ಸದ್ದು ಗದ್ದಲವಿಲ್ಲದೆ ನಡೆದ ಎ.ಆರ್.ರೆಹಮಾನ್ ಪುತ್ರಿಯ ವಿವಾಹ

ಭಾರತ ಸಿನಿರಂಗದ ಖ್ಯಾತ ಸಂಗೀತ ನಿರ್ದೇಶಕ ಸಂಗೀತ ಮಾಂತ್ರಿಕ ಎ.ಆರ್‍.ರೆಹಮಾನ್ ರವರ ಪುತ್ರಿಯ ವಿವಾಹ ಕಾರ್ಯಕ್ರಮ ಸದ್ದಿಲ್ಲದೇ ನಡೆದಿದೆ. ರೆಹಮಾನ್ ರವರ ಪುತ್ರಿ ಖತೀಜಾ ರೆಹಮಾನ್ ಹಾಗೂ ರಿಯಾಸ್ದೀನ್ ಶೇಕ್ ಮೊಹಮದ್ ರವರ ಮದುವೆ ಸಮಾರಂಭ ನಡೆದಿದ್ದು, ಅಭಿಮಾನಿಗಳು ಸೇರಿದಂತೆ ಸಿನಿರಂಗದ ಪ್ರಮುಖರು ಶುಭ ಹಾರೈಸಿದ್ದಾರೆ.

ಸಂಗೀತ ಮಾಂತ್ರಿಕ ಎ.ಆರ್‍.ರೆಹಮಾನ್ ತಮ್ಮ ಪ್ರೀತಿಯ ಪುತ್ರಿ ಖತೀಜಾ ರೆಹಮಾನ್ ರವರನ್ನು ಉದ್ಯಮಿ ರಿಯಾಸ್ದೀನ್ ಶೇಕ್ ಮೊಹಮದ್ ರವರಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಇನ್ನೂ ಈ ಶುಭಸುದ್ದಿಯನ್ನು ಮದುವೆ ಪೊಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ರೆಹಮಾನ್ ರವರು ಹಂಚಿಕೊಂಡಿದ್ದು, ಈ ನವವಿವಾಹಿತರಿಗೆ ಶುಭಾಷಯಗಳ ಸುರಿಮಳೆ ಹರಿದು ಬರುತ್ತಿದೆ. ಇನ್ನೂ ಈ ಮದುವೆ ಮೇ.05 ಗುರುವಾರದಂದು ನಡೆದಿದೆ.

ಇನ್ನೂ ಎ.ಆರ್‍.ರೆಹಮಾನ್ ರವರು ಮದುವೆಯ ಕೆಲವು ಪೊಟೋಗಳನ್ನು ಅವರ ಅಧಿಕೃತ ಟ್ವಿಟರ್‍ ಹಾಗೂ ಇನ್ಸ್ಟಾಗ್ರಾಂ ನಲ್ಲಿ ಹಂಚಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ರೆಹಮಾನ್ ಪತ್ನಿ ಸಾಯಿರಾ ಭಾನು, ರೆಹಮಾನ್ ರವರ ಮಕ್ಕಳಾದ ಅಮೀನ್, ರಹೀಮಾ ಎಲ್ಲರೂ ಇದ್ದು ನವದಂಪತಿಯ ಜೊತೆ ಪೋಸ್ ಕೊಟ್ಟಿದ್ದಾರೆ. ಪೊಟೋ ಜೊತೆಗೆ ರೆಹಮಾನ್ ನೂತನ ದಂಪತಿಗಳಿಗೆ ದೇವರು ಆರ್ಶೀವದಿಸಲಿ, ನಿಮ್ಮ ಶುಭಾಷಯಗಳಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಇನ್ನೂ ಪೊಟೋಗಳನ್ನು ಕಂಡ ಅಭಿಮಾನಿಗಳು ಹಾಗೂ ನೆಟ್ಟಿಗರು ಶುಭಾಷಯಗಳ ಸುರಿಮಳೆಗೈದಿದ್ದಾರೆ. ಉದ್ಯಮಿ ರಿಯಾಸ್ದೀನ್ ಶೇಖ್ ಜೊತೆ ಕಳೆದ ವರ್ಷವೇ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿತ್ತು. ಖತೀಜಾಳ ಹುಟ್ಟುಹಬ್ಬದ ದಿನದಂದೆ ನಿಶ್ಚಿತಾರ್ಥ ಮಾಡಿಕೊಳ್ಳಲಾಗಿತ್ತು. ಈ ನೂತನ ದಂಪತಿಗಳಿಗೆ ಶ್ರೇಯಾ ಘೋಷಾಲ್ ಸೇರಿದಂತೆ ಅನೇಕ ಗಣ್ಯರು ಶುಭಾಷಯಗಳನ್ನು ಕೋರಿದ್ದಾರೆ.

Previous articleಸೂಪರ್ ಸ್ಟಾರ್ ರಜನಿ ಜೊತೆ ಶಿವಣ್ಣ ಸಿನೆಮಾ ಫಿಕ್ಸ್.. ಅತಿಥಿ ಪಾತ್ರದಲ್ಲಿ ಶಿವಣ್ಣ…
Next articleಜೂ. ಎನ್.ಟಿ.ಆರ್ ದಂಪತಿ ಹಾಗೂ ಪ್ರಶಾಂತ್ ನೀಲ್ ದಂಪತಿ ಒಂದೇ ಫ್ರೇಮ್ ನಲ್ಲಿ…