Film News

ಡೈರೆಕ್ಟರ್ ಜೊತೆ ಡೇಟಿಂಗ್ನಲ್ಲಿದ್ದಾರೆ ಅನು ಇಮ್ಮಾನ್ಯುಯೆಲ್!

ಹೈದರಾಬಾದ್: ಸ್ಟಾರ್ ಹಿರೋಯಿನ್‌ಗೆ ಇರಬೇಕಾದ ಎಲ್ಲಾ ಲಕ್ಷಣಗಳು ಇದ್ದರೂ ಸಹ ಸಿನೆಮಾಗಳಲ್ಲಿ ಅವಕಾಶ ಸಿಗದೇ ಇರುವ ನಟಿಯರಲ್ಲಿ ಒಬ್ಬರಾದ ಅನು ಇಮ್ಮಾನ್ಯುಯೆಲ್ ಹಿರಿಯ ನಿರ್ದೇಶಕರೊಂದಿಗೆ ಡೇಟಿಂಗ್‌ನಲ್ಲಿದ್ದಾರಂತೆ.

ಹೌದು ಕೆಲವೇ ಸಿನೆಮಾಗಳಲ್ಲಿ ನಟಿಸಿದ್ದ ಅನು ಇಮ್ಮಾನ್ಯುಯೆಲ್ ವಯಸ್ಸು ಇನ್ನೂ ೨೩ ವರ್ಷ. ಈ ನಟಿ ತನಗಿಂತ ಹಿರಿಯ ವ್ಯಕ್ತಿಯೊಂದಿಗೆ ಡೇಟಿಂಗ್ ನಲ್ಲಿದ್ದಾರೆ ಎನ್ನಲಾಗುತ್ತಿದೆ. ೪೦ ವರ್ಷದ ಜ್ಯೋತಿ ಕೃಷ್ಣ ಎಂಬ ನಿರ್ದೇಶಕನೊಂದಿಗೆ ಡೇಟಿಂಗ್ ನಲ್ಲಿದ್ದಾರೆ ಎನ್ನಲಾಗಿದ್ದು, ತಮಿಳು ಮಿಡಿಯಾಗಳಲ್ಲಿ ಈ ವಿಚಾರ ಹರಿದಾಡುತ್ತಿದೆಯಂತೆ. ಪ್ರಖ್ಯಾತ ನಿರ್ಮಾಪಕ ಎ.ಎಂ.ರತ್ನಂ ಪುತ್ರ ಜ್ಯೋತಿ ಕೃಷ್ಣ ಜೊತೆ ಡೇಟಿಂಗ್ ನಲ್ಲಿರುವುದಾಗಿ ಸುದ್ದಿ ಹರಿದಾಡುತ್ತಿದ್ದು. ಆದರೆ ಈ ಕುರಿತು ಯಾವುದೇ ಕ್ಲಾರಿಟಿ ನೀಡಿಲ್ಲ.

ಇನ್ನೂ ಇಂಡೋ ಅಮೇರಿಕನ್ ಹುಡುಗಿಯಾಗಿದ್ದ ಅನು ಇಮ್ಮಾನ್ಯುಯಲ್ ಕಳೆದ 2017 ರಲ್ಲಿ ಆಕ್ಸಿಜನ್ ಎಂಬ ಚಿತ್ರದಲ್ಲಿ ನಿರ್ದೇಶಕ ಜ್ಯೋತಿ ಕೃಷ್ಣ ಜೊತೆ ಕೆಲಸ ಮಾಡಿದ್ದರು. ಈ ಚಿತ್ರದಲ್ಲಿ ನಟ ಗೋಪಿಚಂದ್ ರವರ ಜೊತೆ ಅನು ಬಣ್ಣ ಹಚ್ಚಿದ್ದರು. ಈ ಸಂದರ್ಭದಲ್ಲಿಯೇ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ಇತ್ತೀಚಿಗಷ್ಟೆ ಈ ವಿಚಾರ ಪ್ರಚಲಿತಕ್ಕೆ ಬಂದಿದೆ. ಆದರೆ ಇವರಿಬ್ಬರ ನಡುವೆ ಇರುವುದು ಕೇವಲ ಸ್ನೇಹ ಮಾತ್ರ. ಇವರಿಬ್ಬರೂ ಪ್ರೊಫೆಷನಲ್ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂದು ಕೆಲವೊಂದು ಮೂಲಗಳು ಹೇಳುತ್ತಿವೆಯಂತೆ.

Trending

To Top