News

(video)ಅನುಷ್ಕಾ ಚಿತ್ರದಲ್ಲಿ ಹೀರೋಯಿನ್ ಜೊತೆ ಸಕತ್ ಹಾಟ್ ಡಾನ್ಸ್ ಮಾಡಿದ ಸಾಧು ಮಹಾರಾಜ್! ವಿಡಿಯೋ ವೈರಲ್

sadhu-anushka

ಕನ್ನಡದ ಹೊಸ ಚಿತ್ರಗಳಲ್ಲಿ ಒಂದು ಅನುಷ್ಕಾ. ಈ ಚಿತ್ರದಲ್ಲಿ Amrutha, Rupesh Shetty, Sadhu Kokila, Adhi Lokesh, Ruma ಶರ್ಮ ಅವರು ನಟಿಸಿದ್ದಾರೆ! ಈ ಚಿತ್ರದ ಚಿತ್ರೀಕರಣ ಮುಗಿದಿದ್ದು ಇನ್ನೇನು ಬಿಡುಗಡೆಗೆ ರೆಡಿ ಆಗಿದೆ! ಅನುಷ್ಕಾ ಚಿತ್ರದ ನಮ್ಮ ಸಾಧು ಕೋಕಿಲ ಹಾಗು ಹೀರೋಯಿನ್ ಅವರ ಸಕತ್ ಡಾನ್ಸ್ ಇರುವ ವಿಡಿಯೋ ಸಾಂಗ್ ಒಂದು ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದೆ. ಈ ಹಾಡಿನ ಹೆಸರು ನಾಗಮಂಗಲ ಬೆಣ್ಣೆಗೆ ಹಾಗು ಇದನ್ನು ಟಿಪ್ಪು, ಹಾಗು ಶ್ವೇತಾ ದೇವನಹಳ್ಳಿ ಅವರು ಹಾಡಿದ್ದಾರೆ! ಈ ಹಾಡಿನಲ್ಲಿ ನಮ್ಮ ಕನ್ನಡದ ಮಹಾನ್ ಹಾಸ್ಯ ನಟರಾದ ಸಾಧು ಕೋಕಿಲ ಅವರು ಸಕತ್ ಆಗಿ ಡಾನ್ಸ್ ಮಾಡಿದ್ದಾರೆ! ಈ ಕೆಳಗಿನ ವಿಡಿಯೋ ಸಾಂಗ್ ತಪ್ಪದೆ ನೋಡಿರಿ
Film: Anushka ♪ Music: Vikram Selva ♪ Lyricist: Ravindra Muddi, Devaraj Kumar, Manvarshi ♪ Starcast: Amrutha, Rupesh Shetty, Sadhu Kokila, Adhi Lokesh, Ruma Sharma ♪ Director: Devaraj Kumar ♪ Producer: S.K.Gangadhar ♪ Banner: Sri Nanjundeshwara Production House ♪ Record Label: AANANDA AUDIO VIDEOನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡದ busiest ನಟರಲ್ಲಿ ಒಬ್ಬರು. ಕಳೆದ ವರ್ಷ ನಮ್ಮ ದರ್ಶನ್ ಅವರು ಒಂದು ರಸ್ತೆ ಅಪಘಾತದ ದಿಂದ ತಮ್ಮ ಬಲಗೈ ಗೆ ಭಾರಿ ಪೆಟ್ಟಾಗಿ ಸುಮಾರು ಒಂದು ತಿಂಗಳ ಕಾಲ ದರ್ಶನ್ ಅವರು ರೆಸ್ಟ್ ನಲ್ಲಿದ್ದರು. ಇವರ ಕಾಲ್ ಶೀಟ್ 2023 ತನಕ ಫುಲ್! ಕನ್ನಡದ ನಿರ್ಮಾಪಕರುಗಳು ದರ್ಶನ್ ಅವರಿಗೊಂದು ಸಿನಿಮಾ ಮಾಡಲು ಕ್ಯೂ ನಲ್ಲಿ ನಿಂತಿ ವೇಟ್ ಮಾಡ್ತಾ ಇದ್ದಾರೆ. ಕಳೆದ ವರ್ಷ ನಮ್ಮ ದರ್ಶನ್ ಅವರ ಯಾವುದೇ ಸಿನಿಮಾ ಕೂಡ ಬಿಡುಗಡೆ ಆಗಿಲ್ಲ. ಕಳೆದ ವರ್ಷ ದರ್ಶನ್ ಅವರು ಕುರುಕ್ಷೇತ್ರ ಹಾಗು ಯಜಮಾನ ಚಿತ್ರಗಳ ಚಿತ್ರೀಕರಣ ನಡೆಯಿತು. ಹಾಗಾದ್ರೆ ಈ ವರ್ಷ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಾವ ಯಾವ ಸಿನಿಮಾಗಳು ಬರಲಿವೆ, ಯಾವ ಸಿನಿಮಾಗಳು ಸೆಟ್ಟೇರಲಿವೆ, ಗೊತ್ತ? ಇಲ್ಲಿದೆ ಕಂಪ್ಲೀಟ್ ಮಾಹಿತಿ.
ಕುರುಕ್ಷೇತ್ರ – ಇದೆ ಮೊದಲ ಬಾರಿಗೆ ಸ್ಯಾಂಡಲ್ವುಡ್ ನಲ್ಲಿ ಅತೀ ಹೆಚ್ಚು ಬಜೆಟಿನ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್, ರೆಬೆಲ್ ಸ್ಟಾರ್ ಅಂಬರೀಷ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರಸ್ವಾಮಿ ಹಾಗು ಬಹು ದೊಡ್ಡ ತಾರೆಗಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ವರ್ಷದ ಬಹು ನಿರೀಕ್ಷೆಯ ದಕ್ಷಿಣ ಭಾರತದ ಚಿತ್ರಗಳಲ್ಲಿ ಕುರುಕ್ಷೇತ್ರ ಕೂಡ ಒಂದು. ಕುರುಕ್ಷೇತ್ರ ಚಿತ್ರಕ್ಕಾಗಿ ಕರ್ನಾಟಕ ಅಲ್ಲದೆ, ಪಕ್ಕದ ರಾಜ್ಯಗಳಲ್ಲಿ ಕೂಡ ಜನ ವೇಟ್ ಮಾಡ್ತಾ ಇದ್ದಾರೆ. ಕುರುಕ್ಷೇತ್ರ ಚಿತ್ರ ಕೆಲವೇ ಕೆಲವು ದಿನಗಳಲ್ಲಿ ಬಿಡುಗಡೆ ಆಗಲಿದೆ. ಯಜಮಾನ – ಈ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ ಅವರು ಕೂಡ ನಟಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಇತ್ತೀಚಿಗೆ ದೂರದ ಸ್ವೀಡನ್ ದೇಶದಲ್ಲಿ ನಡೆದಿತ್ತು. ಈ ಚಿತ್ರ ಕೂಡ ಈ ವರ್ಷದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದು. ಯಜಮಾನ ಚಿತ್ರವೂ ಇದೆ ವರ್ಷ ಬಿಡುಗಡೆ ಆಗಲಿದೆ. 2019 ರಲ್ಲಿ ಯಜಮಾನ ಮತ್ತು ಕುರುಕ್ಷೇತ್ರ ಬಿಡುಗಡೆ ಆಗುವುದು confirm ಆಗಿದೆ.
inspector ವಿಕ್ರಂ – ಇದಲ್ಲದೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪ್ರಜ್ವಲ್ ದೇವರಾಜ್ ಅವರು ನಟಿಸಿರುವ inspector ವಿಕ್ರಂ ಎಂಬ ಚಿತ್ರದಲ್ಲಿ ಕೂಡ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ನಮ್ಮ ದರ್ಶನ್ ಅವರು ಭಗತ್ ಸಿಂಗ್ ಎಂಬ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಚಿತ್ರದಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸುಮಾರು 8 ರಿಂದ 10 ನಿಮಿಷಗಳ ಕಾಲ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. inspector ವಿಕ್ರಂ ಚಿತ್ರ ಕೂಡ ಇದೆ ವರ್ಷ ಬಿಡುಗಡೆ ಆಗಲಿದೆ. ಒಡೆಯ – ಇದು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 52 ನೇ ಚಿತ್ರ. ಈ ಚಿತ್ರದ ಚಿತ್ರೀಕರಣವನ್ನು ಕೂಡ ನಮ್ಮ ಡಿಬಾಸ್ ಅವರು ಬಹುತೇಕ ಮುಗಿಸಿದ್ದಾರೆ. ಸುಮಾರು ಕಾಲು ಭಾಗದಷ್ಟು ಚಿತ್ರೀಕರಣ ಮಾತ್ರ ಉಳಿದಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಮೊನ್ನೆ ಅಷ್ಟೇ ಒಡೆಯ ಚಿತ್ರದ ಹಾಡೊಂದರ ಶೂಟಿಂಗ್ ನಡೆದಿದೆ. ಈ ಚಿತ್ರ ಈ ವರ್ಷದ ಕೊನೆಯಲ್ಲಿ ಇಲ್ಲ ಅಂದ್ರೆ ಮುಂದಿನ ವರ್ಷ january ಅಲ್ಲಿ ಬಿಡುಗಡೆ ಆಗುವ ಸಾಧ್ಯತೆಗಳಿವೆ. amar – ನಿಮಗೆಲ್ಲ ಗೊತ್ತಿರೋ ಹಾಗೆ ಈ ಚಿತ್ರದಲ್ಲಿ ನಮ್ಮ ರೆಬೆಲ್ ಸ್ಟಾರ್ ಅಂಬರೀಷ್ ಅವರ ಪುತ್ರ ಅಭಿಷೇಕ್ ಅವರು ನಟಿಸುತ್ತಿದ್ದಾರೆ. ಇದು ಅವರ ಮೊದಲ ಚಿತ್ರ ವಾಗಿದೆ. ಈ ಚಿತ್ರದಲ್ಲಿ ಕೂಡ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಒಂದು ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗೆ ಅಷ್ಟೇ ದರ್ಶನ್ ಅವರು ಅಮರ್ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಅಭಿಷೇಕ್ ಅಂಬರೀಷ್ ಅವರ ಅಮರ್ ಚಿತ್ರ ಕೂಡ ಇದೇ ವರ್ಷ ಬಿಡುಗಡೆ ಆಗುವುದು confirm ಆಗಿದೆ. ರಾಬರ್ಟ್ – ಇದು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು 53 ನೇ ಸಿನಿಮಾ. ನಿಮಗೆಲ್ಲ ಗೊತ್ತಿರೋ ಹಾಗೆ ಇತ್ತೀಚಿಗೆ ಅಷ್ಟೇ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದರು. ಈ ಚಿತ್ರವನ್ನು ತರುಣ್ ಸುಧೀರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ರಾಬರ್ಟ್ ಚಿತ್ರ ಇದೇ ವರ್ಷ ಸೆಟ್ಟೇರಲಿದ್ದು, ದರ್ಶನ್ ಅವರ ಡೇಟ್ಸ್ ಇದ್ದಾರೆ ಈ ಚಿತ್ರದ ಶೂಟಿಂಗ್ ಕೂಡ ಇದೇ ವರ್ಷ ಮುಗಿಯಲಿದೆ ಎಂದು ತಿಳಿದುಬಂದಿದೆ. ಆದರೆ ರಾಬರ್ಟ್ ಚಿತ್ರ ಬಲ್ಲ ಮೂಲಗಳ ಪ್ರಕಾರ ಮುಂದಿನ ವರ್ಷ ಬಿಡುಗಡೆ ಆಗುವುದು ಎಂದು ತಿಳಿದು ಬಂದಿದೆ.
ಗಂಡುಗಲಿ ಮದಕರಿ ನಾಯಕ – ಬಲ್ಲ ಮೂಲಗಳ ಪ್ರಕಾರ ಇದು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 54 ಸಿನಿಮಾ ಆಗಬಹುದು. ಈ ಚಿತ್ರವನ್ನು ನಮ್ಮ ರಾಕ್ ಲೈನ್ ವೆಂಕಟೇಶ್ ಅವರು ಬಹು ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಎಲ್ಲಾವೂ ಅಂದುಕೊಂಡಂತೆ ಆದರೆ ಈ ಚಿತ್ರ ಕೂಡ ಇದೇ ವರ್ಷ ಸೆಟ್ಟೇರಲಿದೆ ಎಂದು ತಿಳಿದು ಬಂದಿದೆ. ಈ ವರ್ಷ ನಮ್ಮ ಕನ್ನಡದ ಚೀನಿ ರಸಿಕರಿಗೆ ಹಾಗು ದಚ್ಚು ಅಭಿಮಾನಿಗಳಿಗೆ ಹಬ್ಬವೆಂದೇ ಹೇಳಬಹುದು. ಒಂದರಹಿಂದೆ ಒಂದಂತೆ ಈ ಬಾರಿ ದರ್ಶನ್ ಅವರ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಲಿದೆ. ನಾವು ಕೂಡ ದರ್ಶನ್ ಅವರ ಚಿತ್ರಕ್ಕೆ ವೇಟ್ ಮಾಡ್ತಾ ಇದ್ದಿವಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಹೆಚ್ಚು ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top