Film News

ತಾರಕರತ್ನಗಾಗಿ ಬಾಲಕೃಷ್ಣ ಪ್ರಮುಖ ನಿರ್ಣಯ, ತಾರಕರತ್ನಗೆ ಬಂದ ಸ್ಥಿತಿ ಯಾರಿಗೂ ಬರಬಾರದು ಎಂದು ಬಾಲಯ್ಯ ನಿರ್ಣಯ…..!

ನಂದಮೂರಿ ಕುಟುಂಬದ ತಾರಕರತ್ನ ಅಕಾಲಿಕ ಮರಣದ ಬಳಿಕ ನಂದಮೂರಿ ಕುಟುಂಬದ ಜೊತೆಗೆ ಅಭಿಮಾನಿಗಳೂ ಸಹ ತುಂಬಾ ನೋವನ್ನು ಅನುಭವಿಸಿದ್ದಾರೆ. ಅವರ ಸ್ಥಾನವನ್ನು ಯಾರೂ ಸಹ ತುಂಬಲು ಸಾಧ್ಯ ಆಗುತ್ತಿಲ್ಲ. ಇನ್ನೂ ತಾರಕರತ್ನ ರವರಿಂದ ಅವರ ಪತ್ನಿ ಅಲೇಖ್ಯಾ ರೆಡ್ಡಿ ಸಹ ತುಂಬಾನೆ ನೋವನ್ನು ಅನುಭವಿಸುತ್ತಿದ್ದಾರೆ. ತಾರಕರತ್ನರನ್ನು ನೆನೆದು ಎಮೋಷನಲ್ ಆಗುತ್ತಿದ್ದಾರೆ. ಇನ್ನೂ ತಾರಕರತ್ನ ಅನಾರೋಗ್ಯಕ್ಕೆ ಗುರಿಯಾದಾಗಿನಿಂದ ಅವರ ಸಂಪೂರ್ಣ ಆರೋಗ್ಯ ಜವಾಬ್ದಾರಿ ವಹಿಸಿಕೊಂಡಿದ್ದು ನಂದಮೂರಿ ಬಾಲಕೃಷ್ಣರವರೇ. ಇದೀಗ ಆತನ ನೆನಪಿಗಾಗಿ ಮತ್ತೊಂದು ದೊಡ್ಡ ನಿರ್ಣಯ ತೆಗೆದುಕೊಂಡಿದ್ದಾರೆ.

ದಿವಂಗತ ತಾರಕರತ್ನ ಮೃತಪಟ್ಟು ಒಂದು ತಿಂಗಳು ಪೂರ್ಣಗೊಂಡಿದ್ದು, ಅಲೇಖ್ಯಾ ಎಮೋಷನಲ್ ಪೋಸ್ಟ್ ಸಹ ಮಾಡಿದ್ದರು. ಬಾಲಕೃಷ್ಣರವರು ಅವರಿಗೆ ಮಾಡಿದ ಸಹಾಯವನ್ನು ನೆನೆದು ಭಾವುಕರಾಗಿದ್ದರು. ನಾವು ಕುಟುಂಬ ಎಂದು ಕರೆಯುವ ಏಕೈಕ ವ್ಯಕ್ತಿ ಬಾಲಕೃಷ್ಣ ಮಾತ್ರ ಎಂದು, ಕಷ್ಟ ಸುಖಗಳಲ್ಲಿ ಬಾಲಕೃಷ್ಣ ತಮ್ಮೊಂದಿಗೆ ಇದ್ದಿದ್ದನ್ನು ನೆನಪಿಸಿಕೊಂಡರು. ಇದೀಗ ನಂದಮೂರಿ ಬಾಲಕೃಷ್ಣ ದೊಡ್ಡ ನಿರ್ಣಯ ತೆಗೆದುಕೊಂಡಿದ್ದಾರೆ. ತಾರಕರತ್ನ ಅಭಿಮಾನಿಗಳಿಗೆ ಶಾಶ್ವತವಾಗಿ ಗುರುತು ಇರುವಂತೆ ಆತನ ಹೆಸರಿನಲ್ಲಿ ದೊಡ್ಡ ಕೆಲಸ ಮಾಡಿದ್ದಾರೆ. ತಾರಕರತ್ನ ಹೆಸರು ಚರಿತ್ರೆಯಲ್ಲಿ ಉಳಿಯುವಂತೆ ತಾರಕರತ್ನ ಮೇಲಿನ ಪ್ರೀತಿಯನ್ನು ಆ ಮೂಲಕ ಪ್ರದರ್ಶನ ಮಾಡುತ್ತಿದ್ದಾರೆ. ತನ್ನ ಕುಟುಂಬಕ್ಕೆ ಬಂದಂತಹ ಕಷ್ಟ ಬೇರೆ ಯಾರಿಗೂ ಬರಬಾರದೆಂದು ಬಾಲಕೃಷ್ಣ ಒಂದು ನಿರ್ಣಯ ತೆಗೆದುಕೊಂಡಿದ್ದಾರೆ.

ಇನ್ನೂ ತಾರಕರತ್ನ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದು, ಅಂತಹ ನೋವು ಬೇರೆ ಯಾವುದೇ ಬಡವರಿಗೂ ಬರಬಾರದು ಎಂದು ಬಡವರಿಗೆ ಉಚಿತ ವೈದ್ಯಕೀಯ ಸೌಲಭ್ಯ ನೀಡಲು ಬಾಲಕೃಷ್ಣ ನಿರ್ಧಾರ ತೆಗೆದುಕೊಂಡಿದ್ದಾರೆ. ಜೊತೆಗೆ ಹಿಂದೂಪುರದಲ್ಲಿ ಬಾಲಕೃಷ್ಣ ನಿರ್ಮಾಣ ಮಾಡಿದ ಆಸ್ಪತ್ರೆಯ ಬ್ಲಾಕ್ ಒಂದಕ್ಕೆ ತಾರಕರತ್ನ ಹೆಸರನ್ನು ಸಹ ಇಟ್ಟಿದ್ದಾರೆ. ಅದರ ಜೊತೆಗೆ ಬಡವರ ವೈದ್ಯಕೀಯ ಸೇವೆಗಾಗಿ ಕೋಟ್ಯಂತರ ವೆಚ್ಚದ ಶಸ್ತ್ರ ಚಿಕಿತ್ಸಾ ಪರಿಕರಗಳನ್ನು ಆಸ್ಪತ್ರೆಗೆ ನೀಡಿದ್ದಾರೆ. ಅಷ್ಟೇಅಲ್ಲದೇ ಆಸ್ಪತ್ರೆಗೆ ಬರುವಂತಹ ಚಿಕ್ಕ ಮಕ್ಕಳಿಗೆ ಉಚಿತವಾಗಿ ಊಟ ಹಾಗೂ ಔಷಧಿ ಸಹ ಮೂರು ತಿಂಗಳುಗಳ ಕಾಲ ನೀಡಲಿದ್ದಾರಂತೆ.  ಆ ಮೂಲಕ ತಾರಕರತ್ನ ರವರ ಹೆಸರು ಚರಿತ್ರೆಯಲ್ಲಿ ಸ್ಥಿರವಾಗಿರುವಂತೆ ಬಾಲಕೃಷ್ಣ ದೊಡ್ಡ ನಿರ್ಣಯ ತೆಗೆದುಕೊಂಡಿದ್ದು, ಬಾಲಕೃಷ್ಣ ಅಭಿಮಾನಿಗಳೂ ಸಹ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಬಾಲಾಜಿ

ನನ್ನ ಹೆಸರು ಬಾಲಾಜಿ. ನಾನು ರಾಜಕೀಯ, ಪ್ರಚಲಿತ ವಿದ್ಯಾಮಾನ, ಸಿನೆಮಾ ಮೊದಲಾದ ವಿಷಯಗಳಲ್ಲಿ ಆಕರ್ಷಕ ಲೇಖನಗಳನ್ನು ಬರೆಯುವಲ್ಲಿ ಎಂಟು ವರ್ಷಗಳ ಅನುಭವವನ್ನು ಹೊಂದಿದ್ದೇನೆ. ಕುವೆಂಪು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕ್ಕೋತ್ತರ ಪದವಿಯನ್ನು ಪಡೆದುಕೊಂಡಿದ್ದೇನೆ. ಅನೇಕ ದಿನಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಪತ್ರಿಕೋದ್ಯಮ ಎಂಬುದು ನನ್ನ ಹವ್ಯಾಸವಾಗಿದೆ. ನನಗೆ ವಹಿಸಿದ ಕೆಲಸವನ್ನು ಆದಷ್ಟೂ ಪ್ರಾಮಾಣಿಕವಾಗಿ ನಿಭಾಯಿಸುವ ವ್ಯಕ್ತಿತ್ವವನ್ನು ಹೊಂದಿದ್ದೇನೆ.

Leave a Comment

Recent Posts

ಸಂಚಲನಾತ್ಮಕ ಹೇಳಿಕೆ ಕೊಟ್ಟ ಚಿರು, ನಾನು ಸಹ ಕ್ಯಾನ್ಸರ್ ವ್ಯಾಧಿಗೆ ಗುರಿಯಾಗಿದ್ದೆ ಎಂದ ಮೆಗಾಸ್ಟಾರ್……!

ತೆಲುಗು ಸಿನಿರಂಗದಲ್ಲಿ ಸ್ವಂತ ಪ್ರತಿಭೆಯಿಂದ ಅಗ್ರ ಸ್ಥಾನ ಪಡೆದುಕೊಂಡ ನಟರಲ್ಲಿ ಮೆಗಾಸ್ಟಾರ್‍ ಚಿರಂಜೀವಿ ಒಬ್ಬರಾಗಿದ್ದಾರೆ. ಅನೇಕ ಸೂಪರ್‍ ಹಿಟ್ ಸಿನೆಮಾಗಳ…

21 mins ago

ಬೋಲ್ಡ್ ಬ್ಯೂಟಿ ಮೌನಿರಾಯ್ ಲೇಟೆಸ್ಟ್ ಬೋಲ್ಡ್ ಲುಕ್ಸ್, ಬಿಕಿನಿ ಮೂಲಕ ಇಂಟರ್ ನೆಟ್ ಶೇಕ್ ಮಾಡಿದ ನಟಿ…..!

ನಾಗಿನಿ ಸೀರಿಯಲ್ ಮೂಲಕ ಜನಮನ ಗೆದ್ದ ನಟಿ ಮೌನಿರಾಯ್ ಬಾಲಿವುಡ್ ನಲ್ಲಿ ಮೋಸ್ಟ್ ಟ್ಯಾಲೆಂಟೆಂಡ್ ನಟಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ನಟಿ…

13 hours ago

ಅದ್ದೂರಿಯಾಗಿ ನಡೆದ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಅರಶಿಣಾ ಶಾಸ್ತ್ರ, ಮಿಂಚಿದ ಸೆಲೆಬ್ರೆಟಿಗಳು….!

ಕನ್ನಡ ಸಿನಿರಂಗದ ಮೇರು ನಟ ದಿವಂಗತ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಇಬ್ಬರೂ ಸುಮಾರು ದಿನಗಳಿಂದ ಪ್ರೀತಿಸಿ…

15 hours ago

ಅಭಿಮಾನಿಗಳಿಗೆ ಸಮ್ಮರ್ ಸ್ಪೇಷಲ್ ಟ್ರೀಟ್ ಕೊಟ್ಟ ರಕುಲ್, ಟೂಪೀಸ್ ಬಿಕಿನಿಯಲ್ಲಿ ಬೋಲ್ಡ್ ಪೋಸ್ ಕೊಟ್ಟ ಪಂಜಾಬಿ ಬ್ಯೂಟಿ…..!

ಪಂಜಾಬಿ ಮೂಲದ ನಟಿ ರಕುಲ್ ಪ್ರೀತ್ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ದಿನೇ ದಿನೇ ಓವರ್‍ ಗ್ಲಾಮರ್‍ ಶೋ ಮಾಡುತ್ತಿದ್ದಾರೆ. ಗ್ಯಾಪ್…

17 hours ago

ನೆವರ್ ಬಿಪೋರ್ ಎಂಬಂತೆ ಹಾಟ್ ಪೋಸ್ ಕೊಟ್ಟ ಅನಸೂಯ, ಮೆಕಪ್ ರೂಂ ನಲ್ಲಿ ಟಾಪ್ ಶೋ ಮೂಲಕ ಇಂಟರ್ ನೆಟ್ ಶೇಕ್ ಮಾಡಿದ ಬ್ಯೂಟಿ……!

ಸ್ಟಾರ್‍ ಬ್ಯೂಟಿ ಅನಸೂಯ ಕಿರುತೆರೆಯಿಂದ ದೂರವಾದ ಬಳಿಕ ಸಿನೆಮಾಗಳಲ್ಲಿ ಪುಲ್ ಆಕ್ಟೀವ್ ಆಗಿದ್ದಾರೆ. ಸಾಲು ಸಾಲು ಸಿನೆಮಾಗಳ ಮೂಲಕ ಕೆರಿಯರ್‍…

18 hours ago

ಸಮ್ಮರ್ ವೇಕೇಷನ್ ನಲ್ಲಿ ಚಿಲ್ ಆಗುತ್ತಾ, ಯಂಗ್ ನಟಿಯರನ್ನೂ ನಾಚಿಸುವಂತಹ ಹಾಟ್ ಪೋಸ್ ಕೊಟ್ಟ ಸೀನಿಯರ್ ನಟಿ ಭೂಮಿಕಾ….!

ಸಿನಿರಂಗದಲ್ಲಿ ಅನೇಕ ನಟಿಯರು ಸಿನೆಮಾಗಳಲ್ಲಿ ಪರಿಚಯವಾಗಿದ್ದರೂ, ಅವರಲ್ಲಿ ಕೆಲ ನಟಿಯರು ಮಾತ್ರ ಸ್ಟಾರ್‍ ನಟಿಯಾಗುತ್ತಾರೆ. ಸ್ಟಾರ್‍ ನಟಿಯಾಗಿ ಸಾಲು ಸಾಲು…

20 hours ago