ಸದ್ಯ ನಮ್ಮ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು, ತಮ್ಮ ಹೊಚ್ಚ ಹೊಸ ಚಿತ್ರವಾದ ಯುವರತ್ನ ಚಿತ್ರದ ಚಿತ್ರೀಕರಣದಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಈ ಚಿತ್ರವನ್ನು ರಾಜಕುಮಾರ ಖ್ಯಾತಿಯ ಸಂತೋಷ್ ಅವರು ನಿರ್ದೇಶನ ಮಾಡುತ್ತಿದ್ದಾರೆ! ಈ ಚಿತ್ರದ ಚಿತ್ರೀಕರಣ ನೆನ್ನೆ ಮೈಸೂರಿನಲ್ಲಿ ನಡೆಯುತ್ತಿತ್ತು. ಇದೆ ಸಮಯದಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಫ್ 2 ಚಿತ್ರದ ಚಿತ್ರೀಕರಣ ಕೂಡ ಮೈಸೂರಿನಲ್ಲಿ ನಡೆಯುತ್ತಿತ್ತು. ವಿಷ್ಯ ಗೊತ್ತಾದ ಪುನೀತ್ ರಾಜಕುಮಾರ್ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಇಬ್ಬರು ಸೇರಿ ಮೀಟ್ ಮಾಡಿ, ಊಟ ಮಾಡಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದ್ದು, ಅಪ್ಪು ಹಾಗು ಯಶ್ ಹೇಗೆ ಊಟ ಮಾಡಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ಕನ್ನಡದ , ಕನ್ನಡಿಗರ ಹೆಮ್ಮೆಯ ಚಿತ್ರವಾದ ಕೆಜಿಫ್ ಕನ್ನಡ ಸಿನಿಮಾ ರಂಗದ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿದ್ದು ನಿಮಗೆ ಗೊತ್ತೇ ಇದೆ. ಕನ್ನಡ ಅಲ್ಲದೆ , ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಕೂಡ ಕೆಜಿಫ್ ಚಿತ್ರ ಸಕತ್ ಸದ್ದು ಮಾಡಿತ್ತು. ಕೆಜಿಫ್ ಚಿತ್ರ ನೋಡಿದ ಮೇಲೆ ಇಡೀ ದೇಶದ ಜನ ಕೆಜಿಫ್ ಪಾರ್ಟ್ 2 ಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ನೆನ್ನೆ ಬೆಂಗಳೂರಿನಲ್ಲಿ ಕೆಜಿಫ್ ಚಿತ್ರದ ಚಾಪ್ಟರ್ 2 ಮುಹೂರ್ತ ನಡೆಯಿತು. ಈ ಸಮಯದಲ್ಲಿ ಕೆಜಿಫ್ ರಾಕಿ ಭೈ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ಛಾಯಾಗ್ರಾಹಕ ಭುವನ್ ಗೌಡ, ನಿರ್ಮಾಪಕರು, ನಟಿಯಾದ ಶ್ರೀನಿಧಿ ಶೆಟ್ಟಿ ಕೂಡ ಆಗಮಿಸಿದ್ದರು. ಕೆಜಿಫ್ ಚಿತ್ರದ ಚಾಪ್ಟರ್ 2 ಶೂಟಿಂಗ್ ಇದೆ ವಾರದಿಂದ ಶುರು ಆಗಲಿದೆ. ಕೆಜಿಫ್ 2 ಮುಹೂರ್ತ ಹೇಗಿತ್ತು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರ ವಿಶ್ವ ದೆಲ್ಲೆಡೆ ಬಿಡುಗಡೆ ಆಗಿ ಭರ್ಜರಿ ಆಗಿ ಪ್ರದರ್ಶನ ಕಾಣುತ್ತಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಬಿಡುಗಡೆ ಆದ KGF ಚಿತ್ರ ಈಗ 25 ದಿನಗಳತ್ತ ಅದ್ಭುತವಾಗಿ ಪ್ರದರ್ಶನ ಕಾಣುತ್ತಿದೆ. KGF ಚಿತ್ರವನ್ನು ಇಡೀ ದೇಶದ ಜನ ಹಾಡಿ ಹೊಗಳಿದ್ದಾರೆ. KGF ಚಿತ್ರ ಕನ್ನಡ ಅಲ್ಲದೆ, ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಕೂಡ ಬಿಡುಗಡೆ ಆಗಿದೆ. ಬಲ್ಲ ಮೂಲಗಳ ಪ್ರಕಾರ KGF ಚಿತ್ರ ಹೊರ ದೇಶಗಳಲ್ಲಿ ಕೂಡ ಅದ್ಭುತವಾಗಿ ಪ್ರದರ್ಶನ ಕಾಣುತ್ತಿದೆ. KGF ಚಿತ್ರದ chapter 2 ಚಿತ್ರೀಕರಣ ಇದೇ ವರ್ಷ ಶುರು ಆಗಲಿದೆ. ಇನ್ನೂ ಕೆಲವೇ ತಿಂಗಳು ಗಳಲ್ಲಿ KGF chapter 2 ಶುರು ಆಗಲಿದೆ. KGF ಚಾಪ್ಟರ್ 2 ನಲ್ಲಿ ಯಾರ್ ಯಾರು ನಟಿಸುತ್ತಿದ್ದಾರೆ ಗೊತ್ತ? ಇಲ್ಲಿದೆ ಎಸ್ಕ್ಲ್ಯೂಸಿವ್ ಸುದ್ದಿ
ಕೆಲವು ಬಲ್ಲ ಮೂಲಗಳ ಪ್ರಕಾರ KGF ಚಿತ್ರದ chapter 2 ನಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಂಜಯ್ ದತ್ತ್ ಅವರು ನಟಿಸಲಿದ್ದಾರೆ. ಇದೇ ವಿಷ್ಯಕ್ಕೆ KGF ಚಿತ್ರ ತಂಡದವರು ಈಗಾಗಲೇ ಸಂಜು ಬಾಬಾ ನನ್ನ ಸಂಪರ್ಕ ಮಾಡಿದ್ದಾರೆ. ಇದೇ ತಿಂಗಳು KGF ಚಿತ್ರ ತಂಡದವರು ಸಂಜು ಬಾಬಾನನ್ನು ಭೇಟಿ ಕೂಡ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ಸುದ್ದಿ ಕೇಳಿ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಸಕತ್ ಖುಷಿ ತಂದಿದೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ. ಇದಲ್ಲದೆ ಸಂಜಯ್ ದತ್ತ್ ಅವರು KGF ಚಾಪ್ಟರ್ 2 ನಲ್ಲಿ ಒಂದು ವಿಶೇಷ ವಿಲ್ಲನ್ ಪಾತ್ರವನ್ನು ಮಾಡಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇದಲ್ಲದೆ ಮತ್ತೊಂದು ಎಸ್ಕ್ಲ್ಯೂಸಿವ್ ಸುದ್ದಿ ಏನಪ್ಪಾ ಅಂದರೆ KGF ಚಾಪ್ಟರ್ 2 ನಲ್ಲಿ ತೆಲುಗು ನಟಿ ರಮ್ಯಾ ಕೃಷ್ಣ ಅವರು ಕೂಡ ಒಂದು ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ರಮ್ಯಾ ಕೃಷ್ಣ ಅವರು ಈ ಹಿಂದೆ ಸುಮಾರು 15 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೆ ರಮ್ಯಾ ಕೃಷ್ಣ ಅವರು ತೆಲುಗಿನ ದೊಡ್ಡ ಚಿತ್ರ ಬಾಹುಬಲಿ ಚಿತ್ರದಲ್ಲಿ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಆದರೆ ರಮ್ಯಾ ಕೃಷ್ಣ ಅವರು KGF ಚಾಪ್ಟರ್ 2 ಚಿತ್ರದಲ್ಲಿ ಯಾವ ಪಾತ್ರ ಮಾಡುತ್ತಾರೆ ಎಂದು ಇನ್ನೂ ಕೂಡ ತಿಳಿದು ಬಂದಿಲ್ಲ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.
KGF ಚಾಪ್ಟರ್ 2 ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರೇ ಮುಖ್ಯ ಪಾತ್ರದಲ್ಲಿ ಮಿಂಚಲಿದ್ದಾರೆ. KGF ಚಾಪ್ಟರ್ ೨ ಚಿತ್ರದಲ್ಲಿ ಹೀರೋಯಿನ್ ಯಾರು ಎಂಬುವದರ ಬಗ್ಗೆ KGF ಚಿತ್ರ ತಂಡದವರು ಇನ್ನೂ ಮಾಹಿತಿ ನೀಡಿಲ್ಲ. ಇದಲ್ಲದೆ ಪ್ರಶಾಂತ್ ನೀಲ್ ಅವರೇ ಚಾಪ್ಟರ್ 2 ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಇದೇ ವರ್ಷ ಕೊನೆಗೆ KGF ಚಾಪ್ಟರ್ ೨ ಚಿತ್ರ ಬಿಡುಗಡೆ ಆಗಲಿದೆ. ಇದಾದ ನಂತರ ಯಶ್ ಅವರು ತಮ್ಮ ಕಿರಾತಕ ಚಿತ್ರದ ಶೂಟಿಂಗ್ ಮುಂದು ವರಿಸಲಿದ್ದಾರೆ. ಸದ್ಯ ರಾಕಿಂಗ್ ಸ್ಟಾರ್ ಯಶ್ ಅವರು IT ಅಧಿಕಾರಿಗಳ ವಿಚಾರಣೆಯಲ್ಲಿ ಬಹಳ ಬ್ಯುಸಿ ಆಗಿದ್ದಾರೆ.