Film News

ಚಾಕೋಲೇಟ್ ನಲ್ಲಿ ನಿರ್ಮಾಣವಾಯ್ತು ಎಸ್.ಪಿ.ಬಿ ಪ್ರತಿಮೆ

ಚೆನೈ: ಖ್ಯಾತ ಗಾಯಕ, ತಮ್ಮ ಗಾಯನದ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿಸಿಕೊಂಡಿದ್ದ ಗಾನ ಗಂಧರ್ವ ಎಸ್.ಪಿ. ಬಾಲಸುಬ್ರಮಣ್ಯಂ ರವರ ಪ್ರತಿಮೆಯನ್ನು ಚಾಕೋಲೇಟ್ ನಲ್ಲಿ ನಿರ್ಮಾಣ ಮಾಡಿ ಸ್ಮರಣೆ ಮಾಡಿಕೊಂಡಿದ್ದಾರೆ ಅವರ ಅಭಿಮಾನಿ.

ಪುದುಚೆರಿಯ ಮಿಷನ್ ಸ್ಟ್ರೀಟ್ ಎಂಬ ಅಂಗಡಿಯಲ್ಲಿ ಈ ಪ್ರತಿಮೆ ನಿರ್ಮಾಣವಾಗಿದೆ. ಬಾಲಸುಬ್ರಮಣ್ಯಂ ರವರ ಸ್ಮರಣೆಗಾಗಿ ಈ ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಇನ್ನೂ ಈ ಪ್ರತಿಮೆ ಸುಮಾರು ೫.೮ ಅಡಿ ಎತ್ತರವಿದ್ದು, ೩೩೯ ಕೆ.ಜಿ. ತೂಕವಿದೆ. ಈ ಪ್ರತಿಮೆಯನ್ನು ಸಂಪೂರ್ಣವಾಗಿ ಚಾಕೋಲೇಟ್ ನಿಂದಲೇ ಮಾಡಿಲಾಗಿದೆ. ಈ ಪ್ರತಿಮೆಯನ್ನು ಅಂಗಡಿಯ ಮುಖ್ಯ ಬಾಣಸಿಗ ರಾಜೇಂದ್ರನ್ ಹಾಗೂ ತಂಡ ತಯಾರಿಸಿದ್ದಾರೆ. ಕ್ರಿಸ್ ಮಸ್ ಹಾಗೂ ಹೊಸ ವರ್ಷದ ಸಮಯದಲ್ಲಿ ಗ್ರಾಹಕರನ್ನು ಆಕರ್ಷಿಸಲು ಅಂಗಡಿ ಮಾಲೀಕರು ಈ ಪ್ರತಿಮೆಯನ್ನು ಪ್ರದರ್ಶನಕ್ಕಿಟ್ಟಿದ್ದಾರೆ.

ಇನ್ನೂ ಈ ಅಂಗಡಿಯಲ್ಲಿ ಇದಕ್ಕೂ ಮೊದಲು ಎಪಿಜೆ ಅಬ್ದುಲ್ ಕಲಾಂ, ನಟ ರಜನೀಕಾಂತ್ ಸೇರಿದಂತೆ ಹಲವು ಗಣ್ಯರ ಪ್ರತಿಮೆಗಳನ್ನು ನಿರ್ಮಾಣ ಮಾಡಿ ಗ್ರಾಹಕರ ಗಮನ ಸೆಳೆಯುತ್ತದೆ. ಪ್ರಸ್ತುತ ಎಸ್.ಪಿ.ಬಾಲಸುಬ್ರಮಣ್ಯಂ ರವರ ಪ್ರತಿಮೆ ನಿರ್ಮಿಸಿ ಗ್ರಾಹಕರ ಆಕರ್ಷಣೆಗೆ ಮುಂದಾಗಿದೆ.

Trending

To Top