ಹನ್ಸಿಕಾ ಭರ್ಜರಿಯಾಗಿ ಎಂಜಾಯ್ ಮಾಡುತ್ತಿದ್ದಾರೆ ಬ್ಯಾಚಿಲರ್ ಪಾರ್ಟಿ, ಮದುವೆಗೂ ಮುಂಚೆ ಹಾಟ್ ಟ್ರೀಟ್ ಕೊಟ್ಟ ಆಪಲ್ ಬ್ಯೂಟಿ….!

ಸೌತ್ ಸಿನಿರಂಗದಲ್ಲಿ ಆಪಲ್ ಬ್ಯೂಟಿ ಎಂತಲೇ ಖ್ಯಾತಿ ಪಡೆದುಕೊಂಡಿರುವ ಹನ್ಸಿಕಾ ಮೊಟ್ವಾನಿ ಮದುವೆಗೆ ದಿನಗಣನೆ ಶುರುವಾಗಿದೆ. ಅಲ್ಲು ಅರ್ಜುನ್ ಜೊತೆಗೆ ದೇಶಮುದುರು ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಖ್ಯಾತಿ ಪಡೆದುಕೊಂಡರು. ಆಕೆಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ತಮಿಳುನಾಡಿನಲ್ಲಿ ಆಕೆಗಾಗಿ ಒಂದು ದೇವಾಲಯವನ್ನು ಸಹ ಕಟ್ಟಿಸಿದ್ದಾರೆ. ಅನೇಕ ಹುಡುಗರ ಕ್ರಷ್ ಆಗಿರುವ ಈಕೆ ಕೆಲವೇ ದಿನಗಳಲ್ಲಿ ಹಸೆಮಣೆ ಏರಲಿದ್ದು, ಇದೀಗ ಬ್ಯಾಚಿಲರ್‍ ಪಾರ್ಟಿಯಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ.

ನಟಿ ಹನ್ಸಿಕಾ ಹಾಗೂ ಉದ್ಯಮಿ ಸೊಹೈಲ್ ರವರ ಮದುವೆ ಇದೇ ಡಿಸೆಂಬರ್‍ 4 ರಂದು ಜೈಪುರದ ಹಳೇಯ ಮುಂಟೋಡಾ ಎಂಬ ಪ್ಯಾಲೆಸ್ ನಲ್ಲಿ ನಡೆಯಲಿದೆ. ಇತ್ತೀಚಿಗಷ್ಟೆ ಹನ್ಸಿಕಾ ತನ್ನ ಪ್ರಿಯಕರನನ್ನು ಸೋಷಿಯಲ್ ಮಿಡಿಯಾ ಮೂಲಕ ಪರಿಚಯ ಮಾಡಿದ್ದರು. ಸೊಹೈಲ್ ಸಹ ಪ್ಯಾರೀಸ್ ನಲ್ಲಿರುವ ಈಫಿಲ್ ಟವರ್‍ ಬಳಿಕ ಮಂಡಿಯೂರಿ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಸೊಹೈಲ್ ಪ್ರಪೋಸ್ ಮಾಡುವಂತಹ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಮುಂಬೈ ಮೂಲದ ದೊಡ್ಡ ಉದ್ಯಮಿ ಸೊಹೈಲ್ ಹಾಗೂ ಹನ್ಸಿಕಾ ಇಬ್ಬರೂ ವ್ಯಾಪಾರ ಸಹ ಆರಂಭಿಸಿದ್ದರಂತೆ. ಇದೇ ಸಮಯದಲ್ಲಿ ಅವರಿಬ್ಬರ ನಡುವೆ ಪ್ರೇಮಾಂಕುರ ಏರ್ಪಟ್ಟು ಇದೀಗ ಮದುವೆಯಾಗಲಿದ್ದಾರೆ. ಇದೀಗ ಹನ್ಸಿಕಾ ಬ್ಯಾಚಿಲರ್‍ ಪಾರ್ಟಿಯಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ.

ಇನ್ನೇನು ಕೆಲವೇ ದಿನಗಳಲ್ಲಿ ಹನ್ಸಿಕಾ ಮದುವೆ ನಡೆಯಲಿದ್ದು, ಈ ಸಂಬಂಧ ಆಕೆ ತನ್ನ ಸ್ನೇಹಿತರೊಂದಿಗೆ ಬ್ಯಾಚಿಲರ್‍ ಪಾರ್ಟಿ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ಹನ್ಸಿಕಾ ಸಖತ್ ಎಂಜಾಯ್ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡುತ್ತಾ, ಡ್ರಿಂಕ್ಸ್ ಕುಡಿಯುತ್ತಾ ಲೇಡಿ ಗ್ಯಾಂಗ್ ಜೊತೆಗೆ ಭರ್ಜರಿಯಾಗಿ ಸಂಭ್ರಮಿಸಿದ್ದಾರೆ. ಅದರಲ್ಲೂ ಹನ್ಸಿಕಾ ಸಖತ್ ಹಾಟ್ ಪೋಸ್ ಕೊಟ್ಟಿದ್ದಾರೆ. ಎದೆಯ ಸೌಂದರ್ಯವನ್ನು ಶೋ ಮಾಡುತ್ತಾ ಮದುವೆಗೂ ಮುಂಚೆ ಆಕೆ ಹಾಟ್ ಟ್ರೀಟ್ ಕೊಟ್ಟಿದ್ದಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಟ್ ಹಾಟ್ ಕಾಮೆಂಟ್  ಗಳ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.  ಇನ್ನೂ ಈಗಾಗಲೇ ಸೊಹೈಲ್ ಗೆ ಮದುವೆಯಾಗಿದ್ದು, ಹನ್ಸಿಕಾ ಜೊತೆಗೆ ಎರಡನೇ ಮದುವೆಯಾಗಲಿದ್ದಾರೆ. ಕಳೆದ 2016ರಲ್ಲೇ ರಿಂಕಿ ಎಂಬಾಕೆಯೊಂದಿಗೆ ಸೊಹೈಲ್ ಮದುವೆಯಾಗಿದ್ದರು. ಹನ್ಸಿಕಾಗೆ ರಿಂಕಿ ಸಹ ಒಳ್ಳೆಯ ಸ್ನೇಹಿತೆ ಎನ್ನಲಾಗಿದೆ. ರಿಂಕಿ ಹಾಗೂ ಸೊಹೈಲ್ ಮದುವೆಗೆ ರಿಂಕಿ ಸಹ ಹಾಜರಾಗಿದ್ದರು. ಈ ಸಂಬಂಧ ಮದುವೆ ವಿಡಿಯೋ ಒಂದು ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು.

ಇನ್ನೂ ಹನ್ಸಿಕಾ ಎರಡನೇ ಮದುವೆಯಾಗಲು ಕಾರಣವಾದರೂ ಏನು ಎಂಬುದರ ಬಗ್ಗೆ ಅನೇಕರಲ್ಲಿ ಅನುಮಾನಗಳು ಮೂಡಿದೆ. ಸ್ನೇಹಿತೆಯ ಮಾಜಿ ಪತಿಯನ್ನು ಹನ್ಸಿಕಾ ಏತಕಕ್ಕಾಗಿ ಮದುವೆಯಾಗುತ್ತಿದ್ದಾರೆ ಎಂಬೆಲ್ಲಾ ಕಾಮೆಂಟ್ ಗಳೂ ಸಹ ಕೇಳಿಬರುತ್ತಿವೆ. ಇನ್ನೂ ಈ ಹಿಂದೆ ಹನ್ಸಿಕಾ ಸಹ ತಮಿಳು ನಟ ಶಿಂಬು ಜೊತೆಗೆ ಪ್ರೇಮ ಪಯಣ ಸಾಗಿಸಿದ್ದರು. ಮದುವೆಯವರೆಗೂ ಇವರು ಸಾಗಿ ಬಳಿಕ ಬೇರೆಯಾದರು.

Previous articleಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಗೋವಾ ಬ್ಯೂಟಿ ಸೀರೆಯಲ್ಲಿ ಟೆಂಪ್ಟಿಂಗ್ ಪೋಸ್, ಇಲಿಯಾನಾ ಲೇಟೆಸ್ಟ್ ಪೊಟೋಸ್ ವೈರಲ್…!
Next articleಕೆಂಪು ಬಣ್ಣದ ಸೀರೆಯಲ್ಲಿ ರೆಡ್ ಮಿರ್ಚಿಯಂತೆ ಸ್ಪೈಸಿ ಪೋಸ್ ಕೊಟ್ಟ ಸೀನಿಯರ್ ಬ್ಯೂಟಿ ಶ್ರೇಯಾ…!