Film News

ನಟಿ ರಕುಲ್ ಹಾಗೂ ಚಿತ್ರತಂಡದ ಮೇಲೆ ದಾಳಿ

ಹೈದರಾಬಾದ್: ದಕ್ಷಿಣ ಭಾರತದ ಬಹುಬೇಡಿಕೆ ನಟಿ ರಕುಲ್ ಪ್ರೀತ್ ಸಿಂಗ್ ಎಟಾಕ್ ಎಂಬ ಚಿತ್ರದ ಶೂಟಿಂಗ್ ಗಾಗಿ ಉತ್ತರ ಪ್ರದೇಶಕ್ಕೆ ತೆರಳಿದ್ದು, ಇಲ್ಲಿ ಸ್ಥಳೀಯರು ನಟಿ ರಕುಲ್ ಹಾಗೂ ಚಿತ್ರದ ತಂಡದ ಮೇಲೆ ಕಲ್ಲುಗಳಿಂದ ದಾಳಿ ನಡೆಸಿದ್ದು, ಕೆಲವರಿಗೆ ಗಾಯಗಾಳಾಗಿವೆ ಎಂದು ತಿಳಿದು ಬಂದಿದೆ.

ಬಾಲಿವುಡ್ ನಟ ಜಾನ್ ಅಬ್ರಾಹಂ ಹಾಗೂ ರಕುಲ್ ಪ್ರೀತ್ ಸಿಂಗ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಎಟಾಕ್ ಚಿತ್ರದ ಶೂಟಿಂಗ್ ಗಾಗಿ ಚಿತ್ರತಂಡ ಉತ್ತರ ಪ್ರದೇಶದ ದನಿಪೂರ್ ಎಂಬಲ್ಲಿಗೆ ತೆರಳಿದ್ದರು. ಶೂಟಿಂಗ್ ನೋಡಲು ಸ್ಥಳೀಯರು ಮುಗಿಬಿದ್ದಿದ್ದರು. ಜನರನ್ನು ಕಂಟ್ರೋಲ್ ಮಾಡಲು ಸೆಕ್ಯೂರಿಟಿ ಸಿಬ್ಬಂದಿ ಸ್ವಲ್ಪ ಕಠಿಣವಾಗಿ ವರ್ತಿಸಿದ್ದಾರೆ. ಮೊದಲೇ ಮಾಸ್ ಏರಿಯಾ ಆಗಿದ್ದರಿಂದ ಅಲ್ಲಿನ ಜನರು ಕಲ್ಲು ತೂರಾಟ ನಡೆಸಿದ್ದಾರೆ.

ನಂತರ ಚಿತ್ರತಂಡ ಪೊಲೀಸರನ್ನು ಆಶ್ರಿಯಿಸಿದ್ದು, ಸ್ಥಳಕ್ಕೆ ಪೊಲೀಸರು ಬಂದ ನಂತರ ಸ್ಥಳೀಯರನ್ನು ಚದುರಿಸಿದ್ದಾರೆ. ಜೊತೆಗೆ ಶೂಟಿಂಗ್ ಕೆಲಸ ಮುಗಿಯವರೆಗೂ ಅಲ್ಲಿಯೇ ಇದ್ದು ಭದ್ರತೆ ಸಹ ನೀಡಿದ್ದಾರೆ. ಇನ್ನೂ ಈ ಕಲ್ಲು ತೂರಾಟದಲ್ಲಿ ಸೆಕ್ಯೂರಿಟಿ ಸಿಬ್ಬಂದಿಗೆ ಗಾಯಗಳಾಗಿದ್ದು, ನಟ ಜಾನ್ ಅಬ್ರಾಹಂ ಹಾಗೂ ನಟಿ ರಕುಲ್ ರವರಿಗೆ ಯಾವುದೇ ಗಾಯಗಳಾಗಿಲ್ಲ ಎನ್ನಲಾಗಿದೆ.

Trending

To Top