Film News

ಅಭಿನಯ ಶಾರದೆಯ ಬಗ್ಗೆ ಭಾವನಾತ್ಮಕ ಪೋಸ್ಟ್ ಮಾಡಿದ ಅನು ಪ್ರಭಾಕರ್

ತಮ್ಮ ಮಾಜಿ ಅತ್ತೆ ನಿಧಾನಕ್ಕೆ ಅನು ಪ್ರಭಾಕರ್ ಅವರು ಕೂಡ ಕಣ್ಣೀರು ಹಾಕಿದ್ದಾರೆ. ನಿಮ್ಮ ಜೊತೆ ಕಳೆದ ಪ್ರತಿ ಕ್ಷಣ ಸಧಾ ನನ್ನ ಹೃದಯದಲ್ಲಿ ಇರುತ್ತೆ ಅಮ್ಮ. ನಿಮ್ಮಿಂದ ಕಲಿತ ಜೀವನದ ಪಾಠಗಳನ್ನ ನಾನೆಂದಿಗೂ ಮರೆಯುವುದಿಲ್ಲ ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

https://m.facebook.com/story.php?story_fbid=374143220749131&id=100044603671867

ಚಂದನ ವನದ ಹಿರಿಯ ನಟಿ ಅಭಿನಯ ಶಾರದೆ ಜಯಂತಿ ಅವರು ಇನ್ನು ನೆನಪು ಮಾತ್ರ.ಇಂದು ಜುಲೈ 26 ಬೆಳಗಿನ ಜಾವ ಜಯಂತಿ ಅವರು ನಮ್ಮನ್ನೆಲ್ಲ ಬಿಟ್ಟು ಹೋದರು.ಜಯಂತಿ ಅವರನ್ನ ಈಗಾಗಲೇ ಅನೇಕ ಬಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ರಾಜಕೀಯದ ಗಣ್ಯರು ಸೇರಿದಂತೆ ಚಿತ್ರರಂಗದ ಗಣ್ಯರು ಕೂಡ ಸಂತಾಪವನ್ನು ಸೂಚಿಸಿದ್ದಾರೆ.

ಇದೀಗ ಮಾಜಿ ಸೊಸೆ ಯೂ ಕೂಡ ಸೋಷಿಯಲ್ ಮಿಡಿಯಾದಲ್ಲಿ ಅತ್ತೆ ಜೊತೆಗಿನ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅತ್ತೆಯ ಜೊತೆ ಕಳೆದಂತಹ ಪ್ರತಿ ಕ್ಷಣವನ್ನ ಈಗ ಮೆಲಕು ಹಾಕುತ್ತಿದ್ದಾರೆ.ಜಯಂತಿ ಅವರನ್ನ ಪ್ರೀತಿಯಿಂದ ಅನು ಪ್ರಭಾಕರ್ ಅವರು ಅಮ್ಮ ಎಂದು ಕರೆಯುತ್ತಿದ್ದರು. 2002 ರಲ್ಲಿ ಜಯಂತಿ ಅವರ ಮಗ ಕೃಷ್ಣ ಕುಮಾರ್ ಅವರನ್ನ ಅನು ಪ್ರಭಾಕರ್ ಅವರು ಮದುವೆಯಾಗಿದ್ದರು.

2014 ರಲ್ಲಿ ವಿಚ್ಛೇಧನವನ್ನ ಪಡೆದುಕೊಂಡು. ನಂತರ 2014ರಲ್ಲಿ ರಘು ಮುಖರ್ಜಿ ಅವರನ್ನ ಮದುವೆಯಾದರು.ಕೆಲವು ಭಿನ್ನಾಭಿಪ್ರಾಯಗಳು ಇದ್ದ ಕಾರಣ ಜಯಂತಿ ಅವರ ಮಗನಿಂದ ಧೂರವಾದರು ಅನು ಪ್ರಭಾಕರ್. ಅತ್ತೆಯ ನಿಧನಕ್ಕೆ ಕಂಬನಿ ಮಿಡಿದ್ದಿದ್ದಾರೆ ಅನು ಪ್ರಭಾಕರ್.

Trending

To Top