Film News

ಬಿಡುಗಡೆಯಾಯ್ತು ಆಯರತ್ತಿಲ್ ಒರುವನ್-2 ಸಿನೆಮಾ ಪೋಸ್ಟರ್!

ಚೆನೈ: 2010 ರಲ್ಲಿ ಬಿಡುಗಡೆಯಾದ ಆಯರತ್ತಿಲ್ ಒರುವನ್ ಚಿತ್ರ ಇಡೀ ದಕ್ಷಿಣ ಭಾರತದ ಸಿನಿಪ್ರೇಕ್ಷಕರನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅಂದಹಾಗೆ ಈ ಚಿತ್ರವನ್ನು ತೆಲುಗಿನಲ್ಲಿ ಯುಗಾನಿಕಿ ಒಕ್ಕಡು ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿತ್ತು.

ಆಯರತ್ತಿಲ್ ಒರುವನ್ ಚಿತ್ರದ ಮುಂದುವರೆದ ಭಾಗವಾಗಿ ಆಯರತ್ತಿಲ್ ಒರುವನ್ ಭಾಗ-2 ನ್ನು ಸೆಲ್ವರಗನ್ ನಿರ್ದೇಶಿಸಲಿದ್ದಾರೆ. ಮೊದಲನೇ ಭಾಗವನ್ನು ಕಂಡ ಪ್ರೇಕ್ಷಕರು ಎರಡನೇ ಭಾಗಕ್ಕಾಗಿ ಕಾಯುತ್ತಿದ್ದು, ಸುಮಾರು 10 ವರ್ಷಗಳ ಬಳಿಕ ಈ ಚಿತ್ರದ ಭಾಗ-2 ಘೋಷಣೆಯಾಗಿದೆ. ಅಂದಹಾಗೆ ಈ ಚಿತ್ರವನ್ನು 2024 ರಲ್ಲಿ ಬಿಡುಗಡೆ ಮಾಡುವ ಯೋಚನೆಯಲ್ಲಿದ್ದಾರೆ ನಿರ್ದೇಶಕರು. ಪ್ರಸ್ತುತ ನಿರ್ದೇಶಕ ಸೆಲ್ವಗರನ್ ಸಿನೆಮಾಗೆ ಸಂಬಂಧಿಸಿದಂತೆ ಪೋಸ್ಟರ್ ವೊಂದನ್ನು ಸಹ ಬಿಡುಗಡೆ ಮಾಡಿದ್ದಾರೆ.

ಇನ್ನೂ ಆಯರತ್ತಿಲ್ ಒರುವನ್ ಚಿತ್ರದಲ್ಲಿ ನಟ ಸೂರ್ಯ ಅಭಿನಯಿಸಿದ್ದು, ಎರಡನೇ ಭಾಗದಲ್ಲಿ ಸೂಪರ್ ಸ್ಟಾರ್ ನಟ ಧನುಶ್ ರವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹಾಲಿವುಡ್ ಮಾದರಿಯಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿತ್ತು. ಇನ್ನೂ ಸಿನಿರಂಗಕ್ಕೆ ಕಾರ್ತಿ ಯವರಂತಹ ಪ್ರತಿಭಾನ್ವಿತ ನಟನನ್ನು ಕೊಟ್ಟ ಕೀರ್ತಿ ಆಯರತ್ತಿಲ್ ಒರುವನ್ ಚಿತ್ರಕ್ಕೆ ಸಲ್ಲುತ್ತದೆ.

ಈಗಾಗಲೇ ಧನುಷ್ ಹಾಲಿವುಡ್ ನ ದಿ ಗ್ರೇ ಮ್ಯಾನ್ ಎಂಬ ಚಿತ್ರದಲ್ಲಿ ನಟಿಸಲಿದ್ದಾರೆ. ಕ್ಯಾಪ್ಟನ್ ಅಮೇರಿಕಾ, ಅವೆಂಜರಸ್ ಸಿನೆಮಾಗಳನ್ನು ನಿರ್ದೇಶಿಸಿದ ರೊಸ್ಸೋ ಸಹೋದರರು ಈ ಸಿನೆಮಾದಲ್ಲಿ ನಟಿಸಲಿದ್ದಾರೆ. ಇನ್ನೂ ಆಯರತ್ತಿಲ್ ಒರುವನ್ ಸಿನೆಮಾ ಕೊನೆಯಲ್ಲಿ ರಾಜ ಸಾಯುತ್ತನೆ. ಆಯರತ್ತಿಲ್ ಒರುವನ್ 2 ಚಿತ್ರದಲ್ಲಿ ರಾಜ ಮತ್ತೆ ಬರಲಿದ್ದಾನೆ ಎಂದು ಹೇಳಲಾಗುತ್ತಿದ್ದು, ಇನ್ನೂ ಈ ಚಿತ್ರದ ಪ್ರಿ ಪ್ರೊಡಕ್ಷನ್ ಗೆ ಸುಮಾರು ಒಂದು ವರ್ಷಕ್ಕೂ ಹೆಚ್ಚು ಸಮಯ ಬೇಕಾಗಿದೆ ಎನ್ನಲಾಗುತ್ತಿದೆ.

Trending

To Top