Cinema

ಅರುಣ್ ಸಾಗರ್‌ ಪುತ್ರಿ ಅದಿತಿ ಸಾಗರ್‌ ಹೇಗಿದ್ದಾರೆ ನೋಡಿ! ಅವರ ಈ ಫೋಟೋಗಳು ವೈರಲ್ ಆಗಿದ್ದು ಯಾಕೆ ಗೊತ್ತಾ

ಕನ್ನಡ ಚಿತ್ರರಂಗದಲ್ಲಿ ಅರುಣ್ ಸಾಗರ್ ಅವರು ಬಹುಮುಖ ಪ್ರತಿಭೆ. ಇವರೊಬ್ಬ ನಟ ಹಾಗೂ ಆರ್ಟ್ ಡೈರೆಕ್ಟರ್. ಅರುಣ್ ಸಾಗರ್ ಎಂತಹ ಅದ್ಭುತ ನಟ ಎಂಬುದನ್ನು ಅವರು ನಟಿಸಿರುವ ಸಿನಿಮಾಗಳನ್ನು ನೋಡಿದರೆ ತಿಳಿಯುತ್ತದೆ. ಇನ್ನು ಅವರ ಆರ್ಟ್ ವರ್ಕ್ ಬಗ್ಗೆ ಎರಡನೇ ಮಾತು ಹೇಳುವ ಹಾಗಿಲ್ಲ. ಅಷ್ಟು ಅಚ್ಚುಕಟ್ಟಾಗಿ ಮಾಡಿರುತ್ತಾರೆ. ಅರುಣ್ ಸಾಗರ್ ಅವರು ನಟನೆ ಮತ್ತು ಆರ್ಟ್ ನಲ್ಲಿ ನಿಸ್ಸಿಮರು. ಅವರ ಮಗಳು ಅದಿತಿ ಬಗ್ಗೆ ನಿಮಗೆ ತಿಳಿದಿದೆಯೇ ? ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಸಾಧನೆ ಮಾಡಿದ್ದಾರೆ ಅರುಣ್ ಸಾಗರ್ ಅವರ ಮಗಳು ಅದಿತಿ. ತಂದೆ ನಟನೆ ಮತ್ತು ಆರ್ಟ್ ನಲ್ಲಿ ಎಕ್ಸ್ಪರ್ಟ್ ಆದರೆ, ಮಗಳು ಅದಿತಿ ಗಾಯನದಲ್ಲಿ ಎಕ್ಸ್ಪರ್ಟ್.

14ನೇ ವಯಸ್ಸಿನಲ್ಲಿಯೇ ಚಿತ್ರರಂಗದ ಗಾಯನ ಪ್ರಾಪಂಚಕ್ಕೆ ಕಾಲಿಟ್ಟರು ಅದಿತಿ ಸಾಗರ್. 2018 ರಲ್ಲಿ ತೆರೆಕಂಡ ರಾಂಬೋ2 ಸಿನಿಮಾದಲ್ಲಿ ದಮ್ ಮಾರೋ ದಮ್, ಅದಿತಿ ಸಾಗರ್ ಹಾಡಿದ ಮೊದಲ ಹಾಡು. ಮೊದಲ ಹಾಡಿನಲ್ಲೇ ಸಾಕಷ್ಟು ಜನಪ್ರಿಯತೆ ಗಳಿಸಿದರು ಅದಿತಿ. ಇವರ ಬೋಲ್ಡ್ ಆದ ಕಂಠಸಿರಿಗೆ ಮಾರು ಹೋಗದವರಿಲ್ಲ. ಮೊದಲ ಹಾಡಿಗೆ, ಆ ವರ್ಷದ ಫಿಲ್ಮ್ ಫೇರ್ ಬೆಸ್ಟ್ ಪ್ಲೇಬ್ಯಾಕ್ ಸಿಂಗರ್ ಅವಾರ್ಡ್ ಪಡೆದುಕೊಂಡರು. ನಂತರ ಕವಲುದಾರಿ ಸಿನಿಮಾದಲ್ಲಿ ಸಂಶಯ ಹಾಡನ್ನು ಹಾಡಿದರು. ನಂತರ ಕಥಾಸಂಗಮ ಸಿನಿಮಾದಲ್ಲಿ ಮನಸ್ಸಿನ ಒಳಗೆ ಹಾಡನ್ನು ಹಾಡಿದರು. ಇತ್ತೀಚೆಗೆ ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ಬೆಂಗಳೂರಿನ ಬಗ್ಗೆ ಇರುವ ಹಾಡನ್ನು ಅದಿತಿ ಹಾಡಿದ್ದಾರೆ.

2020 ರಲ್ಲಿ ಮಿರ್ಚಿ ಬೆಸ್ಟ್ ಸಿಂಗರ್ ಅವಾರ್ಡ್ ಸಹ ಸ್ವೀಕರಿಸಿದ್ದಾರೆ. ತಂದೆಯಂತೆ ಅದಿತಿ ಸಹ ಬಹಳ ಕ್ರಿಯೇಟಿವ್, ಅದಿತಿ ಹಂಚಿಕೊಂಡಿರುವ ಇನ್ಸ್ಟಾಗ್ರಾಮ್ ಫೋಟೋಗಳನ್ನು ನೋಡಿದರೆ, ಇದು ತಿಳಿಯುತ್ತದೆ. ಚಿಕ್ಕ ವಯಸ್ಸಿಗೆ ಇಷ್ಟು ಸಾಧನೆ ಮಾಡಿರುವ ಅದಿತಿ ಸಾಗರ್ ರ ಮುಂದಿನ ಭವಿಷ್ಯ ಚೆನ್ನಾಗಿರಲಿ ಇನ್ನಷ್ಟು ಸಾಧನೆಗಳನ್ನು ಅವರು ಮಾಡಲಿ ಎಂದು ಹಾರೈಸೋಣ.

Trending

To Top