ಬ್ಯುಸಿನೆಸ್ ಪಾರ್ಟನರ್ ನನ್ನೆ ಮದುವೆಯಾಗಲಿದ್ದಾರೆ ಆಪಲ್ ಬ್ಯೂಟಿ ಹನ್ಸಿಕಾ….!

ಸೌತ್ ಸಿನಿರಂಗದಲ್ಲಿ ಆಪಲ್ ಬ್ಯೂಟಿ ಎಂತಲೇ ಫೇಮಸ್ ಪಡೆದುಕೊಂಡ ನಟಿ ಹನ್ಸಿಕಾ ಮೊಟ್ವಾನಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇದೀಗ ಹಾಟ್ ಟಾಪಿಕ್ ಆಗಿದೆ. ಕೆಲವು ದಿನಗಳಿಂದ ಹನ್ಸಿಕಾ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎನ್ನಲಾಗುತ್ತಿತ್ತು. ಇದೀಗ ಆಕೆ ಮದುವೆಯಾಗಲಿರುವ ವ್ಯಕ್ತಿ ಯಾರು ಎಂಬ ವಿಚಾರ ಸಹ ಇದೀಗ ಹೊರಬಂದಿದೆ. ಹನ್ಸಿಕಾ ತನ್ನ ಬ್ಯುಸಿನೆಸ್ ಪಾರ್ಟನರ್‍ ನನ್ನೇ ಮದುವೆಯಾಗಲಿದ್ದಾರಂತೆ.

ನಟಿ ಹನ್ಸಿಕಾ ಮೊಟ್ವಾನಿ ದೇಶಮುದುರು ಎಂಬ ಸಿನೆಮಾದ ಮೂಲಕ ಹೈಪ್ ಹೆಚ್ಚಿಸಿಕೊಂಡ ನಟಿಯಾಗಿದ್ದಾರೆ. ಟೀನೇಜ್ ನಲ್ಲಿಯೇ ಆಕೆ ತನ್ನ ಗ್ಲಾಮರ್‍ ಮೂಲಕ ಸಿನೆಮಾಗಳಲ್ಲಿ ಸಖತ್ ಸೌಂಡ್ ಮಾಡುತ್ತಿದ್ದರು. ನಟಿ ಹನ್ಸಿಕಾ ಮದುವೆ ಸಿದ್ದತೆಗಳು ಗುಟ್ಟಾಗಿ ನಡೆಯುತ್ತಿವೆ. ಡಿಸೆಂಬರ್‍ ಮಾಹೆಯಲ್ಲಿ ಜೈಪುರ್‍ ದ ಮುಂಡೋಟ ಪ್ಯಾಲೆಸ್ ನಲ್ಲಿ ಹನ್ಸಿಕಾ ಮದುವೆ ಅದ್ದೂರಿಯಾಗಿ ನಡೆಯಲಿದೆ. ಮದುವೆ ವೇದಿಕೆ, ಯಾರೆಲ್ಲಾ ಅತಿಥಿಗಳನ್ನು ಮದುವೆಗೆ ಕರೆಯಬೇಕು ಎಂಬೆಲ್ಲಾ ಸಿದ್ದತೆಗಳು ನಡೆಯುತ್ತಿದೆಯಂತೆ. ಸುಮಾರು 450 ವರ್ಷ ಹಳೇಯ ಪ್ಯಾಲೆಸ್ ನಲ್ಲಿ ಅನೇಕ ಕೊಠಡಿಗಳನ್ನೂ ಸಹ ಬುಕ್ ಮಾಡಿದ್ದಾರಂತೆ ಎಂಬೆಲ್ಲಾ ಸುದ್ದಿಗಳು ಹೊರಬಂದಿದೆ. ಇದೀಗ ಹನ್ಸಿಕಾ ಮದುವೆಯಾಗಲಿರುವ ವ್ಯಕ್ತಿ ಯಾರು, ಆತನ ಬ್ಯಾಕ್ ಗ್ರೌಂಡ್ ಏನು ಎಂಬ ವಿಚಾರ ಸಹ ಹೊರಬಂದಿದೆ.

ಇನ್ನೂ ಹನ್ಸಿಕಾ ಮೊಟ್ವಾನಿ ಮದುವೆ ಡಿಸೆಂಬರ್‍ 4 ರಂದು ಜೈಪುರದ ಮುಂಟೊಡಾ ಪ್ಯಾಲೆಸ್ ನಲ್ಲಿ ಜರುಗಲಿದೆ ಎನ್ನಲಾಗಿದೆ. ಇನ್ನೂ ಹನ್ಸಿಕಾ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಲು ಅವರ ಕುಟುಂಬಗಳು ಪ್ಲಾನ್ ಮಾಡುತ್ತಿವೆ. ಇನ್ನೂ ಹನ್ಸಿಕಾ ಮದುವೆ ವಿಚಾರ ಹೊರಬರುತ್ತಿದ್ದಂತೆ. ಹನ್ಸಿಕಾ ರನ್ನು ವರಿಸಲಿರುವ ಆ ಅದೃಷ್ಟವಂತ ಯಾರು ಎಂಬ ಬಗ್ಗೆ ಚರ್ಚೆ ಶುರುವಾಗಿದ್ದ ಬೆನ್ನಲ್ಲೆ ಇದೀಗ ಹನ್ಸಿಕಾ ಮದುವೆಯಾಗಲಿರುವ ವ್ಯಕ್ತಿಯ ಬಗ್ಗೆ ಕೆಲವೊಂದು ವಿಚಾರಗಳು ತಿಳಿದುಬಂದಿದೆ. ಇನ್ನೂ ಹನ್ಸಿಕಾ ಮದುವೆಯಾಗಲಿರುವುದು ಆಕೆ ಪ್ರೀತಿಸುತ್ತಿರುವ ಯುವಕನನ್ನೆ. ಆತನ ಹೆಸರು ಸೊಹೈಲ್ ಕತುರಿಯಾ. ಆತ ಮುಂಬೈ ಮೂಲದ ಉದ್ಯಮಿಯಾಗಿದ್ದಾರೆ. ಬ್ಯುಸಿನೆಸ್ ಕಾರಣದಿಂದಲೇ ಅವರಿಬ್ಬರ ನಡುವೆ ಪರಿಚಯ ಏರ್ಪಟ್ಟು, ಬಳಿಕ ಪ್ರೀತಿಯಾಗಿದೆ ಎನ್ನಲಾಗಿದೆ. ಇನ್ನೂ ಸೊಹೈಲ್ ಕಂಪನಿಯಲ್ಲಿ ಹನ್ಸಿಕಾಗೆ ಶೇರ್ ಗಳು ಸಹ ಇದೆಯಂತೆ.

ಸದ್ಯ ಹನ್ಸಿಕಾ ಆರಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾಗಳಲ್ಲಿ ಐದು ಸಿನೆಮಾಗಳೇ ತಮಿಳು ಸಿನೆಮಾಗಳಾಗಿವೆ. ಇದೀಗ ಹರಿದಾಡುತ್ತಿರುವ ಹನ್ಸಿಕಾ ಮದುವೆ ರೂಮರ್‍ ನಿಜವೇ ಆದರೆ ಹನ್ಸಿಕಾ ಮದುವೆಯಾದ ಬಳಿಕ ಸಿನೆಮಾಗಳಲ್ಲಿ ಮುಂದುವರೆಯುತ್ತಾರಾ ಅಥವಾ ಗುಡ್ ಬೈ ಹೇಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇನ್ನೂ ಹನ್ಸಿಕಾ ಸೌಂದರ್ಯಕ್ಕೆ ಫಿದಾ ಆದ ಆಕೆಯ ಅಭಿಮಾನಿಗಳು ತಮಿಳುನಾಡಿನಲ್ಲಿ ದೇಗುಲವನ್ನು ಸಹ ನಿರ್ಮಾಣ ಮಾಡಿದ್ದಾರೆ.

Previous articleNTR30 ತಂಡದಿಂದ ಅಪ್ಡೇಟ್, ಪುಲ್ ಖುಷಿಯಲ್ಲಿ ಎನ್.ಟಿ.ಆರ್ ಫ್ಯಾನ್ಸ್…!
Next articleನಾಗಿನಿಯಂತೆ ಪೋಸ್ ಕೊಟ್ಟ ತೇಜಸ್ವಿ, ಟಾಪ್ ಸೌಂದರ್ಯದೊಂದಿಗೆ ಹಾಟ್ ಟ್ರೀಟ್ ಕೊಟ್ಟ ಬಿಗ್ ಭಾಸ್ ಬ್ಯೂಟಿ….!