಂದು ಅದ್ಭುತ ಹಾಡುಗಳಿವೆ. #bazaar ಚಿತ್ರದ ಹಾಡುಗಳಲ್ಲಿ ವಿಜಯ್ ಪ್ರಕಾಶ್, ಅನುರಾಧ ಭಟ್, ಕೈಲಾಶ್ ಖೇರ್, ಸಂಜಿತ್ ಹೆಗಡೆ, ಸಂತೋಷ್ ವೆಂಕಿ, ಅವರು ಹಾಡಿದ್ದಾರೆ.
ಒಟ್ಟಿನಲ್ಲಿ #bazaar ಚಿತ್ರ ಈ ವರ್ಷದ ಮೊಟ್ಟ ಮೊದಲ ಸೂಪರ್ ಹಿಟ್ ಬ್ಲಾಕ್ ಬಸ್ಟರ್ ಚಿತ್ರವೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. #bazaar ಚಿತ್ರ ಒಂದು ಅದ್ಭುತ entertainment ಚಿತ್ರ. ಒಂದು ಕಂಪ್ಲೀಟ್ ಪ್ಯಾಕೇಜ್ ಎಂದು ಹೇಳಬಹುದು. #bazaar ಚಿತ್ರದಲ್ಲಿ ಸಕತ್ ಆಕ್ಷನ್ ಇದೆ, ಪ್ರೀತಿ ಇದೆ, ಮನೋರಂಜನೆ ಇದೆ! ಸದ್ಯ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದ್ದೆ. ಇನ್ನೊಂದೆಡೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಂದು ಬೆಂಗಳೂರಿನಲ್ಲಿ #bazaar ಚಿತ್ರವನ್ನು ನೋಡಲಿದ್ದಾರೆ. ನೀವು #bazaar ಚಿತ್ರ ಇನ್ನೂ ನೋಡಿಲ್ಲ ಅಂದರೆ ತಪ್ಪದೆ ನೋಡಿರಿ! ಒಂದೊಳ್ಳೆ ಅಪ್ಪಟ ಕನ್ನಡದ ಚಿತ್ರ!

Trending

To Top