Kannada Reality Shows

ಮಜಾ ಟಾಕೀಸ್ ಹೊಸ ಎಪಿಸೋಡ್ ನಲ್ಲಿ ಅಪ್ಪು ಸಕತ್ ಕಾಮಿಡಿ ವಿಡಿಯೋ ನೋಡಿ! ಬಿ#ದ್ದು ಬಿ#ದ್ದು ನಗ್ತೀರಾ

ಮಜಾ ಟಾಕೀಸ್ ಕನ್ನಡದ ಖ್ಯಾತ ಹಾಸ್ಯ ರಿಯಾಲಿಟಿ ಶೋಗಳಲ್ಲಿ ಒಂದು! ಮಜಾ ಟಾಕೀಸ್ ನಲ್ಲಿ, ಸೃಜನ್ ಲೋಕೇಶ್ ಅವರ ಜೊತೆ, ಮಂಡ್ಯ ರಮೇಶ್, ಅಪರ್ಣ, ಪವನ್, ಕುರಿ ಪ್ರತಾಪ್ ಸೇರಿದಂತೆ ಹಲವಾರು ಕನ್ನಡದ ಹಾಸ್ಯ ನಟರು ಇದ್ದಾರೆ. ಮಜಾ ಟಾಕೀಸ್ ಹೊಸ ಸೀಸನ್ ಶುರು ಆಗಿದ್ದು, ಮೊದಲು ಹೊಸ ಎಪಿಸೋಡ್ ಗೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಬಂದಿದ್ದಾರೆ. ಅಪ್ಪು ಅವರು ಮಜಾ ಟಾಕೀಸ್ ನಲ್ಲಿ ಅವರಿಗಾದ ಒಂದು ಅನುಭವ ವನ್ನು ಹಂಚಿಕೊಂಡು ಸಕತ್ ನಕ್ಕಿದ್ದಾರೆ! ಈ ಸಕತ್ ಕಾಮಿಡಿ ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ

ವೀಕ್ಷಕರಿಗೆ ಸೂಪರ್ ಮನರಂಜನೆ ನೀಡುತ್ತಿದ್ದ ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ‘ಮಜಾ ಟಾಕೀಸ್‌’ ಮತ್ತೆ ಶುರುವಾಗಲಿದೆ. ಶೋಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದೇ ಶನಿವಾರ, ಆಗಸ್ಟ್ 29, ರಾತ್ರಿ 8 ಗಂಟೆಗೆ ಗ್ರ್ಯಾಂಡ್ ಆಗಿ ಲಾಂಚ್ ಆಗಲಿದೆ ‘ಮಜಾ ಟಾಕೀಸ್‌’ ಹಿರಿಯ ನಟ ಲೋಕೇಶ್ ಅವರ ಮಗ ಸೃಜನ್ ಲೋಕೇಶ್‌ ಅವರು ತಮ್ಮ ಹೋಮ್ ಪ್ರೊಡಕ್ಷನ್ ನಲ್ಲಿ ನಿರ್ಮಿಸಿ, ನಿರೂಪಣೆ ಮಾಡುವ ಈ ಮಜಾ ಟಾಕೀಸ್ ಶೋಗೆ ರಾಜ್ಯಾದ್ಯಂತ ಸಾಕಷ್ಟು ಅಭಿಮಾನಿಗಳಿದ್ದಾರೆ.

“ಮಜಾ ಟಾಕೀಸ್ ಕಾರ್ಯಕ್ರಮ ಮತ್ತೆ ಶುರುವಾಗಿರುವುದಕ್ಕೆ ವೈಯಕ್ತಿಕವಾಗಿ ನಾನು ತುಂಬ ಎಕ್ಸೈಟ್ ಆಗಿದ್ದೇನೆ. ಲಾಕ್‌ ಡೌನ್‌ ಸಮಯದಲ್ಲಿ ನಾನು ನಟನೆ ಮತ್ತು ಕ್ಯಾಮೆರಾವನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೆ. ಇದೀಗ ಮತ್ತೊಮ್ಮೆ ಮತ್ತೆ ಸೆಟ್‌ಗೆ ಮರಳಲು ತುಂಬಾ ಥ್ರಿಲ್ ಆಗಿದ್ದೇನೆ. ಕೊರೊನಾ ವೈರಸ್ ಕಿರಿಕಿರಿಯಿಂದ ಬೇಸರಗೊಂಡಿರುವ ಜನರಿಗೆ ‘ಮಜಾ ಟಾಕೀಸ್‌’ನ ಈ ಹೊಸ ಸೀಸನ್‌ ಬಹಳ ಮನರಂಜನೆ ನೀಡಲಿದೆ. ಜನರಲ್ಲಿ ನಗು ಮೂಡಿಸಲಿದೆ. ದೇಶದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಸಮಸ್ಯೆಗಳ ಬೇಸರದಿಂದ ಹೊರಬರಲು ನಗುವೇ ಔಷಧಿ..”‘ ಎಂದು ಹೇಳುತ್ತಾರೆ ನಟ ಕುರಿ ಪ್ರತಾಪ್‌.

ಈಗಾಗಲೇ ‘ಮಜಾ ಟಾಕೀಸ್‌’ ಆರಂಭವಾಗುವ ಬಗ್ಗೆ ಬಗ್ಗೆ ಕಲ್ರ ಕನ್ನಡ ವಾಹಿನಿಯಲ್ಲಿ ಪ್ರೋಮೋಗಳು ರಿಲೀಸ್‌ ಆಗಿ, ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿವೆ. ಸೃಜನ್‌ ಲೋಕೇಶ್‌, ಅಪರ್ಣ, ಕುರಿ ಪ್ರತಾಪ್‌, ಮಂಡ್ಯ ರಮೇಶ್‌, ವಿಶ್ವ, ಪವನ್‌, ವಿ. ಮನೋಹರ್, ಅಪರ್ಣಾ, ಮಿಮಿಕ್ರಿ ದಯಾನಂದ್ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಇರಲಿದ್ದಾರೆ. “ಮಜಾ ಟಾಕೀಸ್”ನಲ್ಲಿ ಕುರಿ ಪ್ರತಾಪ್ ಅವರ ಡೈಲಾಗ್ ಗಳು ಹಾಗೂ ಅವರ ಕಾಮಿಡಿ ಸೆನ್ಸ್ ವೀಕ್ಷಕರಿಗ ಬಹಳ ಇಷ್ಟವಾಗಿತ್ತು. ಈ ಹೊಸ ಸೀಸನ್‌ ನಲ್ಲಿ ಕುರಿ ಪ್ರತಾಪ್ ಅವರ ಪಾತ್ರ ಯಾವ ರೀತಿ ಇರಲಿದೆ ಎಂಬ ಕುತೂಹಲ ವೀಕ್ಷಕರಿಗೆ ಇದೆ. ”ಮಜಾ ಟಾಕೀಸ್‌’ ಕಾರ್ಯಕ್ರಮದ ಈ ಹಿಂದಿನ ಸೀಸನ್ ಗಳು ಸುಮಾರು 500ಕ್ಕೂ ಹೆಚ್ಚು ಸಂಚಿಕೆಗಳಲ್ಲಿ ಪ್ರಸಾರ ಆಗಿರುವುದು ಕಿರುತೆರೆಯ ದಾಖಲೆ ಸಹ ಹೌದು. ಇನ್ನು, ‘ಬಿಗ್‌ ಬಾಸ್‌’ ಶೋನಲ್ಲಿ ಸ್ಪರ್ಧಿಸಿದ ನಂತರ ಕುರಿ ಪ್ರತಾಪ್ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಸಿನಿಮಾಗಳಲ್ಲೂ ಸಜ ಬ್ಯುಸಿ ಇದ್ದಾರೆ ಪ್ರತಾಪ್. ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ‘ಪೊಗರು’ ಚಿತ್ರದಲ್ಲಿ ಕುರಿ ಪ್ರತಾಪ್‌ ಪ್ರಮುಖ ಪಾತ್ರ ಮಾಡಿದ್ದಾರೆ. ‘ಯುವರತ್ನ’, ‘ಭಜರಂಗಿ 2’ ಚಿತ್ರಗಳಲ್ಲೂ ಸಹ ನಟಿಸಿದ್ದಾರೆ.

Trending

To Top