Kannada Reality Shows

ಕಣ್ಣೊರೆಸಿ ಕನ್ನಡ ಹೇಳಿ ಕೊಟ್ಟ ಸರಸ್ವತಿ ನನ್ನಮ್ಮ, ತಾಯಿ ಬಗ್ಗೆ ಅನುಶ್ರೀ ಭಾವುಕ ಮಾತುಗಳು!

ನಿರೂಪಕಿ ಅನುಶ್ರೀ ಸುಮಾರು ಒಂದು ದಶಕದಿಂದ ಕರ್ನಾಟಕ ಮನೆಮಾತಾಗಿರುವವರು. ಹಲವಾರು ಕಾರ್ಯಕ್ರಮಗಳು, ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿದ್ದಾರೆ. ಈಕೆಯ ಹಾಸ್ಯಭರಿತ ಮಾತುಗಳು ಎಂದರೆ ವೀಕ್ಷಕರಿಗೆ ಅಚ್ಚುಮೆಚ್ಚು. ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ ನಡೆಯುವ ಬಹುತೇಕ ಕಾರ್ಯಕ್ರಮಗಳಿಗೆ ಅನುಶ್ರೀ ಅವರೆ ನಿರೂಪಕಿ ಆಗಿರುತ್ತಿದರು. ಈ ಕೆಲಸಗಳ ಜೊತೆಗೆ ಯೂಟ್ಯೂಬ್ ಚಾನೆಲ್ ಒಂದನ್ನು ಶುರು ಮಾಡಿರುವ ಅನುಶ್ರೀ ಅದರಲ್ಲಿ ಸೆಲೆಬ್ರಿಟಿಗಳ ಸಂದರ್ಶನ ಮಾಡಿ ಅದರ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾರೆ.

ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಆಕ್ಟಿವ್ ಆಗಿರುತ್ತಾರೆ ಅನುಶ್ರೀ. ತಮ್ಮ ವೈಯಕ್ತಿಕ ಜೀವನದ ಫೋಟೋಗಳು, ಸಂತಸದ ಕ್ಷಣಗಳ ಬಗ್ಗೆ ಹಂಚಿಕೊಳ್ಳುತ್ತಾರೆ ಜೊತೆ ವೃತ್ತಿಪರ ವಿಷಯಗಳ ಬಗ್ಗೆ ಸಹ ಪೋಸ್ಟ್ ಮಾಡುತ್ತಾರೆ. ಈ ಹಿಂದೆ ಅನುಶ್ರೀ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ನಿಧನರಾದಾದ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಗಳಲ್ಲಿ ಭಾವನಾತ್ಮಕ ಸಾಲುಗಳನ್ನು ಬರೆದು ತಮ್ಮ ಭಾವೆನೆಗಳನ್ನು ವ್ಯಕ್ತಪಡಿಸಿದ್ದರು. ನಂತರ ಬಾಲಿವುಡ್ ನ ಉದಯೋನ್ಮುಖ ನಟ ಸುಶಾಂತ್ ಸಿಂಗ್ ರಜಪೂತ್ ನಿಧನರಾದಾಗಲೂ ಸಹ ಭಾವನಾತ್ಮಕ ಸಾಲುಗಳನ್ನು ಬರೆದಿದ್ದರು. ಇದೀಗ ತಾಯಿಯ ಹುಟ್ಟುಹಬ್ಬಕ್ಕೆ ಮತ್ತೊಮ್ಮೆ ಭಾವನಾತ್ಮಕ ಸಾಲುಗಳನ್ನು ಬರೆದು ಶುಭಾಶಯ ಕೋರಿದ್ದಾರೆ ಅನುಶ್ರೀ..

“ಅಮ್ಮ…ನನಗೆ ಜನ್ಮ ಕೊಟ್ಟ ಜನ್ಮದಾತೆ ನನ್ನ ಅಮ್ಮ …ಮಾತು ಕಲಿಸಿ ಮುತ್ತು ಕೊಟ್ಟ ಮುದ್ದು ನನ್ನ ಅಮ್ಮ ..ನನ್ನ ಕಣ್ಣೊರೆಸಿ ಕನ್ನಡ ಹೇಳಿ ಕೊಟ್ಟ ಸರಸ್ವತಿ ನನ್ನ ಅಮ್ಮ …ವಿದ್ಯೆ ..ವಿನಯತೆ …ಕೊಟ್ಟ ಗುರು ನನ್ನ ಅಮ್ಮ ….ತಾನು ನಡೆದು ನನ್ನನ್ನು ಗುರಿ ತಲುಪಿಸಿದ ಮಾರ್ಗದರ್ಶಿ ನನ್ನ ಅಮ್ಮ..ತಾನು ಹಸಿದು ನನ್ನ ಹೊಟ್ಟೆ ತುಂಬಿಸಿದ ಅನ್ನಪೂರ್ಣೆ ನನ್ನಮ್ಮ .,ತಂದೆಯಾಗಿ…ಸ್ನೇಹಿತೆಯಾಗಿ ನಿಂತ ನನ್ನ ಜೀವದಾತೆ ನನ್ನ ಅಮ್ಮ …ಎಂದೂ ನಾನು ಅನುಶ್ರೀ ಅಮ್ಮ ಎಂದು ಹೇಳದ ಸ್ವಾಭಿಮಾನಿ ನನ್ನಮ್ಮ .. ಆದ್ರೆ ಅನುಶ್ರೀ ನಿಮ್ಮ ಮಗಳು ಎಂತ ಪ್ರತಿಭಾನ್ವಿತೆ ಅಲ್ವಾ ಎಂದಾಗ ಹೆಮ್ಮೆಯಿಂದ ಬೀಗುವ ನನ್ನ ಹೆಮ್ಮೆಯ ಅಮ್ಮ …ಸೋಲದಿರು ….ಗೆಲ್ಲುವ ಪ್ರಯತ್ನ ಬಿಡದಿರು ಎಂದು ಜೀವನಪಾಠ ಹೇಳಿಕೊಟ್ಟ Real Hero ನನ್ನಮ್ಮ ..ಅಮ್ಮ ಹುಟ್ಟು ಹಬ್ಬದ ಶುಭಾಶಯಗಳು ….ನನ್ನ ಆಯುಷ್ಯ ನಿಮ್ಮ ಪಾಲಾಗಲಿ ..Love u ಅಮ್ಮ 🤗..” ಎಂದು ಬರೆದು ತಾಯಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ ಅನುಶ್ರೀ. ಈ ಪೋಸ್ಟ್ ಗೆ ಅವರ ಅಭಿಮಾನಿಗಳು ಸಾಕಷ್ಟು ಲೈಕ್ಸ್ ಮತ್ತು ಕಮೆಂಟ್ಸ್ ಗಳನ್ನು ಹಾಕುತ್ತಿದ್ದಾರೆ.

Trending

To Top