ಕೆಂಪು ಗುಲಾಬಿಯಂತೆ ಮನಸೋರೆಗೊಳಿಸುವಂತಹ ಪೋಸ್ ಕೊಟ್ಟ ಹನ್ಸಿಕಾ, ಹೊಸ ವಧು ಹನ್ಸಿಕಾ ಪೊಟೋಸ್ ವೈರಲ್….!

ಸಿನಿರಂಗದಲ್ಲಿ ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಕ್ರೇಜ್ ದಕ್ಕಿಸಿಕೊಂಡ ಟಾಪ್ ನಟಿಯರ ಸಾಲಿಗೆ ಹನ್ಸಿಕಾ ಮೊಟ್ವಾನಿ ಸಹ ಸೇರುತ್ತಾರೆ. ಅಭಿನಯ, ಗ್ಲಾಮರ್‍ ನೊಂದಿಗೆ ಮೊದಲನೇ ಸಿನೆಮಾದ ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡ ಈಕೆ ಸ್ಟಾರ್‍ ನಟರ ಜೊತೆಗೆ ತೆರ ಹಂಚಿಕೊಂಡಿದ್ದಾರೆ. ಸಾಲು ಸಾಲು ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಹನ್ಸಿಕಾ ಮದುವೆ ಜೈಪುರದಲ್ಲಿ ಅದ್ದೂರಿಯಾಗಿ ನೆರವೇರಿದೆ. ತನ್ನ ಬ್ಯುಸಿನೆಸ್ ಪಾರ್ಟನರ್‍ ಸೊಹೈಲ್ ಜೊತೆಗೆ ಹನ್ಸಿಕಾ ಸಪ್ತಪದಿ ತುಳಿದಿದ್ದಾರೆ.

ತೆಲುಗು ಸ್ಟಾರ್‍ ನಟ ಅಲ್ಲು ಅರ್ಜುನ್ ಜೊತೆಗೆ ದೇಶಮುದುರು ಎಂಬ ಸಿನೆಮಾದ ಮೂಲಕ ಸಿನಿರಂಗದಲ್ಲಿ ಫೇಂ ದಕ್ಕಿಸಿಕೊಂಡ ಈಕೆ ಮೊದಲನೇ ಸಿನೆಮಾದ ಮೂಲಕ ಗ್ಲಾಮರ್‍ ಶೋ ಮಾಡುವ ಮೂಲಕ ಅನೇಕ ಯುವಕರ ಹೃದಯ ಕದ್ದರು. ಟೀನೇಜ್ ನಲ್ಲೇ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಗ್ಲಾಮರಸ್ ಪಾತ್ರಗಳ ಮೂಲಕ ಫೇಂ ಪಡೆದುಕೊಂಡರು. ಹನ್ಸಿಕಾ ಸದಾ ಗ್ಲಾಮರ್‍ ಮೂಲಕವೇ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಆಕೆ ಹಂಚಿಕೊಂಡ ಪೋಸ್ಟ್ ಗಳು ಕಡಿಮೆ ಸಮಯದಲ್ಲೇ ಎಲ್ಲಾ ಕಡೆ ವೈರಲ್ ಆಗುತ್ತಿರುತ್ತವೆ. ಇನ್ನೂ ಮದುವೆಯಾಗಿ ಕೇಲವೇ ದಿನಗಳು ಕಳೆದಿದ್ದು, ಇದೀಗ ಆಕೆ ಹಂಚಿಕೊಂಡ ಪೊಟೋಗಳು ಸಖತ್ ಗ್ಲಾಮರಸ್ ಆಗಿದೆ ಎಂದು ಹೇಳಲಾಗುತ್ತಿದೆ.

ನಟಿ ಹನ್ಸಿಕಾ ಡಿ.4 ರಂದು ಸೊಹೈಲ್ ಜೊತೆಗೆ ವಿವಾಹವಾದರು. ಹನ್ಸಿಕಾ ಮದುವೆ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಅವರು ತಮ್ಮ ಪೋಸ್ಟ್ ವೆಡ್ಡಿಂಗ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಹನ್ಸಿಕಾ ಹಂಚಿಕೊಂಡ ಪೋಸ್ಟ್ ವೆಡ್ಡಿಂಗ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ಪೊಟೋಗಳಲ್ಲಿ ಹನ್ಸಿಕಾ ಕೆಂಪು ಬಣ್ಣದ ಗುಲಾಬಿ ಯಂತೆ ಕಂಗೊಳಿಸಿದ್ದಾರೆ. ಲೆಹಂಗಾದಲ್ಲಿ ಯುವಕರ ಮನಸ್ಸು ಕದಿಯುತ್ತಿದ್ದಾರೆ. ಟ್ರೆಡಿಷನಲ್ ಡ್ರೆಸ್ ನಲ್ಲೂ ಸಹ ಹನ್ಸಿಕಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾಋಎ. ಆಕೆ ತನ್ನ ದೇಹದ ಮೈಮಾಟದೊಂದಿಗೆ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಪಿಂಕ್ ಕಲರ್‍ ಲೆಹಂಗಾದಲ್ಲಿ ಆಕೆ ಸುರಲೋಕದ ಅಪ್ಸರೆಯಂತೆ ಕಾಣಿಸಿಕೊಂಡಿದ್ದಾರೆ. ಇನ್ನೂ ಆಕೆಯ ಪೊಟೋಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆಯ ಕಾಮೆಂಟ್ ಗಳ ಜೊತೆಗೆ ಹಾಟ್ ಅಂಡ್ ಫೈರಿಂಗ್ ಕಾಮೆಂಟ್ ಗಳೂ ಸಹ ಹರಿದು ಬರುತ್ತಿವೆ.

ಇನ್ನೂ ಹನ್ಸಿಕಾ ಮೊಟ್ವಾನಿ ಈ ಹಿಂದೆ ತಮಿಳಿನ ಸ್ಟಾರ್‍ ನಟಿ ಶಿಂಬು ಜೊತೆಗೆ ಪ್ರೇಮ ವ್ಯವಹಾರ ನಡೆಸಿದ್ದರು. ಅವರ ಪ್ರೀತಿ ಮದುವೆಯ ವರೆಗೂ ಸಾಗಿತ್ತು. ಆದರೆ ಕೆಲವೊಂದು ಕಾರಣಗಳಿಂದ ಇವರಿಬ್ಬರೂ ಬೇರೆಯಾದರು. ಇನ್ನೂ ಹನ್ಸಿಕಾ ಮದುವೆಯಾದ ಬಳಿಕ ಸಿನೆಮಾಗಳಿಂದ ದೂರವಾಗಲಿದ್ದಾರೆ ಎಂಬ ಸುದ್ದಿ ಸಹ ಕೇಳಿಬರುತ್ತಿದೆ. ಇನ್ನೂ ಹನ್ಸಿಕಾ ಮದುವೆಯಾದ ಸುಹೈಲ್ ಗೂ ಸಹ ಈ ಮೊದಲೇ ಹನ್ಸಿಕಾ ಸ್ನೇಹಿತೆ ರಿಂಕಿ ಎಂಬಾಕೆಯೊಂದಿಗೆ ಮದುವೆಯಾಗಿತ್ತು.

Previous articleತೆಲುಗು ಬಿಗ್ ಬಾಸ್ ಗ್ರಾಂಡ್ ಫಿನಾಲೆಯಲ್ಲಿ ಬಾಲಯ್ಯ, ವೈರಲ್ ಆದ ಸುದ್ದಿ, ಫ್ಯಾನ್ಸ್ ಪುಲ್ ಖುಷ್….!
Next articleಮೊದಲ ಬಾರಿಗೆ ಸಿನೆಮಾಗಳಿಂದ ದೂರವಾದ ಕಾರಣ ಬಿಚ್ಚಿಟ್ಟ ನಮ್ರತಾ, ವೈರಲ್ ಆದ ಕಾಮೆಂಟ್ ಗಳು.…!