Film News

ಮುಂದಿನ ವರ್ಷ ಗಣರಾಜ್ಯೋತ್ಸವ ದಿನದಂದು ಬಚ್ಚನ್ ಪಾಂಡೆ ಮೂವಿ ರಿಲೀಸ್!

ಮುಂಬೈ: ಹಿಂದಿ ಸಿನಿರಂಗದ ಖ್ಯಾತ ನಟ ಅಕ್ಷಯ್ ಕುಮಾರ್ ಅಭಿನಯದ ಬಚ್ಚನ್ ಸಿನೆಮಾ ಇದೇ ಜ.26, 2022  ಗಣರಾಜ್ಯೋತ್ಸವ ದಿನದಂದು ಬಿಡುಗಡೆಯಾಗಲಿದೆಯಂತೆ.

ಬಾಲಿವುಡ್ ನ ಬಹು ವೇಗವಾಗಿ ಚಿತ್ರೀಕರಣ ಮುಗಿಸುವಂತಹ ಅಕ್ಷಯ್ ಕುಮಾರ್ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷಿತ ಚಿತ್ರ ಬಚ್ಚನ್ ಪಾಂಡೆ ಚಿತ್ರ ಜ.26, 2022ನೇ ವರ್ಷದಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ದೊರೆತಿದೆ. ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಬಚ್ಚನ್ ಪಾಂಡೆ ಚಿತ್ರದ ಶೂಟಿಂಗ್ ಪ್ರಾರಂಭವಾಗಿದ್ದು, ಈ ಕುರಿತು ಅಕ್ಷಯ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಜೊತೆಗೆ ಚಿತ್ರದ ಪೊಟೋ ಒಂದನ್ನು ಸಹ ಶೇರ್ ಮಾಡಿದ್ದು, ಈ ಪೊಟೋದಲ್ಲಿ ರೌಡಿ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಈ ಪೊಟೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.

ಇನ್ನೂ ಬಚ್ಚನ್ ಪಾಂಡೆ ಚಿತ್ರವನ್ನು ಫರ್ಹಾದ್ ಸಂಜಿ ನಿರ್ದೇಶನ ಮಾಡುತ್ತಿದ್ದು, ಸಾಜಿದ್ ನಾಡಿಯಾವಾಲ ನಿರ್ಮಾಣ ಮಾಡುತ್ತಿದ್ದಾರೆ. ಫರ್ಹಾದ್ ಸಂಜಿ ರವರ ನಿರ್ದೇಶನದಲ್ಲಿ ಅಕ್ಷಯ್ ಕುಮಾರ್ ಹೌಸ್ ಫುಲ್ ಸಿನೆಮಾದಲ್ಲಿ ನಟಿಸಿದ್ದರು. ಇದೀಗ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬರುತ್ತಿರುವ ೨ನೇ ಚಿತ್ರ ಬಚ್ಚನ್ ಪಾಂಡೆ ಆಗಿದೆ. ಜೊತೆಗೆ ನಿರ್ಮಾಪಕ ಸಾಜಿದ್ ನಾಡಿಯಾವಾಲ ಹಾಗೂ ಅಕ್ಷಯ್ ಕುಮಾರ್ ರವರ ಕಾಂಬಿನೇಷನ್‌ನಲ್ಲಿ ಇದು ೧೦ನೇ ಸಿನೆಮಾ ಆಗಿದೆ. ವಿಶೇಷವಾಗಿ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ರವರಿಗೆ ನಾಯಕಿಯರಾಗಿ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಕೃತಿ ಸನೂನ್ ಇಬ್ಬರೂ ನಟಿಯರು ಅಭಿನಯಿಸುತ್ತಿದ್ದಾರೆ.

ಇನ್ನೂ ಮುಂದೆ ಅಕ್ಷಯ್ ಕುಮಾರ್ ತಾವು ನಟಿಸಲಿರುವ ಚಿತ್ರಗಳಲ್ಲಿ ಸಂಭಾವನೆಯನ್ನು ಸಹ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಸೂರ್ಯವಂಶಿ, ಅತ್ರಂಗಿ ರೇ, ಬೆಲ್ ಬಾಟಂ ಚಿತ್ರಗಳ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗುತ್ತಿದೆಯಂತೆ.

Trending

To Top