Film News

ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ನಟಿ ಅನುಷ್ಕಾ ಧರಿಸಿದ್ದ ಕುರ್ತಾ ಬಗ್ಗೆ ಚರ್ಚೆ!

ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಇತ್ತೀಚಿಗೆ ಒಟಿಟಿ ಯಲ್ಲಿ ಬಿಡುಗಡೆಯಾದ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಬಿಟ್ಟರೇ ದಿಢೀರನೇ ಹೈದರಾಬಾದ್ ನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅನುಷ್ಕಾ ಶೆಟ್ಟಿ ಧರಿಸಿದ್ದ ಕುರ್ತಾ ಬಗ್ಗೆ ಚರ್ಚೆ ಶುರುವಾಗಿದ್ದು, ನೆಟ್ಟಿಗರು ತರೇಹವಾರಿ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.

ನಟಿ ಅನುಷ್ಕಾ ಕಪ್ಪು ಬಣ್ಣದ ಕುರ್ತಾ ಹಾಗೂ ಜೀನ್ಸ್ ಧರಿಸಿ, ಕೈಯಲ್ಲೊಂದು ಪುಸ್ತಕ ಇಟ್ಟುಕೊಂಡು ಒದುತ್ತಾ ವಿಮಾನ ನಿಲ್ದಾಣದಲ್ಲಿ ಬರುತ್ತಿರುವ ದೃಶ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಆ ಕುರ್ತಾ ಬಗ್ಗೆ ನೆಟ್ಟಿಗರ ಚರ್ಚೆ ಶುರುವಾಗಿದೆ. ಅಂದಹಾಗೆ ಈ ಕುರ್ತಾ ಬಗ್ಗೆ ಚರ್ಚೆಯಾಗಲು ಬಲವಾದ ಕಾರಣವೊಂದಿದೆ. ಇತ್ತೀಚಿಗಷ್ಟೆ ಪ್ರಭಾಸ್ ರವರು ಸಹ ವಿಮಾನನಿಲ್ದಾಣದಲ್ಲಿ ಕಪ್ಪು ಬಣ್ಣದ ಕುರ್ತಾ ಧರಿಸಿದ್ದ ಪೋಟೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಇದೀಗ ಅದೇ ತರಹದ ಕುರ್ತಾ ಧರಿಸಿದ್ದ ಅನುಷ್ಕಾ ಶೆಟ್ಟಿ, ಪ್ರಭಾಸ್ ರವರ ಕುರ್ತಾ ಧರಿಸಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ.

ಇತ್ತೀಚಿಗೆ ಪ್ರಭಾಸ್ ಹಾಗೂ ಅನುಷ್ಕಾ ಇವರಿಬ್ಬರಿಗೂ ಸಂಬಂಧ ಕಲ್ಪಿಸುವಂತಹ ಕೆಲಸವನ್ನು ನೆಟ್ಟಿಗರು ಮಾಡುತ್ತಿದ್ದು, ನಂಬಲು ಅಸಾಧ್ಯವಾದರೂ ಸಹ ಅವಕಾಶ ಸಿಕ್ಕಾಗಲೆಲ್ಲಾ ಪ್ರಭಾಸ್ ಹಾಗೂ ಅನುಷ್ಕಾ ಇಬ್ಬರಿಗೂ ಸಂಬಂಧ ಕಲ್ಪಿಸುತ್ತಾರೆ. ಇನ್ನೂ ಪ್ರಭಾಸ್ ಹಾಗೂ ಅನುಷ್ಕಾ ಇಬ್ಬರೂ ಮದುವೆಯಾಗಲಿದ್ದಾರೆ, ಪ್ರೀತಿಯಲ್ಲಿದ್ದಾರೆ ಎಂಬ ಚರ್ಚೆಗಳು ಜೀವಂತವಾಗಿ ನಡೆಯುತ್ತಿದ್ದರೂ ಈ ಬಗ್ಗೆ ಇಬ್ಬರೂ ನಟರು ಯಾವುದೇ ರೀತಿಯಲ್ಲಿ ಸ್ಪಷ್ಟನೆ ನೀಡಿಲ್ಲ. ಬದಲಿಗೆ ನಾವಿಬ್ಬರೂ ಒಳ್ಳೆಯ ಸ್ನೇಹಿತರು ಅಷ್ಟೆ ಎಂಬ ವಿಚಾರ ಮಾತ್ರ ಹೇಳುತ್ತಿದ್ದಾರೆ.

Trending

To Top