ಹೈದರಾಬಾದ್: ಕೊರಟಾಲ ಶಿವಾ ನಿರ್ದೇಶನದ ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ ಆಚಾರ್ಯ ಚಿತ್ರದಲ್ಲಿ ಬಾಂಬೆ ಚಿತ್ರದ ಖ್ಯಾತಿಯ ರೊಮ್ಯಾಂಟಿಕ್ ಹಿರೋ ಅರವಿಂದ ರಾಮಸ್ವಾಮಿ ವಿಲನ್ ಆಗಲಿದ್ದಾರಂತೆ!
ನಟ ಚಿರಂಜೀವಿ ಅವರಿಗೆ ಕೊರೋನಾ ಸೋಂಕು ದೃಡಪಟ್ಟಿದೆ ಎಂಬ ತಪ್ಪು ವರದಿಯಿಂದ ಆಚಾರ್ಯ ಶೂಟಿಂಗ್ ಮುಂದೂಡಬೇಕಿತ್ತು. ಆದರೆ ವರದಿ ತಪ್ಪೆಂದು ದೃಢಪಟ್ಟ ನಂತರ ಶೂಟಿಂಗ್ ಆರಂಭಿಸಲಾಗುತ್ತಿದೆಯಂತೆ. ಈಗಾಗಲೇ ಚಿತ್ರದ ನಿರ್ದೇಶಕ ಶಿವ ಚಿತ್ರೀಕರಣದ ಕೆಲಸಗಳನ್ನು ಶುರು ಮಾಡಿಕೊಂಡಿದ್ದಾರೆ. ಈ ನಡುವೆ ಚಿರಂಜೀವಿಗೆ ವಿಲನ್ ಆಗಿ ರೊಮ್ಯಾಂಟಿಕ್ ಹೀರೋ ಅರವಿಂದ ಸ್ವಾಮಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರಬಂದಿದೆ ಎನ್ನಲಾಗುತ್ತಿದೆ.
ಇನ್ನೂ ಅರವಿಂದ ಸ್ವಾಮಿ ಮಣಿರತ್ನಂ ನಿರ್ದೇಶನದ ರೋಜಾ ಹಾಗೂ ಬಾಂಬೆ ಚಿತ್ರಗಳ ಮೂಲಕ ಸಕ್ಸಸ್ ಆದ ಸ್ಟಾರ್ ನಟ. ಈ ಚಿತ್ರಗಳಲ ಮೂಲ ರೊಮ್ಯಾಂಟಿಕ್ ಹೀರೋ ಎಂದು ಖ್ಯಾತಿಗಳಿಸಿದ್ದರು. ನಂತರ ಅವರು ಸುಮಾರು ವರ್ಷಗಳ ಕಾಲ ಚಿತ್ರರಂಗದಿಂದ ದೂರವುಳಿದಿದ್ದರು. ನಂತರ ಪುನಃ ಮಣಿರತ್ನಂ ನಿರ್ದೇಶನದ ಕಡಲ್ ಚಿತ್ರದಲ್ಲಿ ಕಾಣಿಸಿಕೊಂಡರು. ನಂತರ ಥನಿ ಓರುವನ್ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ ನಂತರ ಅವರ ದಿಕ್ಕೇ ಬದಲಾಯಿತು. ಪ್ರಸ್ತುತ ಆಚಾರ್ಯ ಚಿತ್ರದಲ್ಲೂ ಸಹ ಖಳನಾಯಕನಾಗಿ ನಟಿಸುತ್ತಿರುವುದು ವಿಶೇಷ ಎನ್ನಬಹುದಾಗಿದೆ. ಅಷ್ಟೇ ಅಲ್ಲದೇ ಐತಿಹಾಸಿಕ ಚಿತ್ರವಾದ ಸೈರಾ ನರಸಿಂಹರೆಡ್ಡಿ ಚಿತ್ರದ ತಮಿಳು ಭಾಷೆಯಲ್ಲಿ ಅರವಿಂದ್ ಸ್ವಾಮಿಯವರೇ ಹಿನ್ನೆಲೆ ಧ್ವನಿಯನ್ನು ನೀಡಿದ್ದರು.
