Film News

ಅನುಷ್ಕಾ ವಮಿಕಾ ಫೋಟೋ ಶೇರ್ ಮಾಡಿದ ಡೇನಿಯಲ್ ಡಿ ವಿಲಿಯರ್ಸ್

­ಆರ್.ಸಿ.ಬಿ ತಂಡದ ಬಲಿಷ್ಠ ಆಟಗಾರ ಎ.ಬಿ.ಡಿ ಅವರ ಪತ್ನಿ ಡೇನಿಯಲ್, ಈಗ ಅನುಷ್ಕಾ ವಿರಾಟ್ ದಂಪತಿಯ ವಮಿಕಾ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಸಧ್ಯಕ್ಕೆ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ. ಅನುಷ್ಕಾ ವಮಿಕಾ ಹಾಗೂ ಡೇನಿಯಲ್ ಮತ್ತು ಅವರ ಮಗುವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಅಭಿಮಾನಿಯೊಬ್ಬರು ಆಸ್ಕ್ ಮಿ ಎನಿಥಿಂಗ್ ನಲ್ಲಿ ಅನುಷ್ಕಾ ಅವರ ಜೊತೆ ಹ್ಯಾಂಗ್ ಔಟ್ ಮಾಡುತ್ತೀರಾ ಎಂದು ಕೇಳಿದಾಗ, ಡೇನಿಯಲ್ ಮತ್ತು ಅವರ ಮಗು ಹಾಗೂ ಅನುಷ್ಕಾ ಮಗು ವಮಿಕಾ 4 ಜನ ಜೊತೆಯಲ್ಲಿರುವ ಫೋಟೋ ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ವಮಿಕಾ ಮುಖವನ್ನು ಹೈಡ್ ಮಾಡಿದ್ದಾರೆ.

ಹಾಗೂ ಅನುಷ್ಕಾ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ನಾನು ಮೀಟ್ ಮಾಡಿರುವ ಅತ್ಯಂತ ಜನಪ್ರಿಯ ಮತ್ತು ಸರಳ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳಲ್ಲಿ ಒಬ್ಬರು ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಬಹಳ ಸಂತೋಷ ಪಟ್ಟಿದ್ದಾರೆ. ಹಾಗೂ ಡೇನಿಯಲ್ ಅನುಷ್ಕಾ ತಮ್ಮ ಮಕ್ಕಳ ಜೊತೆ ಇರುವ ಫೋಟೋವನ್ನು ಸೋಷಿಯಲ್ ಮೀಡಿಯದಲ್ಲಿ ವೈರಲ್ ಮಾಡಿದ್ದಾರೆ.

 

Trending

To Top