Cinema

ಒಂದೇ ಸ್ಟೆಪ್ ಡಾನ್ಸ್ ಮಾಡಿದ ನಮ್ಮ ಅಪ್ಪು ಹಾಗು ಅಲ್ಲೂ ಅರ್ಜುನ್! ಯಾರು ಬೆಸ್ಟ್ ಡ್ಯಾನ್ಸರ್, ವಿಡಿಯೋ ನೋಡಿ

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ತೆಲುಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ನಟ ಅಲ್ಲು ಅರ್ಜುನ್, ಈ ಇಬ್ಬರೂ ಸಹ ಡ್ಯಾನ್ಸ್ ಮತ್ತು ಫೈಟ್ಸ್ ಗಳಲ್ಲಿ ಎತ್ತಿದ ಕೈ .. ಇವರಿಬ್ಬರ ಡ್ಯಾನ್ಸಿಂಗ್ ಮತ್ತು ಫೈಟಿಂಗ್ ಸ್ಕಿಲ್ಸ್ ಗೆ ಎರಡು ಚಿತ್ರರಂಗದ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಇಬ್ಬರೂ ನಟರ ಸಿನಿಮಾ ಬಿಡುಗಡೆ ಆಗುತ್ತದೆ ಎಂದರೆ ಅಭಿಮಾನಿಗಳಿಗೆ ಹಬ್ಬವಿದ್ದಂತೆ. ಇದೀಗ ಈ ಇಬ್ಬರು ನಟರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಚರ್ಚೆಯಾಗುತ್ತಿದೆ.. ಕಾರಣ ಏನು ಗೊತ್ತಾ..? ಇವರಿಬ್ಬರೂ ಹಾಕಿರುವ ಒಂದು ಡ್ಯಾನ್ಸ್ ಸ್ಟೆಪ್. ಸ್ಕ್ರೋಲ್ ಡೌನ್ ಮಾಡಿ, ಇವರಿಬ್ಬರ ಡಾನ್ಸ್ ಹೋಲಿಕೆಯ ವಿಡಿಯೋ ನೋಡಿ
ನಿರ್ದೇಶಕ ಪವನ್ ಒಡೆಯರ್ ನಿರ್ದೇಶಿಸಿದ ನಟಸಾರ್ವಭೌಮ ಸಿನಿಮಾದ ಓಪನ್ ದಿ ಬಾಟಲ್ ಹಾಡಿನಲ್ಲಿ ಪುನೀತ್ ರಾಜ್ ಕುಮಾರ್ ಅವರು ಹಾಕಿರುವ ಒಂದು ಸ್ಟೆಪ್, ಅಲ್ಲು ಅರ್ಜುನ್ ಅಲಾ ವೈಕುಂಠಪುರಮುಲೋ ಸಿನಿಮಾದ ಬುಟ್ಟ ಬೊಮ್ಮ ಹಾಡಿನಲ್ಲಿ ಹಾಕಿರುವ ಒಂದು ಸಿಕ್ಕಾಪಟ್ಟೆ ಸಿಮಿಲರ್ ಆಗಿದೆ. ಹಾಗಾಗಿ ಈ ಸ್ಟೆಪ್ ಅನ್ನು ಯಾವ ನಟ ಉತ್ತಮವಾಗಿ ಹಾಕಿದ್ದಾರೆ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕೆಳಗಿನ ವಿಡಿಯೋ ನೋಡಿ
ಪುನೀತ್ ನಟಿಸಿದ ನಟಸಾರ್ವಭೌಮ ಸಿನಿಮಾ 2019 ಜನವರಿಯಲ್ಲಿ ತೆರೆಕಂಡಿತ್ತು, ಇನ್ನು ಅಲ್ಲು ಅರ್ಜುನ್ ನಟಿಸಿದ ಅಲಾ ವೈಕುಂಠಪುರಮುಲೋ ಸಿನಿಮಾ ನಂತರ ತೆರೆಕಂಡದ್ದು. ಬುಟ್ಟ ಬೊಮ್ಮ ಹಾಡು ಎಲ್ಲೆಡೆ ಸಖತ್ ವೈರಲ್ ಆಗಿದೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹಾಡು ಮತ್ತು ಅಲ್ಲು ಅರ್ಜುನ್ ಅವರ ಹಾಡು ಎರಡಕ್ಕೂ ಕೋರಿಯೋಗ್ರಾಫರ್ ಒಬ್ಬರೆ. ಎರಡು ಹಾಡುಗಳನ್ನು ಕೂಡ ತೆಲುಗಿನ ಜಾನಿ ಮಾಸ್ಟರ್ ಕೋರಿಯೋಗ್ರಫಿ ಮಾಡಿದ್ದಾರೆ. ಹಾಗಾಗಿ ಇಲ್ಲಿ ಸ್ಟೆಪ್ ಕಾಪಿ ಆಗಿದೆ ಎನ್ನುವ ಪ್ರಶ್ನೆಯೇ ಇಲ್ಲ. ಈ ಇಬ್ಬರಲ್ಲಿ ಉತ್ತಮ ಡ್ಯಾನ್ಸರ್ ಯಾರು ಎಂಬ ಪ್ರಶ್ನೆ ಇಲ್ಲವಾದರೂ. ಪುನೀತ್ ರಾಜ್ ಕುಮಾರ್ ಅವರ ಸಿನಿಮಾ ಮೊದಲು ತೆರೆಕಂಡಿರುವುದರಿಂದ ಅಪ್ಪುನೆ ಬೆಸ್ಟ್ ಎಂದು ಸ್ಯಾಂಡಲ್ ವುಡ್ ಅಭಿಮಾನಿಗಳು ಹೇಳುತ್ತಿದ್ದಾರೆ.

Trending

To Top