ಬೆಂಗಳೂರು: ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ-2 ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಇದೀಗ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಸಖತ್ ವೈರಲ್ ಆಗುತ್ತಿದೆ.
ಸ್ಯಾಂಡಲ್ವುಡ್ನ ಮೇರು ನಟ ಶಿವರಾಜ್ ಕುಮಾರ್ 2013 ರಲ್ಲಿ ತೆರಕಂಡಿದ್ದ ಭಜರಂಗಿ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುವುದರ ಜೊತೆಗೆ ಸೂಪರ್ ಹಿಟ್ ಆಗಿತ್ತು. ಇದೀಗ ಇದೇ ಚಿತ್ರದ ಮುಂದುವರೆದ ಭಾಗ ಭಜರಂಗಿ-2 ಚಿತ್ರ ಸಹ ಅದೇ ರೀತಿಯಲ್ಲಿ ಸದ್ದು ಮಾಡಲಿದೆ ಎನ್ನಲಾಗುತ್ತಿದೆ. ಇನ್ನೂ ಕಳೆದ ಜುಲೈ ಮಾಹೆಯಲ್ಲಿ ಭಜರಂಗಿ-೨ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಟ್ರೆಂಡಿಂಗ್ ಕ್ರಿಯೇಟ್ ಮಾಡಿತ್ತು. ಇದೀಗ ಚಿತ್ರತಂಡ ಮೋಷನ್ ಪೋಸ್ಟರ್ ರಿಲೀಸ್ ಮಾಡಿ ಸಿನಿರಸಿಕರನ್ನು ಮತಷ್ಟು ಥ್ರಿಲ್ ಆಗುವಂತೆ ಮಾಡಿದೆ.
ಇನ್ನೂ ಮೋಷನ್ ಪೋಸ್ಟರ್ ನಲ್ಲಿ ತಿಳಿಯುವಂತೆ ಕಾಡಿನಲ್ಲಿನ ರಕ್ತಪಿಪಾಸು ಜನರು, ತಲೆಗಳೆ ತುಂಬಿರುವಂತಹ ಗುಹೆ ರಕ್ತದ ಅಭಿಷೇಕಕ್ಕಾಗಿ ಕಾಯುತ್ತಿರುವ ಕಾಳಿ ಮಾತೆ, ಕರ್ಕಷ ನೋಟದ ಮಹಾ ಮಾಂತ್ರಿಕ, ಇದೆಲ್ಲದರ ಮಧ್ಯೆ ಶಿವರಾಜ್ಕುಮಾರ್ ರವರ ಕಣ್ಣುಗಳು ಹೀಗೆ ಮೋಷನ್ ಪೋಸ್ಟರ್ನಲ್ಲಿ ಕಾಣುತ್ತಿದ್ದು, ಚಿತ್ರದ ಮೇಲಿನ ಮತಷ್ಟು ಕುತೂಹಲ ಹೆಚ್ಚಾಗಿದೆ.
ಭಜರಂಗಿ ಚಿತ್ರ ಬಿಡುಗಡೆಯಾದ 8 ವರ್ಷಗಳ ಬಳಿಕ ಇದೀಗ ಭಜರಂಗಿ-2 ಚಿತ್ರ ತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದ್ದು, ಶಿವರಾಜ್ಕುಮಾರ್ ಗೆ ಜೋಡಿಯಾಗಿ ನಟಿ ಭಾವನ ಅಭಿನಯಿಸಲಿದ್ದಾರೆ. ಇನ್ನೂ ಹರ್ಷ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ಜಯಣ್ಣ-ಭೋಗೆಂದ್ರ ಸಿನೆಮಾಗೆ ಬಂಡವಾಳ ಹಾಕಿದ್ದು, ಸಂಗೀತವನ್ನು ಅರ್ಜುನ್ ಜನ್ಯ ಕಂಪೋಸ್ ಮಾಡಿದ್ದಾರೆ.
