Actors

ಅಪ್ಪು ಬಗ್ಗೆ ಗೀತಕ್ಕ ಹೇಳಿದ್ದೇನು ನೋಡಿ

ನಟ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲಾ ಅಗಲಿ ಈಗಾಗಲೇ 23 ದಿನಗಳು ಕಳೆದು ಹೋಗಿವೆ. ಆದರೂ ಕೂಡ ಅವರ ನೆನೆಪು ನಮ್ಮೆಲರ ಮನದಲ್ಲಿ ಮಾಸುತ್ತಲ್ಲೇ ಇಲ್ಲ ಎನ್ನಬಹುದು. ಈ ಸಮಯದಲ್ಲಿ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಅವರು ಮನೆಯವರಿಗೆ ಸಾಂತ್ವಾನ ಮಾಡಿದ್ದರು. ಮತ್ತು ಪುನೀತ್ ರಾಜ್ ಕುಮಾರ್ ಬಗ್ಗೆ ಹೀಗೆ ಹೇಳಿದ್ದಾರೆ.

ಯಾವಾಗ ಪುನೀತ್ ಅವರ ಬಗ್ಗೆ ವಿಷಯ ತಿಳಿದಿತ್ತೋ ಆಗ ಮನೆಯಲ್ಲಿದಂತಹ ಶಿವ ರಾಜ್ ಕುಮಾರ್ ಕುಸಿದು ಬಿದ್ದರು. ಇದನ್ನು ಕಂಡಂತಹ ಗೀತಕ್ಕ ಏನಾಯಿತು ಎಂಬ ವಿಷಯ ತಿಳಿದು ಶಿವಣ್ಣ ಅವರಿಗೆ ಕೊಂಚ ಸಮಾಧಾನ ಪಡಿಸಿ ಆಸ್ಪತ್ರೆಯ ಬಳಿ ಕರೆದುಕೊಂಡು ಬಂದರು. ನಂತರ ಅಶ್ವಿನಿ ಅವರಿಗೆ ಧೈರ್ಯ ತುಂಬಿ ನೀನು ಧೈರ್ಯ ದಿಂದ ಇದ್ದರೆ ನಿನ್ನ ಮಕ್ಕಳು ಕೂಡ ಧೈರ್ಯ ದಿಂದ ಇರುತ್ತಾರೆ ಎಂದು ಹೇಳಿದ್ದಾರೆ.

ಇದೀಗ ದಿನ ನಿತ್ಯ ಅಶ್ವಿನಿ ಅವರ ಮನೆಗೆ ಬಂದು ಅವರಿಗೆ ಸಮಾಧಾನ ಹೇಳುತ್ತಾ ಸಂಜೆಯ ತನಕ ಅವರ ಮನೆಯಲ್ಲೇ ಇದ್ದು ಊಟ ಮಾಡಿಸಿ ಹೋಗುತ್ತಾರಂತೆ. ಅಪ್ಪು ಬಗ್ಗೆ ಮಾತನಾಡಿರುವ ಗೀತಕ್ಕ ಅವರು ನನ್ನ ಮೈದುನ ಮಾತ್ರ ವಾಗಿರಲಿಲ್ಲ ನಮ್ಮ ಮಗನಂತೆ ಇದ್ದರು.

ಕೆಟ್ಟವರಿಗೂ ಕೂಡ ಒಳ್ಳೆಯದನ್ನೇ ಬಯಸುವ ಗುಣ ಅವರದ್ದು ದೇವರು ಒಳ್ಳೆಯವರನ್ನು ಬೇಗ ಕಳೆದುಕೊಳ್ಳುತ್ತಾನೆ. ಅಶ್ವಿನಿ ಮತ್ತು ಮಕ್ಕಳಿಗೆ ಆದಷ್ಟು ಬೇಗ ನೋವು ಮಾಸುವ ಶಕ್ತಿ ಆ ದೇವರು ಕೊಡಲಿ ಎಂದು ದೇವರಲ್ಲಿ ಕೇಳಿಕೊಂಡಿದ್ದಾರೆ.

Trending

To Top