Saturday, May 21, 2022
HomeFilm Newsಮತ್ತೊಂದು ದಾಖಲೆ ಬರೆದ ಪವರ್‍ ಸ್ಟಾರ್ ಪುನೀತ್ ರವರ ಜೇಮ್ಸ್ ಸಿನೆಮಾ…..

ಮತ್ತೊಂದು ದಾಖಲೆ ಬರೆದ ಪವರ್‍ ಸ್ಟಾರ್ ಪುನೀತ್ ರವರ ಜೇಮ್ಸ್ ಸಿನೆಮಾ…..

ಕನ್ನಡದ ಕುವರ, ಪವರ್‍ ಸ್ಟಾರ್‍ ಪುನೀತ್ ರಾಜ್ ಕುಮಾರ್‍ ರವರ ಕೊನೆಯ ಸಿನೆಮಾ ಜೇಮ್ಸ್ ಈಗಾಗಲೇ ಅನೇಕ ದಾಖಲೆಗಳನ್ನು ಮಾಡಿದೆ. ಇದೀಗ ಮತ್ತೊಂದು ದಾಖಲೆ ತನ್ನ ಮುಡಿಗೇರಿಸಿಕೊಂಡಿದೆ. ಸದ್ಯ ಬಾಕ್ಸ್ ಆಫೀಸ್ ಲೂಟಿ ಹೊಡೆಯುತ್ತಿರುವ ಸಿನೆಮಾ ಕೆಜಿಎಫ್-2. ಎಲ್ಲಾ ದಾಖಲೆಗಳನ್ನು ಮುರಿಯುತ್ತಾ ಬಂದರೇ ಕೆಜಿಎಫ್-2 ಸಿನೆಮಾದ ರೆಕಾರ್ಡ್ ಅನ್ನು ಅಪ್ಪು ಅಭಿನಯದ ಜೇಮ್ಸ್ ಬ್ರೇಕ್ ಮಾಡಿದೆ.

ಹೌದು ಅಪ್ಪು ಅಭಿನಯದ ಜೇಮ್ಸ್ ಸಿನೆಮಾ ಕರ್ನಾಟಕದಲ್ಲಿ ಕೆಜಿಎಫ್-2 ಸಿನೆಮಾದ ರೆಕಾರ್ಡ್ ಬ್ರೇಕ್ ಮಾಡುವ ಮೂಲಕ ದಾಖಲೆ ಮಾಡಿದೆ. ಕೆಜಿಎಫ್-2 ಎಲ್ಲಾ ದಾಖಲೆಗಳನ್ನು ಬ್ರೇಕ್ ಮಾಡುತ್ತಿದ್ದರೇ ಕರ್ನಾಟಕದಲ್ಲಿ ಕೆಜಿಎಫ್ ರೆಕಾರ್ಡ್ ಅನ್ನು ಜೇಮ್ಸ್ ಸಿನೆಮಾ ಬ್ರೇಕ್ ಮಾಡಿದೆ. ಕರ್ನಾಟಕದಲ್ಲಿ ಕೆಜಿಎಫ್ 2 ಸಿನೆಮಾದ ಟಿಕೆಟ್ ಗಳು ಒಟ್ಟು 75 ಲಕ್ಷ ಮಾರಾಟವಾಗಿದೆ. ಜೇಮ್ಸ್ ಸಿನೆಮಾದ ಟಿಕೆಟ್ ಗಳು ಒರೊಬ್ಬರಿ ಒಂದು ಕೋಟಿಗೂ ಅಧಿಕ ಟಿಕೆಟ್ ಗಳು ಮಾರಾಟವಾಗಿದೆ. ಆ ಮೂಲಕ ಕೆಜಿಎಫ್ 2 ದಾಖಲೆಯನ್ನು ಜೇಮ್ಸ್ ಸಿನೆಮಾ ಬ್ರೇಕ್ ಮಾಡಿದೆ. ಇದೀಗ ಕನ್ನಡ ಸಿನೆಮಾಗಳ ಬಗೆಗೆನೇ ಎಲ್ಲರೂ ಮಾತನಾಡಿದಕೊಳ್ಳುತ್ತಿದ್ದಾರೆ. ಉತ್ತಮವಾದ ಮೇಕಿಂಗ್ ಒಳ್ಳೆಯ ಕಥೆಯನ್ನು ಆಧರಿಸಿ ಸಿನೆಮಾಗಳು ಕನ್ನಡದಲ್ಲಿ ಹೆಚ್ಚು ಬರುತ್ತಿವೆ.

ಭಾರತೀಯ ಸಿನಿರಂಗಕ್ಕೆ ಇಂದು ಕನ್ನಡ ಸಿನಿರಂಗದ ತಾಕತ್ತು ಏನು ಎಂಬುದನ್ನು ತೋರಿಸಿಕೊಡಲಾಗಿದೆ. ಇಡೀ ವಿಶ್ವವೇ ಕೆಜಿಎಫ್-2 ಸಿನೆಮಾ ಬಗ್ಗೆ ಮಾತನಾಡುತ್ತಿದೆ. ಸಾವಿರ ಕೋಟಿ ಗಳಿಗೆ ಮಾಡಿದ ಮೊದಲ ಕನ್ನಡ ಸಿನೆಮಾ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಇನ್ನೂ ಅಪ್ಪು ರವರ ಕೊನೆಯ ಸಿನೆಮಾ ಜೇಮ್ಸ್ ಸಹ ದಾಖಲೆ ಮಾಡಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟ ಆಗುವ ಮೂಲಕ ಜೇಮ್ಸ್ ಸಿನೆಮಾ ಕೆಜಿಎಫ್-2 ಸಿನೆಮಾದ ರೆಕಾರ್ಡ್ ಬ್ರೇಕ್ ಮಾಡಿದೆ.

ಸಿನೆಮಾ ಪ್ರದರ್ಶಕರ ಲೆಕ್ಕಾಚಾರದಂತೆ  ಕರ್ನಾಟಕದಲ್ಲಿ ಕೆಜಿಎಫ್ 2 ಸಿನೆಮಾದ 75 ಲಕ್ಷ ಟಿಕೆಟ್ ಗಳು ಮಾತ್ರ ಮಾರಾಟವಾಗಿದೆ.  ಈ ಹಿಂದೆ ಯಶ್ ರವರ ಮಿಸ್ಟರ್‍ ಅಂಡ್ ಮಿಸಸ್ ರಾಮಾಚಾರಿ ಸಿನೆಮಾ ಸಹ 75 ಲಕ್ಷ ಟಿಕೆಟ್ ಗಳನ್ನು ಮಾರಾಟ ಮಾಡಿತ್ತು. ಕೆಜಿಎಫ್-2  ಈ ಸಿನೆಮಾದ ರೆಕಾರ್ಡ್ ಬ್ರೇಕ್ ಮಾಡುತ್ತೆ ಎಂದು ಹೇಳಲಾಗಿತ್ತು. ಅದರೆ ಈ ರೆಕಾರ್ಡ್‌ಗಳನ್ನು ಅಪ್ಪು ರವರ ಜೇಮ್ಸ್ ಬ್ರೇಕ್ ಮಾಡಿದೆ. ಸ್ಯಾಂಡಲ್ ವುಡ್ ಸಿನಿರಂಗದ ಇತಿಹಾಸದಲ್ಲಿ ಕೋಟಿಗೂ ಹೆಚ್ಚು ಟಿಕೆಟ್ ಮಾರಾಟವಾದ ಸಿನೆಮಾ ಆಗಿ ಜೇಮ್ಸ್ ಖ್ಯಾತಿ ಪಡೆದುಕೊಂಡಿದೆ. ಇನ್ನೂ ಜೇಮ್ಸ್ ಸಿನೆಮಾ ಬಿಡುಗಡೆಯಾದ ನಾಲ್ಕು ದಿನಕ್ಕೆ ನೂರು ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು.

- Advertisement -

You May Like

More