Actors

ಯಶ್ ಅವರ ಬಳಿ ಇದ್ದ ಅದೊಂದು ವಸ್ತು ಪುನೀತ್ ಅವರಿಗೆ ತುಂಬಾ ಇಷ್ಟವಾಗಿತ್ತು

ಪುನೀತ್ ರಾಜ್ ಕುಮಾರ್ ಅವರ ಸರಳತೆಯ ಬಗ್ಗೆ ಎಲ್ಲರಿಗೂ ಗೊತ್ತು. ಅದರಲ್ಲೂ ಪುನೀತ್ ಅವರು ತಮ್ಮ ಸಹ ನಟರ ಜೊತೆ ಇರುತ್ತಿದ್ದ ರೀತಿ ನಿಜಕ್ಕೂ ಅವರ ದೊಡ್ಡ ಗುಣವೇ ಸರಿ. ಸದಾ ಸರಳತೆ ಇರುವ ಪುನೀತ್ ಅವರಿಗೆ ಯಶ್ ಅವರ ಬಳಿ ಇದ್ದ ಆ ಒಂದು ವಸ್ತು ಬಹಳ ಇಷ್ಟ ಇತ್ತು.

ಅವರು ಒಂದು ಕಾರ್ಯಕ್ರಮದಲ್ಲಿ ಯಶ್ ಬಳಿ ಇರುವ ಆ ವಸ್ತು ತಮಗೆ ಬೇಕು ಎಂದು ಕೇಳಿದ್ದರು. ಎಲ್ಲರನ್ನು ಒಂದೇ ರೀತಿ ನೋಡುವ ಪುನೀತ್ ಅವರಿಗೆ ಯಶ್ ಅವರ ಮೇಲೆ ಕೊಂಚ ಜಾಸ್ತಿ ಅಭಿಮಾನವಿತ್ತು ಅದಕ್ಕೆ ಕಾರಣ ಯಶ್ ಅವರಿಗೂ ಸಹ ಕನ್ನಡ ಸಿನಿಮಾರಂಗವನ್ನು ದೊಡ್ಡ ಮಟ್ಟದಲ್ಲಿ ತೆಗೆದೊಯ್ಯಬೇಕೆಂಬ ಬಯಕೆ ಇರುವುದು. ಯಶ್ ಅವರ ಆಸೆಯಂತೆ ಕೆಜಿಎಫ್ ಸಿನಿಮಾ ಎಲ್ಲೆಡೆ ದೊಡ್ಡ ಹೆಸರು ಮಾಡಿತ್ತು.

ಇದರ ಬಗ್ಗೆ ಬಹಳಷ್ಟು ಬಾರಿ ಮಾತನಾಡಿದ ಅಪ್ಪು ಯಶ್ ಅವರ ಬಳಿ ಇದ್ದ ಆ ವಸ್ತುವನ್ನು ಇಷ್ಟ ಪಟ್ಟು ಯಶ್ ಅವರ ಬಳಿ ಹೇಳಿಕೊಂಡಿದ್ದರು. ಪುನೀತ್ ಅವರು ಆಸೆ ಪಟ್ಟಿದ್ದು ಬೇರೆ ಏನು ಅಲ್ಲ ಯಶ್ ಅವರ ಗಡ್ಡವನ್ನು. ಇದನ್ನು ಸಾಕಷ್ಟು ಬಾರಿ ಹೇಳಿದ ಅಪ್ಪು ಯಶ್ ಅವರ ಗಡ್ಡ ತುಂಬಾ ಇಷ್ಟ ಆದರೆ ಏನು ಮಾಡುವುದು ನಮಗೆ ಆ ರೀತಿ ಗಡ್ಡ ಬರುವುದಿಲ್ಲವಲ್ಲ ಎಂದು ಮಗುವಿನಂತೆ ನಗುತ್ತಿದ್ದರು.

ಈ ಬಗ್ಗೆ ನಿರೂಪಕಿ ರಶ್ಮಿ ಅವರ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದ ಅಪ್ಪು ತಮಗೆ ಯಶ್ ಅವರ ಕೆಜಿಎಫ್ ಶೈಲಿಯ ಗಡ್ಡ ಬೇಕು ಎಂದು ಹೇಳಿ ನಕ್ಕಿದ್ದರು.

Trending

To Top