HomeKarnatakaಕೊರೊನಾ ಬಗ್ಗೆ ನಟಿ ಅನುಪಮ ಗೌಡ ಹೇಳಿದ್ದೇನು ನೋಡಿ..

ಕೊರೊನಾ ಬಗ್ಗೆ ನಟಿ ಅನುಪಮ ಗೌಡ ಹೇಳಿದ್ದೇನು ನೋಡಿ..

ಈ ಕೊರೊನಾ ರೋಗದ ಕಷ್ಟದ ಸಮಯದಲ್ಲಿ ಪ್ಲಾಸ್ಮಾ ಡೊನೇಟ್ ಮಾಡುವುದು ಒಳ್ಳೆಯದು ಎಂದು ವೈದ್ಯರು ಸಲಹೆ ನೀಡಿದ್ದಾರೆ..ಈ ವಿಷಯಗಳ ಬಗ್ಗೆ ಕಿರುತೆರೆ ನಟಿ ಅನುಪಮ ಗೌಡ ಇನ್ಸ್ಟಾಗ್ರಾಮ್ ನಲ್ಲಿ ಲೈವ್ ಬಂದು ಏನು ಹೇಳಿದ್ದಾರೆ ಅಂತ ನೋಡಿ..

ನಮಸ್ತೆ ಎಲ್ಲರೂ ಮನೆಯಲ್ಲಿ ಇರುವ ಎಲ್ಲರೂ ಅರಮಾಗಿದ್ದೀರ ಅಂತ
ಅನ್ಕೊಂಡಿದ್ದೀನಿ. ಈ ವಿಡಿಯೋ ಮಾಡುವ ಉದ್ದೇಶ ತುಂಬಾ ಬೇಜಾರಾಗಿ ಮಾಡುತ್ತಿದ್ದೀನಿ.ಯಾಕೆ ಅಂದರೆ ಬೆಳಿಗ್ಗೆ ನಾನು ಇನ್ಸ್ಟಾಗ್ರಾಮ್ ನಲ್ಲಿ ಪ್ಲಾಸ್ಮಾ ಡೋನೇಟ್ ಮಾಡುವ ಬಗ್ಗೆ ಸ್ಟೋರಿ ಹಾಕಿದ್ದೆ ಅದರಲ್ಲಿ ಯಾರಿಗಾದರೂ ಆಸಕ್ತಿ ಇದ್ದರೆ ಅವರು ಅವರ ಬ್ಲಡ್ ಗ್ರೂಪ್ ಹಾಗೂ ಅವರ ಕಾಂಟ್ಯಾಕ್ಟ್ ಡೀಟೈಲ್ಸ್ ಕಲಿಸಲು ಹೇಳಿದ್ದೆ.

ತುಂಬಾ ಜನ ಅದಕ್ಕೆ ರೆಸ್ಪಾಂಡ್ ಮಾಡಿದ್ದರು ಅದರಲ್ಲಿ ಕೆಲವರು ಬರಿ ಅವರ ಬ್ಲಡ್ ಗ್ರೂಪ್ ಕಳಿಸಿದ್ದರು ಇನ್ನು ಕೆಲವರು ಅವರ ಫೋನ್ ನಂಬರ್ ಸಹ ಕಳಿಸಿದ್ದರು ಅದನ್ನು ನೋಡಿ ನನಗೆ ಬಹಳ ಸಂತೋಷವಾಯಿತು ಆದರೆ ಕೆಲವರು ತಪ್ಪು ನಂಬರ್ ಗಳನ್ನು ಸೆನ್ಡ್ ಮಾಡಿದ್ದರು ಅದರಿಂದ ನಾವು ಕಾಲ್ ಮಾಡಿದ್ದಾಗ ನಮಗೂ ಹಾಗೂ ಬೇರೆ ಅವರಿಗೂ ತುಂಬಾ ಬೇಜಾರ್ ಆಗುವಂತೆ ಮಾಡಿದ್ದರು.

ಯಾವುದೋ ಒಂದು ಕಾಂಟ್ಯಾಕ್ಟ್ ಡಿಟೈಲ್ ಇಂದ ಒಂದು ಪ್ಲಾಸ್ಮಾ ಅಥವಾ ಒಂದು ಬೆಡ್ ಸಿಕ್ಕಿದ್ದರೆ ಇದು ನಮ್ಮೆಲ್ಲರ ಜಯ. ಊಟ ನಿದ್ದೆ ಬಿಟ್ಟು ನಮಗಾಗಿ ಕಷ್ಟ ಪಡುತ್ತಿದ್ದಾರೆ ಆದರೂ ದಿನಾಲು ನಮಗೆ ಸಾವಿನ ಸುದ್ದಿ ಮಾತ್ರ ಕೇಳಿಬರುತ್ತಿದೆ.ಹೊರಗಡೆ ಬರುತ್ತಿರುವವರು ತುಂಬಾ ಕಡಿಮೆ ಜನ ಆದರೂ ಸಹ ನಾವೆಲ್ಲರು ಒದ್ದಾಡುತ್ತಿದ್ದೇವೆ.ಇಂತ ಟೈಂ ನಲ್ಲಿ ದಯವಿಟ್ಟು ಯಾರಿಗೆ ಆಗಲಿ ಕೋವಿಡ್ ಟೈಂ ನಲ್ಲಿ ಕೆಲಸ ಮಾಡುತ್ತಿರುವವರು ದಯವಿಟ್ಟು ತಪ್ಪಾದ ಮಾಹಿತಿ ಕೊಡಬೇಡಿ ಎಂದು ಹೇಳಿಕೊಂಡಿದ್ದಾರೆ.

You May Like

More