News

ಅನುಶ್ರೀ ಬಗ್ಗೆ ಅರ್ಜುನ್ ಜನ್ಯ ಹೇಳಿದ್ದೇನು ನೋಡಿ

ಕಳೆದ ಎರಡು ದಿನಗಳ ಹಿಂದೆ ಅನುಶ್ರೀ ಕುರಿತು ಇಡೀ ರಾಜ್ಯ ಬೆಚ್ಚಿ ಬೀಳುವ ಸುದ್ದಿ ಹೊರಬಿದ್ದಿತ್ತು. ಕಳೆದ ವರ್ಷ ಕರ್ನಾಟಕದಲ್ಲಿ ಸುದ್ದಿ ಯಾಗಿದಂತಹ ಆನುಶ್ರೀ ಡ್ರ-ಗ್ಸ್ ಪ್ರಕರಣ ಒಂದು ವರ್ಷದ ಬಳಿಕ ಅನುಶ್ರೀ ಆ ಕೇಸ್ ನಲ್ಲಿ ಇದ್ದಾರೆ ಮಾ-ದ-ಕ ವಸ್ತು ಸೇ-ವ-ನೆ ಜೊತೆಗೆ ಸ-ಪ್ಲೈ ಕೂಡ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು.
ಈ ಸುದ್ದಿ ಹೊರ ಬಿದ್ದ ಕೆಲವು ಗಂಟೆಗಳಲ್ಲೇ ಅನುಶ್ರೀ ಪ್ರಕರಣದಲ್ಲಿ ಇಲ್ಲ ಅವರು ನಮ್ಮ ಜೊತೆ ಡ್ರ-ಗ್ಸ್ ಪಾರ್ಟಿ ಮಾಡಿದ್ದರು ಎಂದು ಒಬ್ಬ ಆರೋಪಿ ಕಿಶೋರ್ ಶೆಟ್ಟಿ ಪ್ರಕರಣ ಕೊಟ್ಟಿದ್ದ.

ಇದಾದ ಬಳಿಕ ಅನುಶ್ರೀ ಮೀಡಿಯಾ ಮುಂದೆ ಬಂದು ನಂದೇನು ತಪ್ಪಿಲ್ಲ ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಖಡಕ್ ಆಗಿ ಹೇಳಿದ್ದರು. ಇದರ ಬೆನಲ್ಲೇ ಅನುಶ್ರೀ ಬಗ್ಗೆ ಅರ್ಜುನ್ ಜನ್ಯ ಶಾಕಿಂಗ್ ಹೇಳಿಕೆ ಒಂದನ್ನ ಕೊಟ್ಟಿದ್ದಾರೆ. ಅನುಶ್ರೀ ಮುಂಬೈ ಗೆ ಎಸ್ಕೇಪ್ ಆಗಿದ್ದಾರೆ ಎನ್ನುವ ಬೆನ್ನಲ್ಲೇ ಲೈವ್ ಬಂದು ಇದರಿಂದ ತನ್ನ ತಾಯಿಯ ಆರೋಗ್ಯದ ಮೇಲೆ ಏನಾದರೂ ಪರಿಣಾಮ ಬೀರಿದ್ರೆ ಯಾರಾದರೂ ಇರಲಿ ಯಾರನ್ನು ಬಿಡಲ್ಲ ಎಂದು ಪ್ರಶಾಂತ್ ಸಂಬರ್ಗಿ ಮತ್ತು ಇಂದ್ರಜೀತ್ ವಿರುದ್ಧ ಪರೋಕ್ಷವಾಗಿ ಗುಡುಗಿದ್ದರು.

ಇದೀಗ ಅರ್ಜುನ್ ಜನ್ಯ ಅನುಶ್ರೀ ಬಗ್ಗೆ ಮಾತನಾಡಿದ್ದು ಅನುಶ್ರೀ ಅವರ ಜೊತೆ ಕಳೆದ 10 ವರ್ಷಗಳಿಂದ ಕೆಲಸ ಮಾಡಿದ್ದೇನೆ. ಸರಿಗಮಪ ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಅವರನ್ನ ಹೆಚ್ಚಾಗಿ ಗಮನಿಸಿದ್ದೇನೆ. ಅಷ್ಟೇ ಅಲ್ಲದೆ ವೈಯಕ್ತಿಕ ಸಭೆ ಸಮಾರಂಭಗಳಲ್ಲಿ ಕೂಡ ಅವರ ಜೊತೆ ಭಾಗಿಯಾಗಿದ್ದೇನೆ. ಎಲ್ಲದರಲ್ಲೂ ಕೂಡ ಅವರ ನಡುವಳಿಕೆ ತುಂಬಾ ಚೆನ್ನಾಗಿದೆ. ಕೆಲವು ಜನ ಅವರ ಬೆಳವನಿಗೇ ನೋಡದೆ ಬಗ್ಗೆ ಸುಳ್ಳು ಸುದ್ದಿ ಹಬ್ಭಿಸುತ್ತಿದ್ದಾರೆ. ನಾನು ನೋಡಿದ ಹಾಗೆ ಅನುಶ್ರೀ ಯಾವುದೇ ಕೆಟ್ಟ ಕೆಲಸ ಮಾಡಿಲ್ಲ ಎಂದು ಖಡಕ್ ಆಗಿ ಹೇಳಿಕೆ ಕೊಟ್ಟಿದ್ದಾರೆ.

Trending

To Top