167 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಹಾಲಿವುಡ್ ನ ಸಿನೆಮಾ ಅವತಾರ್-2!

ಸುಮಾರು 11 ವರ್ಷಗಳ ಹಿಂದೆ ಸಿನಿರಸಿಕರನ್ನು ಬೇರೊಂದು ಲೋಕಕ್ಕೆ ಕರೆದೊಯ್ದ ಸಿನೆಮಾ ಅವತಾರ್‍. ಇನ್ನೂ ಈ ಸಿನೆಮಾ ಬಹಳಷ್ಟು ಯಶಸ್ಸು ಸಹ ಕಂಡಿತ್ತು. ಇದೀಗ ಇದರ ಮುಂದುವರೆದ ಭಾಗ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಬರೊಬ್ಬರಿ 167 ಭಾಷೆಗಳಲ್ಲಿ ಈ ಸಿನೆಮಾ ಪ್ರದರ್ಶನ ಕಾಣಲಿದೆಯಂತೆ.

ಇತ್ತೀಚಿಗೆ ಪ್ಯಾನ್ ಇಂಡಿಯಾ ಹಾಗೂ ಪ್ಯಾನ್ ವರ್ಲ್ಡ್ ಸಿನೆಮಾಗಳು ಸಖತ್ ಹಿಟ್ ಆಗುತ್ತಿದ್ದು, ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿವೆ. ಹಾಲಿವುಡ್ ಸಿನೆಮಾಗಳನ್ನು ಸಹ ಬೇರೆ ಬೇರೆ ಭಾಷೆಗಳಲ್ಲಿ ಡಬ್ ಮಾಡಿ ಆಯಾ ಪ್ರಾಂತ್ಯದ ಜನರಿಗೆ ಸ್ಥಳೀಯ ಭಾಷೆಯಲ್ಲಿ ಸಿನೆಮಾ ನೋಡಲು ಅವಕಾಶ ಮಾಡಿಕೊಡುವ ಟ್ರಿಕ್ ಪ್ರೊಡ್ಯೂಸರ್‍ಸ್‌ ಗೆ ದೊಡ್ಡ ಮಟ್ಟದಲ್ಲಿ ಲಾಭ ತಂದುಕೊಡುತ್ತಿದೆ. ಇದೀಗ ಅವತಾರ್‍ -2 ಸಿನೆಮಾ ಬರೊಬ್ಬರಿ 167 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷವಾಗಿದೆ.

ಇನ್ನೂ ಈ ಸಿನೆಮಾ ವಿಶ್ವದ ಅನೇಕ ದೇಶಗಳಲ್ಲಿ ಬಿಡುಗಡೆಯಾಗುತ್ತಿದೆ. ಆಯಾ ದೇಶಗಳಲ್ಲಿನ ಭಾಷೆಗಳಲ್ಲಿಯೇ ಸಿನೆಮಾ ಬಿಡುಗಡೆ ಮಾಡಲು ನಿರ್ಮಾಪಕರು ಪ್ಲಾನ್ ಮಾಡಿದ್ದು, ಸಿನಿರಸಿಕರಿಗೆ ತಮ್ಮದೇ ಆದ ಭಾಷೆಯಲ್ಲಿ ಸಿನೆಮಾ ನೋಡುವ ಅವಕಾಶ ಬಂದಿದೆ. ಈ ಹಿಂದೆ ಹಾಲಿವುಡ್ ಸಿನೆಮಾಗಳನ್ನು ಕೇವಲ ಚೈನೀಸ್, ಹಿಂದಿ, ತೆಲುಗು, ಫ್ರೆಂಚ್ ಸೇರಿದಂತೆ ಕೆಲವು ಭಾಷೆಗಳಲ್ಲಿ ಸಿನೆಮಾ ಡಬ್ ಮಾಡಲಾಗುತ್ತಿತ್ತು. ಆದರೆ ಇದೀಗ ಅವತಾರ್‍-2 ಸಿನೆಮಾ ಬರೊಬ್ಬರಿ 167 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಅಂದಹಾಗೆ ಈ ಸಿನೆಮಾ ತೆರೆಗೆ ಬರಲು ಎಲ್ಲರೂ ಇದೇ ವರ್ಷ ಡಿಸೆಂಬರ್‍ 16 ರವರೆಗೂ ಕಾಯಬೇಕಿದೆ. ಇನ್ನೂ ಸಿನೆಮಾದ ಟೀಸರ್‍ ಮೇ.6ರಂದು ರಿಲೀಸ್ ಆಗಲಿದೆ. ಈ ಟೀಸರ್‍ ಅನ್ನು ಮಾರ್ವೆಲ್ ಸಿನೆಮಾ ಡಾಕ್ಟರ್‍ ಸ್ಟ್ರೇಂಜ್ ಶೀಘ್ರವೇ ಬಿಡುಗಡೆಯಾಗಲಿದ್ದು, ಅದೇ ಸಿನೆಮಾದಲ್ಲಿ ಟೀಸರ್‍ ಬಿಡುಗಡೆಯಾಗಲಿದೆಯಂತೆ.  ಇನ್ನೂ ಈ ಸಿನೆಮಾವನ್ನು ಜೇಮ್ಸ್ ಕ್ಯಾಮರೂನ್ ನಿರ್ಮಾಣ ಮಾಡಿದ್ದು, ಲೈಟ್ ಸ್ಟ್ರಾಮ್ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದೆ. ಅವತಾರ್‍-1 ರಿಂದ ಅವತಾರ್‍-5 ರವರೆಗೂ ಈ ಸಿನೆಮಾ ಸರಣಿಯಾಗಿ ಪ್ರದರ್ಶನವಾಗಲಿದೆ. ಅವತಾರ್‍-5 2028 ಕ್ಕೆ ಬಿಡುಗಡೆಯಾಗಲಿದೆ ಎನ್ನಲಾಗಿದೆ.

Previous articleಸ್ಯಾಂಡಲ್ ವುಡ್ ನಟಿ ರಮ್ಯಾ ಸಿನಿ ಪಯಣಕ್ಕೆ 19 ವರ್ಷ, ಶೀಘ್ರದಲ್ಲೇ ಹೊಸ ಸಿನೆಮಾ ಘೋಷಣೆ
Next articleಕಾಲಿವುಡ್ ಸ್ಟಾರ್ ಧನುಷ್ ಅಭಿನಯದ ಹಾಲಿವುಡ್ ಸಿನೆಮಾ ಪೋಸ್ಟರ್ ಸಖತ್ ವೈರಲ್.…