ಬಾಲ್ಯ ನಟಿ ಬೇಬಿ ಶ್ಯಾಮಿಲಿ ಈಗ ಹೇಗಿದ್ದಾರೆ ಗೊತ್ತಾ? ಅವರ ಸಕತ್ ಫೋಟೋಗಳನ್ನು ಒಮ್ಮೆ ನೋಡಿ

shamili4
shamili4

ನಟಿ ಬೇಬಿ ಶಾಮಿಲಿ ಯಾರಿಗೆ ಗೊತ್ತಿಲ್ಲ ಹೇಳಿ! ಶಾಮಿಲಿ ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಸಿನಿಮಾ ರಂಗಕ್ಕೆ ಕಾಲಿಟ್ಟು ಸುಮಾರು 50 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಬಾಲ್ಯ ನಟಿ ಆಗಿ ಕೆಲಸ ಮಾಡಿದ್ದಾರೆ. ಅದೇ ಕಾರಣದಿಂದ ಇವರಿಗೆ ಬೇಬಿ ಶಾಮಿಲಿ ಎಂಬ ಹೆಸರು ಬಂದಿದ್ದು. ಬೇಬಿ ಶಾಮಿಲಿ ಅವರು ಕನ್ನಡ ಅಲ್ಲದೆ, ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಕೂಡ ನಟಿಸಿದ್ದಾರೆ. ಬೇಬಿ ಶಾಮಿಲಿ ಅವರು 1989 ಅಲ್ಲಿ ತಮ್ಮ ಸಿನಿಮಾ ಜರ್ನಿ ಯನ್ನು ಪ್ರಾರಂಭಿಸಿ ಸುಮಾರು 50 ಕ್ಕೂ ಹೆಚ್ಚು ದಕ್ಷಿಣ ಭಾರತದ ಸಿನೆಮಾಗಳಲ್ಲಿ ನಟಿಸಿದ್ದಾರೆ. ನಟಿ ಬೇಬಿ ಶಾಮಿಲಿ ಈಗ ಹೇಗಿದ್ದಾರೆ ಗೊತ್ತ? ಇವರು ಈಗ ಏನು ಕೆಲಸ ಮಾಡುತ್ತಿದ್ದಾರೆ ಗೊತ್ತ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್! ಅವರ ಈಗಿನ ಫೋಟೋಗಳನ್ನು ಒಮ್ಮೆ ನೋಡಿರಿ
ನಟಿ ಶಾಮಿಲಿ ಅವರು ಮೂಲತಃ ಕೇರಳದವರು. ಕೇರಳ ದಲ್ಲಿ ಹುಟ್ಟಿ ಬೆಳೆದು ನಂತರ ಚೆನ್ನೈ ನಲ್ಲಿ ತಮ್ಮ ಸಿನಿಮಾ ಜರ್ನಿ ಯನ್ನು ಶುರು ಮಾಡಿದರು. ಬೇಬಿ ಶಾಮಿಲಿ ಅವರ ಮೊದಲ ಚಿತ್ರ Rajanadai – ಈ ಚಿತ್ರ ತಮಿಳು ಭಾಷೆಯಲ್ಲಿ ಬಿಡುಗಡೆ ಆಗಿತ್ತು. ಈ ಚಿತ್ರದಲ್ಲಿ ಬೇಬಿ ಶಾಲಿನಿ ಅವರ ನಟನೆಯನ್ನು ನೋಡಿ ಇಡೀ ತಮಿಳು ಚಿತ್ರ ರಂಗವೇ ಬೆರಗಾಗಿತ್ತು. ಕನ್ನಡದಲ್ಲಿ ಬೇಬಿ ಶಾಮಿಲಿ ಅವರ ಮೊಟ್ಟ ಮೊದಲ ಚಿತ್ರ “Mathe Haditu ಕೋಗಿಲೆ”. ಈ ಚಿತ್ರದಲ್ಲಿ ಅವರ ಪರ್ಫಾರ್ಮೆನ್ಸ್ ಗಾಗಿ ಬೇಬಿ ಶಾಮಿಲಿ ಅವರಿಗೆ Karnataka State Film Award for Best Child ಆರ್ಟಿಸ್ಟ್ ಅವಾರ್ಡ್ ಕೂಡ ಬಂದಿತ್ತು. ಇದಾದ ನಂತರ ಬೇಬಿ ಶಾಮಿಲಿ ಅವರು ಹಿಂದುರುಗಿ ನೋಡಲೇ ಇಲ್ಲ! ತಮ್ಮ ಶಿಕ್ಷಣವನ್ನು ಪಕ್ಕಕ್ಕೆ ಇತ್ತು, ತಮ್ಮ ಬಾಲ್ಯದ ಸುಮಾರು 10 ವರ್ಷಗಳು ಸಿನೆಮಾಗಳಿಗೋಸ್ಕರ ಪಣಕ್ಕಿಟ್ಟರು.
ಇದಾದ ನಂತರ ಕನ್ನಡದಲ್ಲಿ Bhairavi (kannada film), ಶ್ವೇತಾಗ್ನಿ, Police Lockup , ಕಾದಂಬರಿ, Sambhavi , ದಾಕ್ಷಾಯಿಣಿ, Makkala ಸಾಕ್ಷಿ, Hoovu ಹಣ್ಣು, Chinna Nee ನಗುತಿರು, Karulina ಕುಡಿ, ಹಾಗು ಜಗದೀಶ್ವರಿ ಎಂಬ ಕನ್ನಡ ಚಿತ್ರಗಲ್ಲಿ ಬೇಬಿ ಶಾಮಿಲಿ ಅವರು ನಟಿಸಿದ್ದಾರೆ. ಬೇಬಿ ಶಾಮಿಲಿ ಅವರು 2000 ಇಸ್ವಿ ವರೆಗೆ ದಕ್ಷಿಣ ಭಾರತದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇದಾದ ನಂತರ ಅವಕಾಶಗಳು ಕಮ್ಮಿ ಆಗಿ ಶಾಮಿಲಿ ಅವರು ವಾಪಾಸ್ ಸ್ಕೂಲ್ ನತ್ತ ಹೋಗಿ, ತಮ್ಮ ವಿದ್ಯಾಭ್ಯಾಸವನ್ನು ಮುಂದು ವರಿಸಿದ್ದಾರೆ. ಸುಮಾರು 9 ವರ್ಷಗಳ ಕಾಲ ಚಿತ್ರ ರಂಗದಿಂದ ದೂರ ಉಳಿದ ಬೇಬಿ ಶಾಮಿಲಿ ಅವರು 2009 ರಲ್ಲಿ ತೆರೆಕಂಡ Oye (ತೆಲುಗು) ಚಿತ್ರದ ಮೂಲಕ ಹೀರೋಯಿನ್ ಆಗಿ ಮತ್ತೆ ಸಿನಿಮಾ ರಂಗಕ್ಕೆ ಬಂದಿದ್ದಾರೆ.
ತೆಲುಗಿನ oye ಚಿತ್ರದ ತಮ್ಮ ಪಾತ್ರಕ್ಕಾಗಿ ಶಾಮಿಲಿ ಅವರಿಗೆ CineMAA Award for Best Female Debut ಅವಾರ್ಡ್ ಕೂಡ ಬಂತು. ಇದಾದ ನಂತರ ಶಾಮಿಲಿ ಅವರಿಗೆ ಬಹಳಷ್ಟು ಸಿನೆಮಾಗಳಲ್ಲಿ ಅವಕಾಶ ಬರಲು ಶುರು ಆಯಿತು. oye ಚಿತ್ರದ ನಂತರ ಸುಮಾರು 6 ವರ್ಷಗಳ ಕಾಲ ಬ್ರೇಕ್ ತಗೊಂಡ ಶಾಮಿಲಿ ಅವರು 2015 ರಲ್ಲಿ Valliyum Thetti Pulliyum Thetti ಎಂಬ ಮಲಯಾಳಂ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಇದಾದ ನಂತರ Veera Sivaji (ತಮಿಳು) ಹಾಗು Ammammagarillu (ತೆಲುಗು) ಚಿತ್ರಗಳಲ್ಲಿ ಹೀರೋಯಿನ್ ಆಗಿ ನಟಿಸಿದ್ದಾರೆ. ಶಾಮಿಲಿ ಅವರು ಇಲ್ಲಿಯ ತನಕ ಹೀರೋಯಿನ್ ಆಗಿ ಸುಮಾರು 4 ಚಿತ್ರಗಳಲ್ಲಿ ನಟಿಸಿದ್ದಾರೆ. ಶಾಮಿಲಿ ಅವರಿಗೆ ಸದ್ಯ ಕನ್ನಡದಲ್ಲೂ ಬಹಳಷ್ಟು ಅವಕಾಶಗಳು ಬರುತ್ತಿವೆ.

Previous article(video)IT ಅಧಿಕಾರಿಗಳೇ ಸ್ವಲ್ಪ ಸಮಯ ಕೊಡಿ ಎಂದು ಕೇಳಿದ ಪುನೀತ್ ರಾಜಕುಮಾರ್! ವಿಡಿಯೋ ನೋಡಿ
Next article(video)ಪೋಲಿಸ್ ಪೇದೆ ಪತ್ನಿ ಐಪಿಎಸ್ ಆದ ರೋಚಕ ಕಥೆ ಹೇಳಿದ ಖಡಕ್ ಪೊಲೀಸ್ ಅಧಿಕಾರಿ ರವಿ ಚನ್ನಣ್ಣನವರ್! ವಿಡಿಯೋ ನೋಡಿ ಆದಷ್ಟು ಶೇರ್ ಮಾಡಿ