ಶಿವರಾಜ್ ಕುಮಾರ್ ಅವರು ಒಂದು ವೇದಿಕೆಯ ಮೇಲೆ ಪುನೀತ್ ಅವರ ಬಗ್ಗೆ ಮಾತಾನಾಡಲು ಶುರು ಮಾಡಿದಾಗ ನಾನು ಇದರಲ್ಲೆಲ್ಲಾ ವೀಕ್ ರಾಘಣ್ಣ ಸ್ಟ್ರಾಂಗ್ ಇದ್ದಾರೆ ಎಂದು ಹೇಳಿದ ಕ್ಷಣ ಎಲ್ಲಾ ಅಭಿಮಾನಿಗಳ ಕಣ್ಮಲ್ಲಿ ನೀರು ತುಂಬಿ ಕೊಂಡಿತ್ತು. ಶಿವಣ್ಣ ಅವರು ನನಗೂ ಅಪ್ಪು ಗೂ 13 ವರ್ಷ ವ್ಯತ್ಯಾಸ ವಿದೆ ಆದರೂ ಸಹ ನಮ್ಮ ನಡುವಿನ ಒಡನಾಟ ಅಷ್ಟೇ ಚೆನ್ನಾಗಿತ್ತು.
ಪ್ರತಿದಿನವೂ ಸಹ ನಾನು ಅಪ್ಪು ಫೋಟೋ ನೋಡಿದಾಗ ನನ್ನ ಕಣ್ಣಲ್ಲಿ ನೀರು ಬರುತ್ತದೆ, ಎಮೋಷನಲ್ ಆಗುತ್ತೇನೆ ಎಂದು ಹೇಳಿದ್ದಾರೆ. ನಾನು ಅಳಬಾರದು ಎಂದುಕೊಳ್ಳುತ್ತೇನೆ ಆದರೆ ಯಾವುದೋ ಒಂದು ಫೋಟೋ ಅಥವಾ ದೃಶ್ಯ ನೋಡಿ ನನ್ನ ಕಣ್ಣಲ್ಲಿ ನೀರು ಬರುತ್ತದೆ, ಇದರಲ್ಲೆಲ್ಲಾ ರಾಘಣ್ಣ ಅವರು ತುಂಬಾ ಸ್ಟ್ರಾಂಗ್ ನಾನು ಇದರಲ್ಲೆಲ್ಲಾ ತುಂಬಾ ವೀಕ್ ಎಂದಿದ್ದಾರೆ.
ಶಿವಣ್ಣನ ಮಾತುಗಳನ್ನು ಕೇಳಿ ರಾಘಣ್ಣ ಮತ್ತು ಅವರ ಪತ್ನಿ ಎಲ್ಲಾ ಪುನೀತ್ ಅವರ ಅಭಿಮಾನಿ ಬಳಗ ಎಮೋಷನಲ್ ಆಗುತ್ತಾರೆ. ಏಕೆಂದರೆ ಶಿವಣ್ಣನ ಮಾತುಗಳಲ್ಲಿ ತಮ್ಮನ ಮೇಲಿನ ಪ್ರೀತಿ ಎದ್ದು ಕಾಣುತ್ತಿರುತ್ತದೆ.