ಮುಂಬೈ: ಭಾರತೀಯ ಕ್ರಿಕೆಟ್ ತಂಡ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ನ ಖ್ಯಾತ ನಟಿ ಅನುಷ್ಕಾ ಶರ್ಮಾ ರವರ ಮುದ್ದಿನ ಮಗಳ ನಾಮಕರಣ ಮಹೋತ್ಸವ ಸಂಭ್ರಮದಿಂದ ನಡೆದಿದ್ದು, ಅನುಷ್ಕಾ ಹಾಗೂ ವಿರಾಟ್ ಇಬ್ಬರ ಹೆಸರು ಹೋಲುವಂತೆ ವಮಿಕಾ ಎಂಬ ಹೆಸರಿಟ್ಟಿದ್ದಾರೆ.
ನಟಿ ಅನುಷ್ಕಾ ರವರು ಜ.11 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಸಂತಸದ ಕ್ಷಣವನ್ನು ಸೋಶಿಯಲ್ ಮೀಡಿಯಾದಲ್ಲೂ ಶೇರ್ ಮಾಡಿ ಸಂತಸವನ್ನು ಸಹ ಹಂಚಿಕೊಂಡಿದ್ದರು. ಇದೀಗ ನಾಮಕರಣ ಕಾರ್ಯಕ್ರಮ ನಡೆದಿದ್ದು, ಅನುಷ್ಕಾ ಹಾಗೂ ವಿರಾಟ್ ಇಬ್ಬರ ಹೆಸರು ಹೋಲುವಂತೆ ವಮಿಕಾ ಎಂದು ತಮ್ಮ ಮಗಳಿಗೆ ಹೆಸರನ್ನಿಟ್ಟಿದ್ದಾರೆ.
ಅನುಷ್ಕಾ ಕೊಹ್ಲಿ ದಂಪತಿಗೆ ಹೆಣ್ಣು ಮಗು ಜನ್ಮಿಸುತ್ತಿದ್ದಂತೆ, ಮಗಳಿಗೆ ಯಾವ ಹೆಸರನ್ನಿಡುತ್ತಾರೆ ಎಂಬುದರ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆದಿತ್ತು. ಅಂದಹಾಗೆ ಅನುಷ್ಕಾ ಹಾಗೂ ಕೊಯ್ಲಿ ಯವರನ್ನು ಅಭಿಮಾನಿಗಳು ವಿರುಷ್ಕಾ ಎಂದು ಕರೆಯುತ್ತಿರುತ್ತಾರೆ. ಇನ್ನೂ ಇದೇ ಹೆಸರನ್ನೇ ತಮ್ಮ ಮಗಳಿಗೆ ಇಡಿ ಎಂಬ ಬೇಡಿಕೆಯನ್ನು ಸಹ ಇಟ್ಟಿದ್ದಾರೆ. ಇನ್ನೂ ತಮ್ಮ ಅಭಿಮಾನಿಗಳಿಗೆ ನಿರಾಸೆಯಾಗದಂತೆ ತಮ್ಮ ಮಗಳಿಗೆ ವಮಿಕಾ ಎಂದು ಹೆಸರಿಟ್ಟಿದ್ದಾರೆ.
ಇನ್ನೂ ಮೊದಲ ಬಾರಿಗೆ ಅನುಷ್ಕಾ ಹಾಗೂ ವಿರಾಟ್ ದಂಪತಿ ತಮ್ಮ ಮಗಳೊಂದಿಗೆ ಪೊಟೋವೊಂದನ್ನು ಹಂಚಿಕೊಂಡಿದ್ದು, ನಮ್ಮ ಹೊಸ ಪ್ರಪಂಚ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
