Film News

ಸಿನೆಮಾ ಥೀಯೇಟರ್ ಪೂರ್ಣ ಆಸನಗಳಿಗೆ ಅವಕಾಶ: ವಿರೋಧಿಸಿದ ನಟ

ಚೆನೈ: ಕೊರೋನಾ ಹಿನ್ನೆಲೆಯಲ್ಲಿ ಹೇರಿದ್ದ ಲಾಕ್ ಡೌನ್ ಸಡಿಲಿಕೆ ನಂತರ ಚಿತ್ರಮಂದಿರಗಳಲ್ಲಿ ಶೇ.50  ರಷ್ಟಕ್ಕೆ ಮಾತ್ರ ಅವಕಾಶ ನೀಡಿದ್ದು, ಇದೀಗ ತಮಿಳುನಾಡು ಸರ್ಕಾರ ಮಾತ್ರ ಶೇ.100 ರಷ್ಟು ಆಸನಗಳ ಭರ್ತಿಗೆ ನಿನ್ನೆಯಷ್ಟೆ ಅವಕಾಶ ನೀಡಿತ್ತು. ಆದರೆ ಇದನ್ನು ಖ್ಯಾತ ನಟ ಅರವಿಂದ ಸ್ವಾಮಿ ವಿರೋಧಿಸಿ ಟ್ವೀಟ್ ಮಾಡಿದ್ದಾರೆ.

ನಟಿ ವಿಜಯ್ ಅಭಿನಯದ ಮಾಸ್ಟರ್ ಸಿನೆಮಾ ಬಿಡುಗಡೆ ದಿನಾಂಕ ಘೋಷಣೆಗೂ ಮುನ್ನಾ ನಟ ವಿಜಯ್ ರವರು ಸಿಎಂ ಬಳಿ ತೆರಳಿ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನಗಳ ಭರ್ತಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು, ಮನವಿ ಮಾಡಿದ ಬಳಿಕ ತಮಿಳುನಾಡು ಸರ್ಕಾರ ಅನುಮತಿ ನೀಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ನಿರ್ಧಾರವನ್ನು ಅನೇಕರು ಸ್ವಾಗತಿಸಿದರೇ, ಕೆಲವು ವಿರೋಧಿಸಿದ್ದಾರೆ. ಈ ಸಾಲಿನಲ್ಲಿ ಅರವಿಂದ ಸ್ವಾಮಿ ಕೂಡ ಒಬ್ಬರು.

ಅರವಿಂದ ಸ್ವಾಮಿ ಮಾಡಿರುವ ಟ್ವೀಟ್ ನಂತೆ ದೇಶದಲ್ಲಿನ ಪ್ರಸ್ತುತ ಸ್ಥಿತಿಯನ್ನು ಅವಲೋಕಿಸಿದರೇ 100 ರಷ್ಟು ಅವಕಾಶಕ್ಕಿಂತ 50 ರಷ್ಟು ಅವಕಾಶವೇ ಉತ್ತಮವಾಗಿದೆ ಎಂದಿದ್ದಾರೆ. ಇನ್ನೂ ಈ ಟ್ವೀಟ್ ಗೆ ಪರ ಹಾಗೂ ವಿರೋಧ ಕಾಮೆಂಟ್ ಗಳು ನೆಟ್ಟಿಗರಿಂದ ಬರುತ್ತಿದೆ. ಅರವಿಂದ ಸ್ವಾಮಿಯವರ ಟ್ವೀಟ್ ಪರವಾಗಿ ಒಬ್ಬರು ಇಂತಹ ನಿರ್ಧಾರಗಳಿಂದ ಬೇರೆಯರಿಗೆ ತೊಂದರೆಯಾಗುತ್ತದೆ. ಈಗ ಕೊಟ್ಟಿರುವ ಅನುಮತಿಯಿಂದ ಇದ್ದ 50 ರಷ್ಟು ಅನುಮತಿ ಸಹ ಹೋಗುತ್ತದೆ. ನಂತರ ಒಂದೇ ವಾರದಲ್ಲಿ ಚಿತ್ರಮಂದಿರಗಳೆಲ್ಲ ಮುಚ್ಚಬೇಕಾಗುತ್ತದೆ. ಕೊರೋನಾ ಹಿನ್ನೆಲೆಯಲ್ಲಿ ಎಲ್ಲಾ ಉದ್ಯಮಗಳು ಒಂದೇ ಆಗಿದ್ದು, ಇದರಿಂದ ಚಿತ್ರಮಂದರಿಗಳು ಹೊರತಾಗಿಲ್ಲ ಎಂದು ಬೆಂಬಲಿಸಿದರೇ, ಮತ್ತೋರ್ವ ನೆಟ್ಟಿನ ನಿಮ್ಮನ್ನು ಯಾರು ಚಿತ್ರಮಂದಿರಕ್ಕೆ ಹೋಗಿ ಎಂದು ಒತ್ತಾಯ ಮಾಡುತ್ತಿಲ್ಲ, ನಿಮಗೆ ಆಸಕ್ತಿ ಇದ್ದರೇ ಹೋಗಿ, ಭಯ ಇದ್ದರೇ ಹೋಗಬೇಡಿ ಇದು ಅತ್ಯಂತ ಸರಳವಾದ ವಿಚಾರ ಎಂದು ಟೀಕಿಸಿದ್ದಾರೆ. ಮುಖ್ಯವಾಗಿ ನಟಿ ಖುಷ್ಬು ರವರು ಸಹ ಅರವಿಂದ ಸ್ವಾಮಿರವರ ಟ್ವೀಟ್ ನ್ನು ಬೆಂಬಲಿಸಿದ್ದಾರೆ.

Trending

To Top