Film News

ಆಚಾರ್ಯ ಚಿತ್ರದಲ್ಲಿ ಸಿದ್ದನ ಪಾತ್ರಧಾರಿಯಾಗಿ ಮೆಗಾ ಹಿರೋ!

ಹೈದರಾಬಾದ್: ಬಹುನಿರೀಕ್ಷಿತ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಆಚಾರ್ಯ ಚಿತ್ರದಲ್ಲಿ ಸಿದ್ದ ಎಂಬ ಪಾತ್ರದಲ್ಲಿ ಮತ್ತೋರ್ವ ಮೆಗಾ ಫ್ಯಾಮಿಲಿ ನಟ ಎಂಟ್ರಿ ಕೊಟ್ಟಿದ್ದು, ಚಿತ್ರದ ಮೇಲೆ ನಿರೀಕ್ಷೆ ಇನಷ್ಟು ಹೆಚ್ಚಿಸಿದೆ.

ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆಚಾರ್ಯ ಚಿತ್ರ ಈಗಾಗಲೇ ಸಿನಿರಂಗದಲ್ಲಿ ಟ್ರೆಂಡಿಂಗ್ ಸೃಷ್ಟಿ ಮಾಡಿದೆ. ಸೈರಾ ನರಸಿಂಹ ರೆಡ್ಡಿ ಸಿನೆಮಾದ ಬಳಿಕ ಆಚಾರ್ಯ ಚಿತ್ರಕ್ಕಾಗಿ ಮೆಗಾ ಅಭಿಮಾನಿಗಳು ಕಾಯುತ್ತಿತ್ತು, ಕೊರೋನಾ ದಿಂದಾಗಿ ಸಿನೆಮಾ ತಡವಾಗಿದೆ. ಇನ್ನೂ ಈ ಮೆಗಾ ಬಜೆಟ್ ಸಿನೆಮಾಗೆ ಮೆಗಾ ಫ್ಯಾಮಿಲಿಯ ಮತ್ತೋರ್ವ ನಟ ಎಂಟ್ರಿ ಕೊಟ್ಟಿದ್ದಾರೆ.

ಆಚಾರ್ಯ ಚಿತ್ರದಲ್ಲಿ ಮೆಗಾಸ್ಟಾರ್ ಕುಟುಂಬ ರಾಮ್ ಚರಣ್ ಸಹ ಬಣ್ಣ ಹಚ್ಚಲಿದ್ದಾರೆ ಎಂಬ ಮಾತುಗಳು ಸುಮಾರು ದಿನಗಳ ಹಿಂದೆಯಿಂದ ಪ್ರಚಲಿತದಲ್ಲಿತ್ತು. ಆದರೆ ಪಾತ್ರದ ಕುರಿತು ಯಾವುದೇ ಮಾಹಿತಿ ಇರಲಿಲ್ಲ. ಇದೀಗ ಚಿತ್ರತಂಡ ರಾಮ್ ಚರಣ್ ಪಾತ್ರವನ್ನು ರಿವೀಲ್ ಮಾಡಿದೆ. ರಾಮ್ ಚರಣ್ ಸಿದ್ದ ಎಂಬ ಪಾತ್ರದಲ್ಲಿ ನಟಿಸಲಿದ್ದು, ಚಿರಂಜೀವಿ ಗುರುವಿನ ಪಾತ್ರ ಎಂದು ಹೇಳಲಾಗುತ್ತಿದೆ ಆದರೆ ಖಚಿತ ಮಾಹಿತಿ ಸಿಕ್ಕಿಲ್ಲ.

ಕೊರೋನಾ ಲಾಕ್‌ಡೌನ್ ಸಡಿಲಿಕೆ ನಂತರ ಆಚಾರ್ಯ ಶೂಟಿಂಗ್ ಆರಂಭವಾಗಿದ್ದು, ರಾಮ್ ಚರಣ್ ರವರಿಗೂ ಸಹ ಕೊರೋನಾ ಸೋಂಕು ತಗುಲಿತ್ತು. ಇದೀಗ ಸೋಂಕಿನಿಂದ ಮುಕ್ತರಾದ ರಾಮ್ ಚರಣ್ ಶೂಟಿಂಗ್ ಸೆಟ್‌ಗೆ ಬಂದಿದ್ದಾರೆ. ಇನ್ನೂ ನಟ ರಾಮ್ ಚರಣ್ ತಮ್ಮ ತಂದೆಯೊಂದಿಗೆ ಕಾಣಿಸಿಕೊಳ್ಳಲಿರುವ ೪ನೇ ಚಿತ್ರ ಇದಾಗಿದೆ. ಮೊದಲಿಗೆ ಮಗಧೀರ ಚಿತ್ರ ಹಾಡೊಂದರಲ್ಲಿ, ನಂತರ ಬ್ರೂಸ್ಲೀ ಸಿನೆಮಾದ ಕ್ಲೈಮ್ಯಾಕ್ಸ್ ನಲ್ಲಿ, ನಂತರ ಖೈದಿ ನಂ.150 ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು.

ಅಂದಹಾಗೆ ಈ ಚಿತ್ರಕ್ಕಾಗಿ ಸುಮಾರು ೨೦ ಎಕರೆ ಪ್ರದೇಶದಲ್ಲಿ ದೇವಾಲಯದ ಸೆಟ್ ನಿರ್ಮಾಣ ಮಾಡಿದ್ದು, ಕೋಟ್ಯಂತರ ಖರ್ಚಿನಲ್ಲಿ ನಿರ್ಮಾಣ ಮಾಡಿದ ಸೆಟ್ ಇಲ್ಲಿಯವರೆಗೂ ಭಾರತದ ಸಿನಿರಂಗದಲ್ಲಿ ನಿರ್ಮಾಣ ಆಗಿಲ್ಲ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ.

Trending

To Top