health-Kannada

4 ಲಕ್ಷ ಆಯುರ್ವೇದ ಅರೋಗ್ಯ ಕಿಟ್ ವಿತರಣೆಗೆ ಚಾಲನೆ ನೀಡಿದ ಡಾಕ್ಟರ್ ಗಿರಿಧರ್ ಕಜೆ! ಇದು ಒಳ್ಳೆಯ ಸುದ್ದಿ

ಕೆಲ ದಿನಗಳ ಹಿಂದೆ ಪ್ರಸಿದ್ಧ ಆಯುರ್ವೇದ ವೈದ್ಯರಾದ ಡಾ.ಗಿರಿಧರ್ ಕಜೆ ಅವರು ಕರೊನಾ ಸೋಂಕಿಗೆ ಆಯುರ್ವೇದದ ಔಷಧಿ ಕಂಡುಹಿಡಿದಿದ್ದಾರೆ ಎಂದು ಸುದ್ದಿಯಾಗಿತ್ತು. ನಟ ನವರಸನಾಯಕ ಜಗ್ಗೇಶ್ ಸಹ ಇವರು ತಯಾರಿಸಿರುವ ಔಷಧಿಯನ್ನು ಬಲಸಬಹುದು ನಾನು ಸಹ ಬಳಸಿದ್ದೇನೆ ಎಂದು ಹೇಳಿದ್ದರು. ಅದರಂತೆಯೇ, ಬೆಂಗಳೂರಿನ ವಿಕ್ಟೊರಿಯ ಆಸ್ಪತ್ರೆಯಲ್ಲಿ ಕೆಲವು ರೋಗಿಗಳಿಗೆ ಡಾ.ಗಿರಿಧರ್ ಕಜೆ ಅವರು ತಯಾರಿಸಿರುವ ಔಷಧಿಯನ್ನು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು. ಹಾಗಾಗಿ ಈಗ ಶಿವಮೊಗ್ಗ ಜಿಲ್ಲೆಯಲ್ಲಿ 4 ಲಕ್ಷ ಜನರಿಗೆ ಡಾ.ಗಿರಿಧರ್ ಕಜೆ ಅವರು ತಯಾರಿಸಿರುವ ಔಷಧಿಯನ್ನು. ಆಯುಷ್ ಆಯುರ್ವೇದಿಕ್ ಕಿಟ್ ಮೂಲಕ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮೊದಲಿಗೆ ಪ್ರೈಮರಿ ಆಗಿ, 1 ಲಕ್ಷ ಆಯುರ್ವೇದಿಕ್ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕಿಟ್ ಗಳು ರೆಡಿಯಾಗಿದ್ದವು. 4 ಲಕ್ಷ ಜನರಿಗೆ ಆಯುರ್ವೇದಿಕ್ ಕಿಟ್ ವಿತರಣೆ ಮಾಡುತ್ತಿರುವುದು ದೇಶದಲ್ಲಿ ಇದೇ ಮೊದಲು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಈಶ್ವರಪ್ಪ ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಕುವೆಂಪು ರಂಗಮಂದಿರದಲ್ಲಿ ಈ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು. ಡಾ.ಗಿರಿಧರ್ ಕಜೆ ಅವರ ನೇತೃತ್ವದಲ್ಲಿ ಸಧ್ಯಕ್ಕೆ 1ಲಕ್ಷ ಕಿಟ್ ಗಳು ಲಭವಿದ್ದು, ಶೀಘ್ರದಲ್ಲೇ ಇನ್ನುಳಿದ 3ಲಕ್ಷ ಕಿಟ್ ಗಳು ತಯಾರಾಗಲಿವೆ. ಶಿವಮೊಗ್ಗದಲ್ಲಿರುವ ಪ್ರತಿಯೊಬ್ಬರಿಗೂ ಈ ಕಿಟ್ ತಲುಪಲಿದೆ. ವಿತರಣಾ ಕೆಲಸವನ್ನು ವಾರ್ಡ್ ಪ್ರಕಾರ ಮಾಡಲಾಗುವುದು ಎಂದಿದ್ದಾರೆ ಸಚಿವರು.
ವಿತರಣೆ ಮಾಡಲು ಬರುವ ಸ್ವಯಂ ಸೇವಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಒಂದು ಜಾಗದಲ್ಲಿ 10 ಕ್ಕಿಂತ ಹೆಚ್ಚು ಸ್ವಯಂ ಸೇವಕರು ಇರುವ ಹಾಗಿಲ್ಲ. ಸ್ವಯಂ ಸೇವಕರು ಹಾಗೂ ದಾನಿಗಳ ಸಹಾಯದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ. ಡಾ.ಗಿರಿಧರ್ ಕಜೆ ಅವರು ತಯಾರಿಸಿರುವ ಆಯುರ್ವೇದದ ಔಷಧಿ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲು ಸರ್ಕಾರ ಅನುಮತಿ ನೀಡಲಿದೆ. ಕಾರ್ಯಕ್ರಮದಲ್ಲಿ ಮಾತನಾಡಿರುವ ಡಾ.ಗಿರಿಧರ್ ಕಜೆ ಅವರು.ಔಷಧೀಯ ಸಸ್ಯಗಳ ಮೂಲಕ ಹಲವಾರು ರೋಗಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಿದೆ. ಭಾರತೀಯ ಪರಂಪರೆಯ ಆಹಾರ ಪದ್ಧತಿ ಸಹಜವಾಗಿಯೇ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿದೆ. ಕರೊನಾ ಸೋಂಕಿನಿಂದ ಸಾವಿಗೀಡಾಗುವರ ಸಂಖ್ಯೆ ಕಡಿಮೆಯಾಗಿದ್ದು ಭಯ ಪಡುವ ಅಗತ್ಯವಿಲ್ಲ. ಆದರೆ ಸೋಂಕನ್ನು ಕಡೆಗಣಿಸಿದೆ, ಮಾರ್ಗಸೂಚಿಗಳನ್ನು ಪಾಲಿಸಿ, ಮನೆಮದ್ದಿನ ಮೂಲಕ ನಿಯಂತ್ರಿಸಬಹುದು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡರೆ ಭಯ ಪಡುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಶಾಸಕರಾದ ಆಯನೂರು ಮಂಜುನಾಥ, ಪ್ರಸನ್ನ ಕುಮಾರ್, ಆರ್ಯವೈಶ್ಯ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಎಂ.ಡಿ.ಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ, ಪಟ್ಟಾಭಿರಾಂ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೆಲ ದಿನಗಳ ಹಿಂದೆ ಪ್ರಸಿದ್ಧ ಆಯುರ್ವೇದ ವೈದ್ಯರಾದ ಡಾ.ಗಿರಿಧರ್ ಕಜೆ ಅವರು ಕರೊನಾ ಸೋಂಕಿಗೆ ಆಯುರ್ವೇದದ ಔಷಧಿ ಕಂಡುಹಿಡಿದಿದ್ದಾರೆ ಎಂದು ಸುದ್ದಿಯಾಗಿತ್ತು. ನಟ ನವರಸನಾಯಕ ಜಗ್ಗೇಶ್ ಸಹ ಇವರು ತಯಾರಿಸಿರುವ ಔಷಧಿಯನ್ನು ಬಲಸಬಹುದು ನಾನು ಸಹ ಬಳಸಿದ್ದೇನೆ ಎಂದು ಹೇಳಿದ್ದರು. ಅದರಂತೆಯೇ, ಬೆಂಗಳೂರಿನ ವಿಕ್ಟೊರಿಯ ಆಸ್ಪತ್ರೆಯಲ್ಲಿ ಕೆಲವು ರೋಗಿಗಳಿಗೆ ಡಾ.ಗಿರಿಧರ್ ಕಜೆ ಅವರು ತಯಾರಿಸಿರುವ ಔಷಧಿಯನ್ನು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು. ಹಾಗಾಗಿ ಈಗ ಶಿವಮೊಗ್ಗ ಜಿಲ್ಲೆಯಲ್ಲಿ 4 ಲಕ್ಷ ಜನರಿಗೆ ಡಾ.ಗಿರಿಧರ್ ಕಜೆ ಅವರು ತಯಾರಿಸಿರುವ ಔಷಧಿಯನ್ನು. ಆಯುಷ್ ಆಯುರ್ವೇದಿಕ್ ಕಿಟ್ ಮೂಲಕ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

Trending

To Top