ಬಚ್ಚನ್ ಪಾಂಡೆ ಚಿತ್ರದ ಫಸ್ಟ್ ಲುಕ್ ಬಿಡುಗಡೆ: ರೌಡಿ ಗೆಟಪ್ ನಲ್ಲಿ ಅಕ್ಷಯ್ ಕುಮಾರ್

ಮುಂಬೈ: ಹಿಂದಿ ಚಿತ್ರರಂಗದ ಖ್ಯಾತ ಸ್ಟಾರ್ ನಟ ಅಕ್ಷಯ್ ಕುಮಾರ್ ರವರ ನ್ಯೂ ಮೂವಿ ಬಚ್ಚನ್ ಪಾಂಡೆ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿದ್ದು, ಭಾರಿ ಖಡಕ್ ರೌಡಿ ಗೆಟಪ್ ನಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದು, ಅಕ್ಷಯ್ ಅಭಿಮಾನಿಗಳು ಲುಕ್ ನೋಡಿ ದಂಗಾಗಿದ್ದಾರೆ ಎನ್ನಲಾಗಿದೆ.

ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ವೇಗವಾಗಿ ಸಿನೆಮಾಗಳನ್ನು ಮುಗಿಸುವ ನಟರಾಗಿದ್ದಾರೆ. ಇದೀಗ ರಿಲೀಸ್ ಆದ ಬಚ್ಚನ್ ಪಾಂಡೆ ಚಿತ್ರದ ಮೊದಲ ಪೋಸ್ಟರ್ ನಲ್ಲಿ ತಲೆಗೆ ಕೆಂಪು ಬಣ್ಣದ ಬಟ್ಟೆ ಕಟ್ಟಿ, ಕೊರಳಿಗೆ ದಪ್ಪದ ಚೈನ್ ಗಳು, ಕೈಯಲ್ಲಿ ದೊಡ್ಡ ಬ್ರೇಸ್ಲೇಟ್ ಹಾಗೂ ಕಪ್ಪು ಬಣ್ಣದ ಶರ್ಟ್ ಹಾಕಿಕೊಂಡು ಕುಳಿತಿರುವ ಅಕ್ಷಯ್ ರವರ ಪೋಸ್ಟ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಅಕ್ಷಯ್ ಕುಮಾರ್ ಹಾಗೂ ನಿರ್ಮಾಪಕ ಸಾಜಿದ್ ನಾಡಿಯಾವಾಲ ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ೧೦ನೇ ಸಿನೆಮಾ ಬಚ್ಚನ್ ಪಾಂಡೆ ಆಗಿದ್ದು, ಚಿತ್ರೀಕರಣ ಆರಂಭಿಸಿದ ಚಿತ್ರತಂಡ ಮೊದಲ ಲುಕ್ ರಿಲೀಸ್ ಮಾಡಿದೆ. ಇನ್ನೂ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಅಕ್ಷಯ್ ಕುಮಾರ್ ಹೊಸ ವರ್ಷ, ಆದರೆ ಹಳೇಯ ಜೋಡಿ. ಸಾಜಿದ್ ಅವರೊಂದಿಗೆ ೧೦ನೇ ಸಿನೆಮಾ ಇದು. ಬಚ್ಚನ್ ಪಾಂಡೆ ಚಿತ್ರದ ಶೂಟಿಂಗ್ ಆರಂಭವಾಗಿದೆ. ನಿಮ್ಮ ಹಾರೈಕೆ ನಮ್ಮ ಚಿತ್ರ ತಂಡದ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ.

ಇನ್ನೂ ಈ ಚಿತ್ರವನ್ನು ಫರ್ಹಾದ್ ಸಂಜಿ ನಿರ್ದೇಶಿಸುತ್ತಿದ್ದು, ನಾಯಕಿಯರಾಗಿ ಕೃತಿ ಸನೂನ್ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಅಭಿನಯಿಸುತ್ತಿದ್ದಾರೆ. ಜೊತೆಗೆ ಈ ಚಿತ್ರದಲ್ಲಿ ಅರ್ಷದ್ ವಾರ್ಸಿ, ಪ್ರತೀಕ್ ಬಬ್ಬರ್, ಪಂಕಜ್ ತ್ರಿಪಾಠಿ ರವರುಗಳು ಸಹ ಬಣ್ಣ ಹಚ್ಚಲಿದ್ದಾರೆ.

Previous articleಸಲಾರ್ ಚಿತ್ರದಲ್ಲಿ ಪ್ರಭಾಸ್ ಎದುರು ಜಾನ್ ಅಬ್ರಾಹಂ!
Next articleಆಚಾರ್ಯ ಚಿತ್ರದ ಭಾರಿ ಮಟ್ಟದಲ್ಲಿ ನಿರ್ಮಾಣವಾದ ಸೆಟ್: ಅಭಿನಂದಿಸಿದ ಮೆಗಾಸ್ಟಾರ್