ಹೈದರಾಬಾದ್: ಟಾಲಿವುಡ್ ನ ಖ್ಯಾತ ನಿರ್ದೇಶಕ ದಿವಂಗತ ಕೋಡಿ ರಾಮಕೃಷ್ಣ ಸಾರಥ್ಯದಲ್ಲಿ ಮೂಡಿಬಂದ ಅರುಂಧತಿ ಚಿತ್ರದಲ್ಲಿ ನಟಿಸಿದ ಬಾಲ ಅರುಂಧತಿ ಈಗ ಹಿರೋಯಿನ್ ಆಗಿದ್ದು, ಹಲವು ಸಿನೆಮಾಗಳಲ್ಲಿ ನಟಿಸುವ ಮೂಲಕ ಪ್ರಸಿದ್ದಿಯಾಗುತ್ತಿದ್ದಾರೆ.
ದಕ್ಷಿಣ ಭಾರತದ ಬಹುಬೇಡಿಕೆ ನಟಿ ಅನುಷ್ಕಾ ಈ ಚಿತ್ರದಲ್ಲಿ ನಾಯಕಿಯಾಗಿ ಎರಡು ರೀತಿಯ ಪಾತ್ರಗಳನ್ನು ಪೋಷಣೆ ಮಾಡಿದ್ದರು. ಈ ಚಿತ್ರದಲ್ಲಿ ಚಿಕ್ಕಂದಿನಲ್ಲಿದ್ದ ಜೇಜಮ್ಮ ಪಾತ್ರದಲ್ಲಿ ನಟಿಸಿದ್ದ ಬಾಲ ನಟಿ ಮುಖಚಿತ್ರ ಇಂದಿಗೂ ಅರುಂಧತಿ ಅಭಿಮಾನಿಗಳಲ್ಲಿ ಬೇರೂರಿದೆ. ಈ ಪಾತ್ರವನ್ನು ಪೋಷಣೆ ಮಾಡಿದ್ದು, ದಿವ್ಯ ನಾಗೇಶ್ ಎಂಬ ನಟಿ. ಇನ್ನೂ ಈ ಪಾತ್ರ ಪೋಷಿಸಿದ್ದಕ್ಕಾಗಿ ಬೆಸ್ಟ್ ಚೈಲ್ಡ್ ಆಕ್ಟ್ರೆಸ್ ಎಂಬ ನಂದಿ ಅವಾರ್ಡ್ ಸಹ ತೆಗೆದುಕೊಂಡಿದ್ದಾರೆ.
ಇನ್ನೂ ನಟಿ ದಿವ್ಯ ನಾಗೇಶ್ ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿ ತಮ್ಮ ಕೆರಿಯರ್ ಅನ್ನು ಬಿಲ್ಡ್ ಮಾಡಿಕೊಳ್ಳುತ್ತಿದ್ದಾರೆ. ಈಕೆ ಹೆಚ್ಚಾಗಿ ಮಲಯಾಳಂ ಚಿತ್ರಗಳಲ್ಲಿ ನಟಿಸುತ್ತಿದ್ದು, ಟಾಲಿವುಡ್ನಲ್ಲೂ ಸಹ ನೇನು ನಾನ್ನ ಅಬದ್ದಂ ಎಂಬ ಸಿನೆಮಾದಲ್ಲೂ ಸಹ ನಾಯಕಿಯಾಗಿ ನಟಿಸಿದ್ದಾರೆ. ಸದ್ಯ ದಿವ್ಯ ನಾಗೇಶ್ ರವರ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಈಕೆಯ ಪೊಟೋಗಳನ್ನು ನೋಡಿದ ನೆಟ್ಟಿಗರು ಆಶ್ಚರ್ಯಚಿಕಿತರಾಗಿದ್ದಾರೆ.
ಇನ್ನೂ ಅರುಂಧತಿ ಚಿತ್ರ ಮಹಿಳಾ ಪ್ರಧಾನ್ಯ ಚಿತ್ರವಾಗಿದ್ದು, 2009 ರಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ಇನ್ನೂ ಈ ಚಿತ್ರ ನಿರೀಕ್ಷೆಗೂ ಮೀರಿ ಬಾಕ್ಸ್ ಆಫೀಸ್ ಅನ್ನು ಬ್ರೇಕ್ ಮಾಡಿತ್ತು. ಸುಮಾರು ೪೩ ಕೋಟಿ ಆದಾಯವನ್ನು ಅರುಂಧತಿ ಚಿತ್ರ ಗಳಿಸಿದೆ ಎನ್ನಲಾಗಿದ್ದು, ಈ ಚಿತ್ರದಲ್ಲಿ ಖಳನಾಯಕನಾಗಿ ಸೋನು ಸೂದ್ ಅಘೋರ ಪಾತ್ರದಲ್ಲಿ ನಟಿಸಿದ್ದು, ಇಂದಿಗೂ ಸಹ ವೊದಲ ಬೊಮ್ಮಾಲಿ ವೊದಲ ಡೈಲಾಗ್ ಪ್ರಚಲಿತದಲ್ಲಿದೆ.
