Film News

13ನೇ ಅಂತರಾಷ್ಟ್ರೀಯ ಸಿನಿಮೋತ್ಸವ ಫೆಬ್ರವರಿ 2021 ಕ್ಕೆ!

ಬೆಂಗಳೂರು: ಸಿನಿಪ್ರಿಯರನ್ನು ಪುನಃ ಚಿತ್ರಮಂದಿರಗಳತ್ತ ತೆರಳುವಂತೆ ಮಾಡು 13ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವವನ್ನು ಮುಂಬರುವ ಫೆಬ್ರವರಿ 2021 ರಲ್ಲಿ ಆಯೋಜಿಸಲು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನಿಲ್ ಪುರಾಣಿಕ್ ಅವರ ನೇತೃತ್ವದ ನಿಯೋಗ ಮನವಿ ಮಾಡಿದ್ದು, ಮನವಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ಪಂದಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೊರೋನಾ ಧಾಳಿಯಿಂದ ಎಲ್ಲಾ ರಂಗಗಳ ಜೊತೆಗೆ ಚಿತ್ರರಂಗವೂ ಕೂಡ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಚಿಂತ್ರಮಂದಿರಗಳತ್ತ ಜನರು ಸುಳಿಯುತ್ತಿಲ್ಲ. ಆದ್ದರಿಂದ ಅಂತರಾಷ್ಟ್ರೀಯ ಸಿನಿಮೋತ್ಸವ ಪೂರಕ ವಾತಾವರಣ ನಿರ್ಮಾಣವಾಗಲಿದೆ. ಮುಂಬರುವ 2021 ರ ಫೆಬ್ರವರಿ ತಿಂಗಳ ಮೂರು ಅಥವಾ ನಾಲ್ಕನೇ ವಾರದಲ್ಲಿ ಆಯೋಜನೆ ಮಾಡಲು ಸಿಎಂ ರವರಿಂದ ಸಮ್ಮತಿ ದೊರೆತಿದೆ ಎನ್ನಲಾಗುತ್ತಿದೆ.

ಸುನೀಲ್ ಪುರಾಣಿಕ್ ನೇತೃತ್ವದ ನಿಯೋಗ ಸಿಎಂ ರವರ ಬಳಿ ತೆರಳಿ ಕಳೆದ 13 ವರ್ಷಗಳಿಂದ ಸಿನಿಮೋತ್ಸವ ನಡೆಯುತ್ತಿದ್ದು, ಶ್ರೇಷ್ಟ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಈ ಬಾರಿಯೂ ಮಾನ್ಯತೆ ದೊರೆತರೇ ವಿಶ್ವದಲ್ಲಿ 46ನೇ ಮಾನ್ಯತೆ ಪಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಸಮ್ಮತಿ ನೀಡುವಂತೆಯೂ ಹಾಗೂ ಇದಕ್ಕೆ ಬೇಕಾಗುವ ಅನುದಾನವನ್ನು ದೊರಕಿಸಿಕೊಡುವಂತೆ ಮನವಿ ಮಾಡಿದೆ.

Trending

To Top