ಮುಂಬೈ: ಬಾಲಿವುಡ್ ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನಿಡಿದ್ದು, ಇಂದು ಮದ್ಯಾಹ್ನ ವೇಳೆಯಲ್ಲಿ ಹೆಣ್ಣು ಮಗುವಿಗೆ ಜನ್ಮಾ ನೀಡಿದ್ದಾರೆ ಅನುಷ್ಕಾ ಎಂಬ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ ವಿರಾಟ್ ಕೊಯ್ಲಿ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ವಿರಾಟ್, ’ಇಂದು ಮದ್ಯಾಹ್ನ ನಮಗೆ ಹೆಣ್ಣು ಮಗು ಜನಿಸಿದೆ ಎಂಬ ವಿಚಾರ ನಿಮಗೆ ತಿಳಿಸಲು ನನಗೆ ಥ್ರಿಲ್ ಎನಿಸುತ್ತಿದೆ. ನಿಮ್ಮೆಲ್ಲರ ಆರ್ಶೀವಾದ, ಪ್ರೀತಿ ಹಾಗೂ ಶುಭ ಹಾರೈಕೆಗೆ ಧನ್ಯವಾದಗಳು, ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ನಮ್ಮ ಬದುಕಿನ ಹೊಸ ಅಧ್ಯಾಯ ಇಂದಿನಿಂದ ಶುರುವಾಗಲಿದೆ. ಈ ಸಂದರ್ಭದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸುತ್ತೀರಾ ಎಂದು ನಂಬುತ್ತೇನೆ ಎಂದು ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದು, ಈ ಟ್ವೀಟ್ ಗೆ ಅಭಿಮಾನಿಗಳಿಂದ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿದೆ.
ಕಳೆದ ಆಗಸ್ಟ್ ೨೦೨೦ ರಂದು ತಾವು ಗರ್ಭಿಣಿ ಎಂಬ ಸುದ್ದಿಯನ್ನು ಅನುಷ್ಕಾ ರವರು ಬಹಿರಂಗಪಡಿಸಿದ್ದರು. ಅಂದಿನಿಂದ ಸಿನೆಮಾ ಸ್ಟಾರ್ ಗಳು, ಕಲಾವಿದರು, ಕ್ರಿಕೆಟಿಗರು, ಅಭಿಮಾನಿಗಳು ಹಾಗೂ ಸ್ನೇಹಿತರಿಂದ ಶುಭಾಷಯಗಳ ಸುರಿಮಳೆ ಆಗುತ್ತಿದೆ. ಇನ್ನೂ ನಟಿ ಅನುಷ್ಕಾರವರಿಗೆ ಅನೇಕ ಸಿನೆಮಾ ಆಫರ್ ಗಳಿದ್ದು, ಗರ್ಭಿಣಿಯಾಗಿದ್ದ ವೇಳೆಯೂ ಸಹ ಜಾಹಿರಾತುವೊಂದರ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
