HomeKarnatakaಕೊರೊನಾಗೆ ಬಲಿಯಾಯ್ತು ಖ್ಯಾತ ನಿರೂಪಕನ ಇಡೀ ಕುಟುಂಬ !

ಕೊರೊನಾಗೆ ಬಲಿಯಾಯ್ತು ಖ್ಯಾತ ನಿರೂಪಕನ ಇಡೀ ಕುಟುಂಬ !

ದೇಶದಲ್ಲಿ ಕೊರೋನ ಎರಡನೇ ಅಲೆ ತನ್ನ ರೌದ್ರನರ್ತನ ಮುಂದುವರೆಸುತ್ತಿದ್ದು, ಇದರಿಂದ ಆಗುತ್ತಿರುವ ಅವಾಂತರಗಳು ಒಂದೆರಡಲ್ಲ ಸಿನಿಮಾ ನಟರು ದೊಡ್ಡದೊಡ್ಡ ವ್ಯಕ್ತಿಗಳು ಸೇರಿದಂತೆ ಹಲವರು ಈ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ.ಇತ್ತೀಚೆಗಷ್ಟೇ ಕನ್ನಡದ ಖ್ಯಾತ ನಿರ್ಮಾಪಕ ಕೋಟಿ ರಾಮು ಮತ್ತು ರನ್ನ ಚಿತ್ರದ ನಿರ್ಮಾಪಕ ಚಂದ್ರಶೇಖರ್ ಅವರನ್ನ ಈ ಕೊರೋನ ಬಲಿ ಪಡೆದ್ದಿತ್ತು.

ಇದೀಗ ಈ ಕೊರೋನ ಮಹಾಮಾರಿಗೆ ಖ್ಯಾತ ನಿರೂಪಕರ ಇಡೀ ಕುಟುಂಬವೇ ಬಲಿಯಾಗಿದ್ದು, ಈ ಕುಟುಂಬದಲ್ಲಿ ಬದುಕುಳಿದಿರುವ ಈ ನಿರೂಪಕ ಕಣ್ಣೀರಿಡುತ್ತಿದ್ದಾರೆ.

ಈ ಕೊರೊನಾದ ರಣಕೇಕೆಯಲ್ಲಿ ದಿನಕ್ಕೆ 3500ಕೂ ಹೆಚ್ಚು ಜನರು ಮೃತಪಡುತ್ತಿದ್ದಾರೆ.ಈ ದೇಶದಲ್ಲಿ ಒಂದೇ ದಿನಕ್ಕೆ 4 ಲಕ್ಷ ಸೋಂಕಿತರು ದಾಖಲಾಗುತ್ತಿದ್ದಾರೆ. ಪಬ್ಲಿಕ್ ಟಿವಿ ನಿರೂಪಕ ಆದ ಅರುಣ್ ಬಡಿಗೇರ್ ಅವರ ತಂದೆ ತಾಯಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ.ಅರುಣ್ ಬಡಿಗೇರ್ ಅವರ ತಾಯಿ ಕಸ್ತೂರಮ್ಮ ಬಡಿಗೇರ್ ಅವರು ಮೂರು ದಿನಗಳ ಹಿಂದೆ ಕೊರೊನಾಗೆ ಬಲಿಯಾಗಿದ್ದರು.ಅರುಣ್ ಅವರ ತಂಗಿಗೆ ಮದುವೆ ನಿಶ್ಚಯ ಮಾಡಿ ಮದುವೆ ಮಾಡಿ ಕಲಿಸಲು ಎಲ್ಲವೂ ನಿಶ್ಚಯವಾಗಿತ್ತು ಆದರೆ ಇದೀಗ ಅವರ ತಂದೆ 68 ವರ್ಷದ ಚಂದ್ರಶೇಖರ್ ಬಡಿಗೇರ್ ಅವರು ಸಹ ನೆನ್ನೆ ಕೊರೋನಗೆ ಬಲಿಯಾಗಿದ್ದಾರೆ.

ಕೋರೋನದಿಂದ ಮೃತ ಪಟ್ಟಿದ್ದ ಅವರನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ತೀವ್ರ ಅಸ್ವಸ್ಥರಾಗಿದ್ದ ಅವರು ಅರೋಗ್ಯದಲ್ಲಿ ಚೇತರಿಕೆಯಾಗದೆ ಮೃತ ಪಟ್ಟಿದ್ದಾರೆ.ಈ ಘಟನೆಯಿಂದಾಗಿ ಇಡೀ ಕುಟುಂಬ ಹೊರಬರಲಾಗದೆ ಕಣ್ಣೀರಿನಲ್ಲಿ ಮುಳುಗಿದೆ.

You May Like

More