News

(video)ಹುಟ್ಟು ಹಬ್ಬಕ್ಕೆ ಅಭಿಮಾನಿ ಕೊಟ್ಟ ಉಡುಗೊರೆ ನೋಡಿ ಒಂದು ಕ್ಷಣ ಶಾಕ್ ಆದ ಅನುಶ್ರೀ! ವಿಡಿಯೋ ನೋಡಿ

anushr

ನಿಮಗೆಲ್ಲ ಗೊತ್ತಿರೋ ಹಾಗೆ, ಇತ್ತೀಚಿಗೆ ನಮ್ಮ ಕನ್ನಡದ ಹೆಸರಾಂತ ನಿರೂಪಕಿ ಆದ ಅನುಶ್ರೀ ಅವರು, ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಇದೆ ಸಮಯದಲ್ಲಿ ಅನುಶ್ರೀ ಅವರು ತಮ್ಮದೇ ಆದ ಒಂದು ಹೊಸ ಯೌಟ್ಯೂಬ್ ಚಾನೆಲ್ ಅನ್ನು ಶುರು ಮಾಡಿದರು. ಕನ್ನಡದ ಹೆಸರಾಂತ ನಿರೂಪಕಿ ಆದ ಅನುಶ್ರೀ ಅವರಿಗೆ ಅವರದ್ದೇ ಆದ ಅಭಿಮಾನಿ ಬಳಗ ಇದ್ದಾರೆ! ಅನುಶ್ರೀ ಅವರ ಹುಟ್ಟು ಹಬ್ಬದ ದಿನ, ಅವರ ಅಭಿಮಾನಿಯೊಬ್ಬ ಅಬಶ್ರೀ ಅವರ ಕಾರವಾನ್ ಒಳಗೆ ಬಂದು ಅವರಿಗೆ ಸುರ್ಪ್ರೈಸ್ ಕೊಟ್ಟು ಒಂದು ಗಿಫ್ಟ್ ಕೊಟ್ಟಿದ್ದಾರೆ! ಅಭಿಮಾನಿ ತಂಡ ಈ ಗಿಫ್ಟನ್ನು ನೋಡಿ ಅನುಶ್ರೀ ಅವರು ಒಂದು ಕ್ಷಣ ಶಾಕ್ ಆಗಿದ್ದಾರೆ! ಅಷ್ಟಕ್ಕೂ ಅನುಶ್ರೀ ಅವರಿಗೆ ಆ ಅಭಿಮಾನಿ ಕೊಟ್ಟ ಗಿಫ್ಟ್ ಏನು ಗೊತ್ತ? ಅನುಶ್ರೀ ರಿಯಾಕ್ಷನ್ ಹೇಗಿತ್ತು ಗೊತ್ತ? ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಅನುಶ್ರೀ ಎಂದರೆ ಯಾರಿಗೆ ಗೊತ್ತಿಲ ಹೇಳಿ? ಕನ್ನಡದ ಮಾತಿನ ಮಲ್ಲಿ! ಅನುಶ್ರೀ ಅವರು ಕನ್ನಡದ ಹೆಸರಾಂತ ನಿರೂಪಕಿ. ಕನ್ನಡ ಸಿನಿಮಾ ರಂಗದಲ್ಲಿ ಯಾವುದೇ ಕಾರ್ಯಕ್ರಮ ನಡೆಯಲಿ, ಯಾವುದೇ ರಿಯಾಲಿಟಿ ಷೋ ನಡೆಯಲಿ, ಯಾವುದೇ ಪ್ರೋಗ್ರಾಮ್ ನಡೆಯಲ್ಲಿ, ಎಲ್ಲಾ ಕಡೆ ನಮ್ಮ ಅನುಶ್ರೀ ಅವರೇ ನಿರೂಪಣೆ ಮಾಡುತ್ತಾರೆ. ಅನುಶ್ರೀ ಅವರು ಇಲ್ಲಿಯ ತನಕ ಸುಮಾರು 20 ಕ್ಕೂ ಹೆಚ್ಚು ಕನ್ನಡ ರಿಯಾಲಿಟಿ ಶೋಗಳಲ್ಲಿ ನಿರೂಪಣೆ ಮಾಡಿದ್ದಾರೆ ಹಾಗು ಸುಮಾರು 8 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅನುಶ್ರೀ ಅವರು ಇಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ, ಮೊದಲಿಗೆ ಅನುಶ್ರೀ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಇಂದು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಅನುಶ್ರೀ ಅವರು ತಮ್ಮ ಅಭಿಮಾನಿಗಳಿಗೆ ಒಂದು ಖುಷಿ ಸುದ್ದಿ ಕೊಟ್ಟಿದ್ದಾರೆ! ಅದು ಏನು ಗೊತ್ತ? ಈ ಕಂಪ್ಲೀಟ್ ಸ್ಟೋರಿ ನೋಡಿರಿ
ನೆನ್ನೆ ರಾತ್ರಿ ಅನುಶ್ರೀ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆ ಅಲ್ಲಿ “ನಾಳೆ ನನ್ನ ಹುಟ್ಟು ಹಬ್ಬ, ನಿಮಗೆಲ್ಲ ಒಂದು ಸಿಹಿ ಸುದ್ದಿ ಕೊಡುತ್ತೇನೆ” ಎಂದು ಹಾಕಿದ್ದರು. ಈ ಸುದ್ದಿ ಹಾಕಿದ ತಕ್ಷಣ ಸೋಶಿಯಲ್ ಮೀಡಿಯಾ ಗಳಲ್ಲಿ ಬಹಳ ವೈರಲ್ ಆಗಿತ್ತು. ಅನುಶ್ರೀ ಅವರು ಮದುವೆ ಆಗ್ತಾ ಇದ್ದಾರಾ? ಅನುಶ್ರೀ ಅವರು ತಮ್ಮ ಬಾಯ್ ಫ್ರೆಂಡ್ ಬಗ್ಗೆ ಹೇಳುತ್ತಾರಾ? ಅನುಶ್ರೀ ಅವರು ಹೊಸ ಸಿನಿಮಾ ದಲ್ಲಿ ನಟಿಸುತ್ತಾರಾ” ಎಂಬ ಪ್ರಶ್ನೆಗಳು ಸೋಶಿಯಲ್ ಮೀಡಿಯಾ ದಲ್ಲಿ ಹರಿದಾಡಲು ಶುರು ಆಯಿತು. ಇಂದು ಮುಂಜಾನೆ ಈ ಎಲ್ಲಾ ಪ್ರಶ್ನೆಗೆ ತೆರೆ ಬಿದ್ದಿದೆ. ಅದೇನಪ್ಪ ಅಂದರೆ ಅನುಶ್ರೀ ಅವರು ತಮ್ಮದೇ ಆದ ಒಂದು ಯೌಟ್ಯೂಬ್ ಚಾನೆಲ್ ಅನ್ನು ಉಧ್ಘಾಟನೆ ಮಾಡಿದ್ದಾರೆ. ಇದಕ್ಕೆ “ANCHOR ಅನುಶ್ರೀ” ಎಂಬ ಹೆಸರನ್ನು ಇಟ್ಟಿದ್ದಾರೆ.
ಸದ್ಯ ಕನ್ನಡದ ನಿರೂಪಕಿ ಅನುಶ್ರೀ ಅವರು ಝೀ ಕನ್ನಡಲ್ಲಿ ಪ್ರಸಾರವಾಗುವ ಸ ರೇ ಗ ಮ ಪ ರಿಯಾಲಿಟಿ ಶೋನಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಅನುಶ್ರೀ ಅವರ ಹೊಸ ಯೌಟ್ಯೂಬ್ ಚಾನೆಲ್ ಬಗ್ಗೆ, ಝೀ ಕನ್ನಡ ಸ ರೇ ಗ ಪ ಮ ಜಡ್ಜ್ ಗಳು ಆದ ನಾದಬ್ರಹ್ಮ ಹಂಸಲೇಖ, ವಿಜಯ್ ಪ್ರಕಾಶ್ , ಅರ್ಜುನ್ ಜನ್ಯ ಹಾಗು ಗಾಯಕ ರಾಜೇಶ್ ಕೃಷ್ಣನ್ ಅವರು ಅನುಶ್ರೀ ಅವರಿಗೆ ಶುಭ ಹಾರೈಸಿದ್ದಾರೆ. ಇದಲ್ಲದೆ ಈ ಭಾರಿಯ ಸ ರೇ ಗ ಮ ಪ ಎಲ್ಲಾ ಸ್ಪರ್ಧಿಗಳು ಕೂಡ ಅನುಶ್ರೀ ಅವರಿಗೆ ಒಂದು ವಿಡಿಯೋ ಮಾಡಿ ಶುಭ ಹಾರೈಸದಿದ್ದಾರೆ. ಅನುಶ್ರೀ ಅವರಿಗೆ ಯಾರೆಲ್ಲ ಶುಭ ಹಾರೈಸಿದ್ದಾರೆ , ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ ನಮ್ಮ ಕನ್ನಡದ ನಿರೂಪಕಿ ಆದ ಅನುಶ್ರೀ ಅವರು ಮೂಲತಃ ಮಂಗಳೂರಿನವರು. ಮಂಗಳೂರಿನಿಂದ ಬೆಂಗಳೂರಿಗೆ ಬಂದೆ, ಪುಟ್ಟ ಪುಟ್ಟ TV ಚಾನೆಲ್ ಗಳಲ್ಲಿ ತಮ್ಮ ಕೆಲಸಗಳನ್ನು ಶುರು ಮಾಡಿದರು. ಅನುಶ್ರೀ ಅವರು ಕೇವಲ 200 ರೂಪಾಯಿ ಸಂಭಾವನೆ ಯನ್ನು ಮೊಟ್ಟ ಮೊದಲ ಸಂಬಳವಾಗಿ ಪಡೆದಿದ್ದರು. ಇದಾದ ನಂತರ ಅನುಶ್ರೀ ಅವರು ಒಂದರ ನಂತರ ಒಂದು ದೊಡ್ಡ ದೊಡ್ಡ ಕನ್ನಡ ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ್ದಾರೆ. ಅನುಶ್ರೀ ಅವರು ಸ ರೇ ಗ ಮ ಪ, Dance Karnataka ಡಾನ್ಸ್, Swalpa Adjust ಮಾಡ್ಕೊಳ್ಳಿ, Chinnada ಬೇಟೆ, Super (Season ೧ & ೨ ), Cinema ಪನೋರಮ, Reel ಸುದ್ದಿ, Namasthe ಕಸ್ತುರಿ, Star ಲೈವ್, Demandappo ಡಿಮ್ಯಾಂಡು, Tele ಅಂತಾಕ್ಷರಿ ಎಂಬ TV ಕಾರ್ಯಕ್ರಮದಲ್ಲಿ ಕೆಲಸ ಮಾಡಿದ್ದಾರೆ. ಅನುಶ್ರೀ ಅವರು ಚಿನ್ನದ ಬೇಟೆ ಅಂಬಾ ರಿಯಾಲಿಟಿ ಶೋನಿಂದ ಕರ್ನಾಟಕದ ಮನೆ ಮಾತಾದರು.
TV ಮಾಧ್ಯಮ ಅಲ್ಲದೆ ನಮ್ಮ ಅನುಶ್ರೀ ಅವರು ಸುಮಾರು 8 ಚಿತ್ರಗಳಲ್ಲಿ ನಟಿಸಿದ್ದಾರೆ. ಅನುಶ್ರೀ ಅವರು ನಟಿಸಿದ್ದ ಮೊಟ್ಟ ಮೊದಲ ಚಿತ್ರ ಭೂಮಿತಾಯಿ. ಇದಲ್ಲದೆ ಅನುಶ್ರೀ ಅವರು ಬೆಂಕಿಪಟ್ಣ ಎಂಬ ಚಿತ್ರದಲ್ಲಿ ಹೀರೋಯಿನ್ ಆಗಿ ಕೂಡ ನಟಿಸಿದ್ದಾರೆ. ಇತ್ತೀಚಿಗೆ ಅನುಶ್ರೀ ಅವರು ಮಾಲಾಶ್ರೀ ಅಭಿನಯದ ಉಪ್ಪು ಹುಳಿ ಖಾರ ಎಂಬ ಚಿತ್ರದಲ್ಲಿ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. 2017 ನಂತರ ಅನುಶ್ರೀ ಅವರು ಸಿನಿಮಾ ಗಳಲ್ಲಿ ನಟಿಸುವುದು ಕಡಿಮೆ ಮಾಡಿದ್ದಾರೆ. ಸದ್ಯ ಅನುಶ್ರೀ ಅವರು ಕಿರುತೆರೆಯಲ್ಲೇ ಬಹಳ ಬ್ಯುಸಿ ಆಗಿದ್ದಾರೆ. ಅನುಶ್ರೀ ಅವರ ಹೊಸ ಯೌಟ್ಯೂಬ್ ಚಾನೆಲ್ ಗೆ ನಮ್ಮ ಕಡೆ ಇಂದ ಆಲ್ ದಿ ಬೆಸ್ಟ್! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top